ಉಡುಪಿ: ರಕ್ಷಾ ಬಂಧನ ಕೇವಲ ಅಣ್ಣ – ತಂಗಿಯರ ನಡುವಿನ ಭಾಂದವ್ಯದ ಹಬ್ಬವಾಗಿರದೆ, ರಾಷ್ಟ್ರೀಯತೆಯ ಸಂಕೇತವಾಗಿದ್ದು ಜಾತಿ ಧರ್ಮ ಮತ್ತು ವೈಯುಕ್ತಿಕ ಸಂಬಂಧಗಳನ್ನು ಮೀರಿ ರಾಷ್ಟ್ರದ ಎಲ್ಲ ಜನರು ಒಟ್ಟಾಗಿ ಸೇರಿ ಭಾಂದವ್ಯ ಬೆಸೆಯುವ ಹಬ್ಬವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ನಗರ ವ್ಯವಸ್ಥಾಪಕ ಸಂಜೀವ್ ನಾಯಕ್ ಹೇಳಿದರು.
ಅವರು ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ನಡೆದ ರûಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಾದ್ಯಂತ ವ್ಯವಸ್ಥಿತವಾಗಿ ಆತಂಕಕಾರಿ ಭೌತಿಕ ಆಕ್ರಮಣಗಳು ನಡೆಯುತ್ತಿದ್ದು ಹಿಂದೂ ಸಂಸ್ಕೃತಿ, ಆಚರಣೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಚೀನದಂತಹ ದೇಶಗಳಿಂದ ಆರ್ಥಿಕ ಆಕ್ರಮಣ, ಪಾಕಿಸ್ಥಾನದಿಂದ ಗಡಿಯಲ್ಲಿನ ಕಿರುಕುಳಗಳು ದೇಶಕ್ಕೆ ದೊಡ್ಡ ಸವಾಲಾಗಿದ್ದು ಜನತೆ ಜಾಗರೂಕರಾಗಿ ತಕ್ಕ ಉತ್ತರ ನೀಡಿ ಸ್ಪಂದಿಸುವ ಕಾಲಘಟ್ಟ ಇದಾಗಿದೆ ಎಂದರು. ಜಿÇÉಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ನಗರಾಧ್ಯಕ್ಷ ಪ್ರಭಾಕರ್ ಕೆ., ಪ್ರ. ಕಾರ್ಯಕದರ್ಶಿ ಜಗದೀಶ್ ಆಚಾರ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆé ರಜನಿ ಹೆಬ್ಟಾರ್, ಪ್ರ. ಕಾರ್ಯದರ್ಶಿ ದಯಾಶಿನಿ, ತಾ. ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ನಗರಸಭಾ ಸದಸ್ಯೆ ರಶ್ಮಿತಾ ಬಾಲಕೃಷ್ಣ , ನಾಯಕಿಯರಾದ ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಭಾರತಿ ಚಂದ್ರಶೇಖರ್ ಉಪಸ್ಥಿತರಿದ್ದರು.