Advertisement
ವೇದಗಳಲ್ಲಿ “ಗೋಮಯೇ ವಸತೇ ಲಕ್ಷ್ಮೀ’ ಎಂದು ಹೇಳಲಾಗಿದೆ. ಭಾರತದಲ್ಲಿ ಹಸು ಪೂಜನೀಯ ಸ್ಥಾನ ಪಡೆದಿದೆ. ಜನಜೀವನದ ಆರಂಭದಿಂದಲೂ ಅದರ ಸಾಕಾಣಿಕೆ ನಮ್ಮ ಸಾಮಾಜಿಕ ಮತ್ತು ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಆಧುನಿಕತೆಯ ಸಂದರ್ಭದಲ್ಲಿ ಗೋಮಯ (ಸಗಣಿ)ದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ವಿಭಿನ್ನ ಪ್ರಯತ್ನವೊಂದು ಈಗ ಸಣ್ಣ ಉದ್ಯಮದ ಸ್ವರೂಪ ಪಡೆದಿದೆ. ಈ ಉದ್ಯಮ ಆರಂಭಿಸಿರುವ ಅನಿರುದ್ಧ ದಿಂಡೋರೆ ಹೇಳುವುದು ಹೀಗೆ:
Related Articles
Advertisement
ಸ್ತ್ರೀ ಸಬಲೀಕರಣದತ್ತ ಹೆಜ್ಜೆ…
ಗೋಮಯ ಉತ್ಪನ್ನಗಳೇ ಒಂದು ವಿಶೇಷವಾದರೆ, ಇದನ್ನು ತಯಾರಿಸುವ ಮೂಲಕ ಆರ್ಥಿಕವಾಗಿ ಗ್ರಾಮೀಣ ಮಹಿಳೆಯರು ಸಬಲರಾಗುತ್ತಿದ್ದಾರೆ. ಗೋ ಸಂವರ್ಧನ ಕೇಂದ್ರದಲ್ಲಿ ಸದ್ಯ 40 ಗ್ರಾಮೀಣ ಮಹಿಳೆಯರ ಗುಂಪು ಈ ಕಾಯಕದಲ್ಲಿ ತೊಡಗಿಕೊಂಡಿದೆ. ದಿನದ ಒಂದಿಷ್ಟು ಸಮಯವನ್ನು ಈ ಕೆಲಸಕ್ಕಾಗಿ ಅವರು ಮೀಸಲಿಡುತ್ತಾರೆ. ನನ್ನ ಪತ್ನಿ ಅಪರಾಜಿತಾ ಅವರಿಗೆ ಉತ್ಪನ್ನಗಳ ತಯಾರಿಕೆಯ ತರಬೇತಿ ನೀಡುತ್ತಾರೆ. ನಂತರ ಕಚ್ಚಾ ವಸ್ತುಗಳನ್ನು ಒಟ್ಟುಗೂಡಿಸುವುದರಿಂದ ಉತ್ಪನ್ನಗಳ ಪ್ಯಾಕಿಂಗ್‌ವರೆಗೂ ಎಲ್ಲವೂ ಅವರದ್ದೇ ಕಾರ್ಯ. ಉತ್ಪನ್ನಗಳ ಮಾರಾಟದಿಂದ ಬಂದ ಲಾಭದಲ್ಲಿ ಅವರಿಗೂ ಪಾಲು ನೀಡುತ್ತೇವೆ. ಸಾಮಾನ್ಯವಾಗಿ ತಿಂಗಳಿಗೆ 1500 ರೂ.ಕ್ಕೂ ಹೆಚ್ಚು ಆದಾಯವನ್ನು ಈ ಮಹಿಳೆಯರು ಗಳಿಸುತ್ತಾರೆ. ಇದು ಸ್ತ್ರೀ ಸ್ವಾವಲಂಬನೆಯೆಡೆಗೆ ಹಾಕಿದ ದಾಪುಗಾಲು ಎನ್ನಬಹುದು.
20 ರೂ.ನಿಂದ 1500 ರೂ.ವರೆಗೆ…
ಈ ವರ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ನಮ್ಮ ಕೇಂದ್ರದಿಂದ ತಯಾರಾದ ಗೋಮಯ ಪ್ರಣತಿಗಳು ಅತಿಹೆಚ್ಚು ಮಾರಾಟವಾಗಿದ್ದವು. ಉಳಿದಂತೆ ಗೋಮಯದ ಲಕ್ಷ್ಮೀ ತೋರಣ, ವಾಸ್ತು ಅಲಂಕಾರಿಕ ಸಾಮಗ್ರಿ, ರಾಖಿ, ಆಭರಣ ಸೇರಿದಂತೆ ನಮ್ಮ ಉತ್ಪನ್ನಗಳು ಈಗ ಕರ್ನಾಟಕವಷ್ಟೇ ಅಲ್ಲದೇ ಮಹಾರಾಷ್ಟ್ರಕ್ಕೂ ವ್ಯಾಪಿಸಿವೆ. ಗ್ರಾಹಕರಿಂದ ಉತ್ತಮ ಸ್ಪಂದನೆ, ಬೇಡಿಕೆ ಬರುತ್ತಿರುವುದು ನಮ್ಮ ಈ ಕೆಲಸಕ್ಕೆ ಮತ್ತಷ್ಟು ವೇಗ ಒದಗಿಸಿದಂತಾಗಿದೆ. ನಮ್ಮಲ್ಲಿ 20ರೂ. ನಿಂದ 1500 ರೂ. ವರೆಗೆ ವಿವಿಧ ಉತ್ಪನ್ನಗಳು ಲಭ್ಯ. ಚಿಕ್ಕೋಡಿಯ ಗೋ ಸಂವರ್ಧನ ಅನುಸಂಧಾನ ಕೇಂದ್ರದಲ್ಲಿ ಅವು ಸಿಗುತ್ತವೆ. ಬೇರೆ ಊರಿನವರು ದೂರವಾಣಿ (7620159335) ಮೂಲಕ ಸಂಪರ್ಕಿಸಿದರೆ ಅವರಿಗೆ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇವೆ.
ಗೋಮಯ ರಾಖಿ ತಯಾರಿಕೆ ಹೀಗೆ…
ಚಿಕ್ಕೋಡಿಯ ಗೋ ಕೇಂದ್ರದಲ್ಲಿ ಪ್ರತಿ ವರ್ಷ ಸರಾಸರಿ 5000 ರಾಖಿಗಳು ತಯಾರಾಗುತ್ತವೆ. ಇದರ ತಯಾರಿಯ ವಿಧಾನ ಅತ್ಯಂತ ಸರಳ. ಹಸುವಿನ ಸಗಣಿ, ಮುಲ್ತಾನಿ ಮಣ್ಣು, ನೈಸರ್ಗಿಕ ಅಂಟು, ನೀರಿನ ಆಧಾರಿತ ಬಣ್ಣಗಳು, ಸಾಮಾನ್ಯ ದಾರ- ಈ ಕಚ್ಚಾ ವಸ್ತುಗಳಿಂದ ರಾಖಿ ಸಿದ್ಧವಾಗುತ್ತದೆ. ಮೊದಲು ಸಗಣಿ ಯನ್ನು ಒಣಗಿಸಿ, ಪುಡಿ ಮಾಡುತ್ತೇವೆ. ನಂತರ ಅದಕ್ಕೆ ಮುಲ್ತಾನಿ ಮಣ್ಣು, ಅಂಟು ಸೇರಿಸಿ ಅದರ ಮಿಶ್ರಣ ಮಾಡಿಕೊಳ್ಳುತ್ತೇವೆ. ಹೂವು ಸೇರಿದಂತೆ ವಿವಿಧ ವಿನ್ಯಾಸಗಳ ಅಚ್ಚಿನಲ್ಲಿ ಮಿಶ್ರಣ ಹಾಕಿ, ಹೊರತೆಗೆದ ಕೂಡಲೇ ದಾರದೊಂದಿಗೆ ಕೂಡಿಸಲಾಗುತ್ತದೆ. ನಂತರ ಅದನ್ನು ಒಣಗಿಸುವ ಪ್ರಕ್ರಿಯೆ. ನಂತರ ಅದಕ್ಕೆ ಬಣ್ಣ ಲೇಪಿಸಿ, ಅಲಂಕಾರಿಕ ವಸ್ತುಗಳಿಂದ ಅಂತಿಮ ಸ್ಪರ್ಶ ನೀಡಿ, ಪ್ಯಾಕಿಂಗ್ ಮಾಡುತ್ತೇವೆ.
-ಅನಿರುದ್ಧ ದಿಂಡೋರೆ, ಚಿಕ್ಕೋಡಿ