Advertisement

ಭ್ರಾತೃ ಬಂಧನದ ರಕ್ಷೆ : ಅಕ್ಕನಿಗಾಗಿ ಮೂತ್ರಪಿಂಡ ನೀಡಿದ ತಮ್ಮ

01:03 AM Aug 22, 2021 | Team Udayavani |

ಹೊಸದಿಲ್ಲಿ: ಭ್ರಾತೃತ್ವ ಭಾವದ ದ್ಯೋತಕವೆನಿಸಿರುವ ರಕ್ಷಾಬಂಧನ ಹಬ್ಬ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲೇ ಸಹೋದರ – ಸಹೋದರಿಯರು ಅಂಗಾಂಗಗಳನ್ನು ದಾನ ಮಾಡಿ ತಮ್ಮ ಅಮೂಲ್ಯ ಸಹೋದರ, ಸಹೋದರಿ ಯರಿಗೆ ಜೀವದಾನ ಮಾಡಿದ ಎರಡು ಅಪರೂಪದ ಘಟನೆಗಳು ಜರಗಿವೆ.

Advertisement

ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ಯಕೃತ್‌ ಸಮಸ್ಯೆಯಿಂದ ವಿಷಮ ಸ್ಥಿತಿ ತಲುಪಿದ್ದ ಬಾಲಕನನ್ನು ಆತನ ಇಬ್ಬರು ಅಕ್ಕಂದಿರು ತಮ್ಮ ಯಕೃತ್‌ಗಳ ಭಾಗ ಗಳನ್ನು ದಾನ ಮಾಡಿ ಕಾಪಾಡಿದ್ದಾರೆ. ಹರಿಯಾಣದ ರೋಹrಕ್‌ನಲ್ಲಿ ತಮ್ಮನೊಬ್ಬ ತನ್ನ ಮೂತ್ರಪಿಂಡ ದಾನ ಮಾಡಿ, ಅಕ್ಕನನ್ನು ಬದುಕಿಸಿಕೊಂಡಿದ್ದಾನೆ.

ಬದೌನ್‌ನಲ್ಲಿ  ಭ್ರಾತೃ ವಾತ್ಸಲ್ಯ :

ಯಕೃತ್‌ನ ತೀವ್ರ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹುಡುಗನಿಗೆ ಆತನ ಇಬ್ಬರು ಅಕ್ಕಂದಿರು ತಮ್ಮ ಯಕೃತ್‌ನ ಭಾಗ ದಾನ

ಮಾಡಿದ್ದಾರೆ. ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ಗುರು ಗ್ರಾಮದ ಖಾಸಗಿ ಆಸ್ಪತ್ರೆಯ ವೈದ್ಯರು, ಇದು ದೇಶದ ಮೊದಲ “ಪೀಡಿ ಯಾಟ್ರಿಕ್‌ ಡ್ಯುಯಲ್‌ ಲೋಬ್‌ ಲಿವರ್‌ ಟ್ರಾನ್ಸ್‌ಪ್ಲಾಂಟ್‌’ ಎಂದಿದ್ದಾರೆ. ಜುಲೈಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಮೂವರೂ ಆರೋಗ್ಯವಾಗಿದ್ದಾರೆ.

Advertisement

ಅಕ್ಕನಿಗೆ ಮೂತ್ರಪಿಂಡ ನೀಡಿದ ತಮ್ಮ ! :

ಕಿಡ್ನಿ ಸಮಸ್ಯೆಯಿಂದ ಸಾಯುವ ಸ್ಥಿತಿ ತಲುಪಿದ್ದ 31 ವರ್ಷದ ಮಹಿಳೆಯೊಬ್ಬರಿಗೆ ಅವರ ಸಹೋದರನೇ ತನ್ನ ಒಂದು ಮೂತ್ರಪಿಂಡ ದಾನ ಮಾಡಿ, ಆಕೆಯನ್ನು ಉಳಿಸಿಕೊಂಡಿದ್ದಾನೆ. ಮೂಲತಃ ರೋಹrಕ್‌ನ ಈ ಮಹಿಳೆ ದಿಲ್ಲಿಯ ಆಕಾಶ್‌ ಹೆಲ್ತ್‌ಕೇರ್‌ ಆಸ್ಪತ್ರೆಯಲ್ಲಿ ಐದು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅಧಿಕ ರಕ್ತದೊತ್ತಡ, ಕ್ಷಯ, ಹೃದಯ ಸಮಸ್ಯೆಗಳೂ ಇದ್ದವು. ಅದೃಷ್ಟವಶಾತ್‌ ಅವರ ಸಹೋದರನ ಕಿಡ್ನಿ ಮಹಿಳೆಗೆ ಸರಿಹೊಂದಿಕೆ ಯಾಗಿದ್ದು, ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next