ಅಣ್ಣ ತಂಗಿಯರ ಮಧುರ ಬಾಂಧವ್ಯವನ್ನು ವರ್ಣಿಸಲು ಪದಗಳೇ ಸಾಲದು. ರಕ್ಷಾ ಬಂಧನದ ದಿನದಂದು ತಂಗಿ ತನ್ನ ಅಣ್ಣನಿಗೆ ರಾಖಿಯೆಂಬ ಶ್ರೀರಕ್ಷೆ ಯನ್ನು ಕಟ್ಟಿ ಸದಾಕಾಲ ಸುಖ, ಶಾಂತಿ, ಸಮೃದ್ಧಿ ಯಿಂದ , ಯಾವುದೇ ಕಾರಣಕ್ಕೂ ಕಷ್ಟ-ನಷ್ಟ ಹತ್ತಿರ ಸುಳಿಯುದಿರಲಿ ಎಂದು ಪ್ರಾರ್ಥಿಸುವುದು, ಅದೇ ರೀತಿ ಅಣ್ಣ ನಾದವನು ತನ್ನ ತಂಗಿಗೆ ಅಕ್ಕರೆ, ಪ್ರೀತಿ, ಮಮತೆ, ಸದಾ ಸುರಕ್ಷತೆಯನ್ನು ಬಯಸುವ ಅಪ್ಪನ ಪ್ರತಿರೂಪವೇ ಅಣ್ಣ.
ನನಗೆ ಅಣ್ಣ ಯೆಂದರೇ ಆಕಾಶ. ಅವನಿಗೂ ನಾನೆಂದರೆ ಜೀವ. ಅಣ್ಣ ತಂಗಿಯ ಸಂಬಂಧವೇ ಹಾಗೆ ಅಲ್ಲಿ ಅಂತರಾಳದ ಪ್ರೀತಿ, ಅಲ್ಪ ಹೊಟ್ಟೆಕಿಚ್ಚು
ಒಮ್ಮೊಮ್ಮೆ ಹೊಡೆದಾಟ. ಅದೊಂದು ದಿನ ನಾನು ಅಣ್ಣನಿಗೆ ರಾಖಿ ಕಟ್ಟಿ, ಅವನಲ್ಲಿ ಉಡುಗೊರೆಯಾಗಿ ಕೈ ಗಡಿಯಾರವನ್ನು ನೀಡುವಂತೆ ಕೇಳಿದೆ. ಅದಕ್ಕೆ ಅಣ್ಣ ಒಪ್ಪಿಕೊಂಡ. ನಾನು ಅಣ್ಣನ ಬರುವಿಕೆಗಾಗಿ ಕಾಯುತ್ತಾ ಇದ್ದೆ. ಸೂರ್ಯ ಮುಳುಗುವ ಹೊತ್ತು, ಅಣ್ಣ ಕಾಲೇಜಿನಿಂದ ಮನೆಗೆ ಬಂದ. ಆದರೆ ನನಗೆ ಮಾತ್ರ ಏನನ್ನೂ ಉಡುಗೊರೆಯಾಗಿ ತರಲಿಲ್ಲ. ಕಾರಣ ಇಷ್ಟೇ ಅವನಲ್ಲಿ ಉಡುಗೊರೆಯಾಗಿ ಕೈ ಗಡಿಯಾರವನ್ನು ನೀಡಲು ಸಾಧ್ಯವಾಗುವಷ್ಟು ಕಾಸಿರಲಿಲ್ಲ , ಬರೀ ಒಂದು ಚಾಕೊಲೇಟ್ ತಂದು ಕೊಟ್ಟ . ಹಣದ ಅರಿವಿಲ್ಲದ ನನಗೆ ಅಣ್ಣ ನಲ್ಲಿ ಕೋಪ ಬಂತು.
ಅಣ್ಣನ ಕಾಲೇಜು ಐಡಿ ಕಾರ್ಡನ್ನು ನಾನು ನಾನು ಬಿಚ್ಚಿಟ್ಟು ಬಿಟ್ಟೆ. ಇದರಿಂದಾಗಿ ನನ್ನ ಅಣ್ಣ ಕಾಲೇಜಿನಿಂದ ಇಡೀ ದಿನ ತರಗತಿಯಿಂದ ಹೊರಗೆ ಇರುವಂತೆ ಆಯಿತು. ಅಣ್ಣ ಸಂಜೆ ವೇಳೆ ಮನೆಗೆ ಬಂದು ಅಮ್ಮನಲ್ಲಿ ಹೇಳುವುದನ್ನು ನಾನು ಕೇಳಿದೆ. ಒಂದು ಕಡೆ ಸಂತೋಷ, ಇನೋಂದು ಕಡೆ ದುಃಖ ಉಮ್ಮಳಿಸಿ ಬಂತು. ಈ ಬಾಂಧವ್ಯ ಬೆಸೆಯುವ ದಿನದ ಸಂಕೇತವನ್ನು ಎಂದು ಮರೆಯುವಂತಿಲ್ಲ. ಈ ಬಾಂಧವ್ಯ ಬೆಸೆಯುವ ದಿನದ ಸಂಕೇತವಾದ ಇಂದು ನಾವು ಸ್ವದೇಶಿ ರಾಖಿ ಯನ್ನು ಕಿರಿದಿಸೋಣ/ತಯಾರಿಸಿ ಅಣ್ಣ ತಂಗಿಯರ ಮಧುರ ಬಾಂಧವ್ಯವನ್ನು ಬೆಸೆಯುವುದರೊಂದಿಗೆ , ದೇಶದ ಹಿತವನ್ನು ಕಾಯುವಲ್ಲಿ ನಾವೆಲ್ಲರೂ ಒಂದಾಗೋಣ.
ರಂಜಿತಾ ರಾಜೇಂದ್ರ ಪ್ರಭು, ಬೆಂಗಳೂರು