ತಂಗಿ ಅವನಿಗೆ ಜೀವ. ಅವಳಿಗೆ ಅಣ್ಣ ಎಂದರೆ ಭಾವ. ಪರಸ್ಪರ ತನ್ನದೇ ಒಂದು ಭಾಗ ಎನ್ನುವ ಪ್ರೇಮ. ಮೊಗೆದಷ್ಟು ಪ್ರೀತಿ, ಸ್ವಲ್ಪ ಹೊಟ್ಟೆಕಿಚ್ಚು. ಒಮ್ಮೆ ಆಟ, ಇನ್ನೊಮ್ಮೆ ಹೊಡೆದಾಟ. ಅಣ್ಣ- ತಂಗಿ ಬಾಂಧವ್ಯ ಇದೇ ಅಲ್ಲವೇ? ಇವೆಲ್ಲವನ್ನು ಮೀರಿದ ಬಾಂಧವ್ಯವನ್ನು ವರ್ಣಿಸುವ ಅಕ್ಷರಗಳು ವರ್ಣಮಾಲೆಯಲ್ಲೇ ಇಲ್ಲ. ತಾಯಿಯ ಮಮತೆ, ತಂದೆಯ ಭದ್ರತೆ, ಅಣ್ಣನ ರಕ್ಷಣೆ- ಪ್ರೀತಿ ಹೆಣ್ಣಿಗೆ ಬಲ.
ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ರûಾ ಬಂಧನ ಒಡಹುಟ್ಟಿದವರ ಹಾಗೂ ಬಾಂಧವ್ಯ ಬೆಸೆಯುವವರ ಪಾಲಿಗೆ ಪವಿತ್ರ ಬಂಧನ. ರಾಖೀಯ ಸಂಬಂಧ ಕೇವಲ ದಾರದ ಬಂಧವಲ್ಲ, ಅದು ಪ್ರೀತಿಯ ಬಂಧನ. ಅಣ್ಣ ತಂಗಿಯರ ನವಿ ರಾದ ಭಾವನೆಗಳನ್ನು ಗಟ್ಟಿಗೊಳಿಸುವ ಬಂಧನ. ಸಮಾಜದ ದುಷ್ಟ ಶಕ್ತಿಗಳಿಂದ ತನ್ನನ್ನು ರಕ್ಷಿಸೆಂದು ಸಹೋದರನ ಮುಂಗೈಗೆ ಸಹೋದರಿ ರಾಖೀ ಕಟ್ಟುತ್ತಾಳೆ. ಅವಳನ್ನು ರಕ್ಷಿಸುವ ದೃಢ ಸಂಕಲ್ಪದಲ್ಲಿ ಸಹೋದರ ರಾಖೀ ಕಟ್ಟಿಸಿಕೊಳ್ಳುತ್ತಾನೆ. ಅಣ್ಣ ತಮ್ಮಂದಿರ ಶ್ರೇಯೋಭಿವೃದ್ಧಿ ಸಹೋದರಿಯ ಬಯಕೆ. ಅವಳಿಗೆ ನೆರಳಾಗಿ ನಿಲ್ಲುವುದು ಅಣ್ಣನ ಆಸೆ.
ಶ್ರಾವಣ ಮಾಸದ ಹುಣ್ಣಿಮೆಯಂದು ರûಾ ಬಂಧನ. ಪ್ರೇಮಭಾವ ಇಟ್ಟು ರಕ್ಷಣೆ ಮಾಡುವುದು ರಾಖೀಯ ಭಾವಾರ್ಥ. ಸಹೋದರಿ ಸಹೋದರನಿಗೆ ರಾಖೀ ಕಟ್ಟಿ, ಹಣೆಗೆ ತಿಲಕವಿಟ್ಟು ಸಿಹಿ ತಿನ್ನಿಸುವುದು. ಸಹೋದರ ಅವಳಿಗೆ ಕಾಣಿಕೆ ನೀಡುವುದು ರೂಢಿ. ರಾಖೀಯ ದಾರ ನಿಯಮ ಹಾಗೂ ಸಂಯ ಮದ ಸೂಚಕ, ತಿಲಕವಿಡು ವುದು ಆತ್ಮಜ್ಯೋತಿಯ ಪ್ರತೀಕ. ಬಾಯಿಗೆ ಸಿಹಿ ತಿನ್ನಿಸು ವುದು ಮಧುರ ನುಡಿಗಳ ಸಂಕೇತ. ಕಾಣಿಕೆ ನೀಡುವುದರ ಅರ್ಥ ದುರ್ಗುಣ, ದುಶ್ಚಟಗಳನ್ನು ದೂರ ಮಾಡುವುದು. ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದ ಈ ಹಬ್ಬ ಈಗ ದಕ್ಷಿಣ ಭಾರತದಲ್ಲೂ ಪ್ರಸಿದ್ಧಿ. ಈ ಹಬ್ಬವು ನೂಲ ಹುಣ್ಣಿಮೆ ಎಂದೂ ಕರೆಸಿಕೊಳ್ಳುತ್ತದೆ. ಈ ದಿನ ಬ್ರಾಹ್ಮಣರು ಜನಿವಾರವನ್ನು ಬದಲಿಸಿ ಹೊಸ ಜನಿವಾರ ಹಾಕುವ ಸಂಪ್ರದಾಯವಿದೆ. ಶುಭ ಮುಹೂರ್ತದಲ್ಲಿ ಉಪದೇಶ, ಯಜ್ಞ ಸಹಿತ ತಂದೆಯಿಂದ ಮಗನಿಗೆ ಅನುಮೋದಿಸುವ ದಾರವೇ ಜನಿವಾರ, ಉಪವೀತ, ಯಜೊnàಪವೀತ. ಒಮ್ಮೆ ಧರಿಸಿದ್ದನ್ನು ತ್ಯಜಿಸಿ ಅಗ್ನಿಕಾರ್ಯದ ಮುಖೇನ ಹೊಸದನ್ನು ಧರಿಸುವ ಕ್ರಮವೇ ಉಪಾಕರ್ಮ.
ಈಗ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ರಾಖೀಯ ಸೊಬಗು. ಒಂದಕ್ಕಿಂತ ಒಂದು ಭಿನ್ನ. ಈಗಂತೂ ಆನ್‌ಲೈನ್ ಮೂಲಕ ಕೂಡ ರಾಖೀಯನ್ನು ಖರೀ ದಿಸೋ ಸೌಲಭ್ಯ. ಆದರೆ ರûಾ ಬಂಧನ ಆಧುನೀಕರಣಕ್ಕೆ ಸಿಲುಕಿ ತನ್ನ ಬೆಲೆ ಕಳೆದು ಕೊಳ್ಳುತ್ತಿದೆ. ರûಾ ಬಂಧನ ಈಗ ಫ್ಯಾಷನ್. ಕೈತುಂಬ ರಾಖೀ ಕಟ್ಟಿಸಿ ಕೊಳ್ಳುವುದು ಹೆಗ್ಗಳಿಕೆ. ಹುಡುಗಿಯರ ಸ್ನೇಹ ಸಂಪಾದನೆಯ ಉದ್ದೇಶದಿಂದಲೇ ರಕ್ಷೆ ಕಟ್ಟಿಸಿಕೊಳ್ಳುವವರೂ ಇದ್ದಾರೆ. ಹುಡುಗಿಯರ ಕಥೆ ಬೇರೆಯೇ. ಉಡುಗೊರೆ ಪಡೆಯುವ ಸಲುವಾಗಿ ರಾಖೀ ಕಟ್ಟುವವರು ಕೆಲವರಾದರೆ ಪೋಲಿ ಹುಡುಗರ ಕಾಟ ತಪ್ಪಿಸಿಕೊಳ್ಳಲು ರಾಖೀ ಕಟ್ಟುವವರು ಇನ್ನು ಕೆಲವರು. ಇತ್ತೀಚಿನ ದಿನಗಳಲ್ಲಿ ಒಂದು ದಿನದ ಮಟಿ¤ಗೆ ಮಾತ್ರ ರಾಖೀ ಬ್ರದರ್ಸ್ ಆಗುತ್ತಿರುವುದು ವಿಪರ್ಯಾಸ?!
ಇಂಥಾ ರಾಖೀಗೆ ಏನು ಬೆಲೆ?: ಸಂಸ್ಕೃತಿಗಳ ತವರಿನಲ್ಲೇ ನೆಲೆಸಿರುವ ನಾವು ವಿದೇಶೀಯರ ಅನುಕರಣೆ ಮಾಡುತ್ತಾ ನಿಜವಾದ ಸ್ನೇಹ, ಆತ್ಮೀಯತೆಯಿಂದ ದೂರ ಸರಿಯುತ್ತಿದ್ದೇವೆ, ಪರಿವಾರಗಳು ಒಡೆಯುತ್ತಿರುವಾಗ, ಸಂಬಂಧಗಳು ತಮ್ಮ ಕೊಂಡಿ ಕಳಚಿಕೊಳ್ಳುತ್ತಿರುವಾಗ ಸ್ನೇಹ ಮತ್ತು ಪ್ರೀತಿ ಭಾವಗಳು ಒತ್ತಾಯಪೂರ್ವಕವಾಗಿ ತೋರಿಕೆಗೆ ಪ್ರದರ್ಶಿಸಲ್ಪಡುತ್ತಿರುವಾಗ ರûಾಬಂಧನದಲ್ಲಿ ಅಡಗಿರುವ ಪ್ರೀತಿ ಮತ್ತು ತ್ಯಾಗದ ವಾಸ್ತವಿಕ ಅರ್ಥವನ್ನು ಸಾರ್ವತ್ರಿಕಗೊಳಿಸುವುದು ಅನಿವಾರ್ಯ. ಸ್ತ್ರೀ ದೌರ್ಜನ್ಯ, ಶೋಷಣೆ, ಅತ್ಯಾಚಾರ ಮುಂತಾದ ಕೃತ್ಯಗಳು ಸಾಮಾನ್ಯವಾಗಿರುವಾಗ ಈ ಸಮಾಜದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಅತೀ ಅಗತ್ಯ. ಭಾತೃತ್ವದ ಭಾವನೆ ಮರೆತು ಪೈಶಾಚಿಕ ಕೃತ್ಯಗಳೇ ನಡೆಯುತ್ತಿರುವ ಈ ಸಮಾಜದಲ್ಲಿ ಎಲ್ಲ ತಂಗಿಯರ ರಕ್ಷಣೆಯ ಹೊಣೆ ನನ್ನದೆಂಬ ಅಭಯವನ್ನು ನೀಡುವುದರೊಂದಿಗೆ ಈ ಹಬ್ಬವನ್ನು ಆಚರಿಸೋಣ.
ಬನ್ನಿ ಜಾತಿ ಮತ ಭಾಷಾ ಭೇದ ಮರೆತು ರಕ್ತ ಸಂಬಂಧವಿಲ್ಲದಿದ್ದರೂ ಸಹೋದರತ್ವದ ಭಾವನೆಯಿಂದ ಸುಖ ಶಾಂತಿಯನ್ನು ಪಡೆಯೋಣ. ರಕ್ಷೆಯು ಎಲ್ಲರಿಗೂ ರಕ್ಷೆಯನ್ನೀಯಲಿ.
ಸರ್ವೆà ಭವಂತು ಸುಖೀನಃ ಸರ್ವೆà ಸಂತು ನಿರಾಮಯಾಃ |
ಸರ್ವೆà ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ವಾಗ½ವೇತ್ ||
– ವಿದುಷಿ ಅನುಪಮಾ ರಾಘವೇಂದ್ರ
ಪುರಾಣ ಇತಿಹಾಸಗಳಲ್ಲಿ ರಕ್ಷಾ ಬಂಧನದ ಹಿನ್ನೆಲೆ
ಚಿತ್ತೂರಿನ ರಾಣಿ ಕರ್ಣಾವತಿ ಮೊಗಲ್ ಸುಲ್ತಾನ ಹುಮಾಯೂನನಿಗೆ, ಯುದ್ಧದ ಮೊದಲು ಅಲೆಕ್ಸಾಂಡರನ ಪತ್ನಿ ತನ್ನ ಗಂಡನಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಕೇಳಿಕೊಂಡು ಪುರೂರವನಿಗೆ ರಾಖೀ ಕಟ್ಟಿದ ಐತಿಹಾಸಿಕ ಚಿತ್ರಣವಿದೆ.
ಭಗವಾನ್ ಶ್ರೀ ಕೃಷ್ಣನ ಬೆರಳಿನ ರಕ್ತಸ್ರಾವ ತಡೆಯಲು ದ್ರೌಪದಿ ತನ್ನ ಸೀರೆಯ ತುದಿಯನ್ನೇ ಕತ್ತರಿಸಿ ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಯಾಗಿ ಶ್ರೀ ಕೃಷ್ಣನು ಅಕ್ಷಯಾಂಬರವನ್ನೇ ನೀಡಿ ದ್ರೌಪದಿಯ ಮಾನ ಕಾಪಾಡಿದ. ಇದೇ ರûಾ ಬಂಧನ. ಅಣ್ಣ – ತಂಗಿ ಪ್ರೀತಿಯ ದ್ಯೋತಕ. ಒಂದು ಯುದ್ಧದಲ್ಲಿ ರಾಕ್ಷಸರೊಂದಿಗೆ ಸೋಲುಂಡು ಖನ್ನನಾಗಿ ಕುಳಿತಿದ್ದ ಇಂದ್ರನಿಗೆ ಆತನ ಪತ್ನಿ ಗುರು ಬೃಹಸ್ಪತಿಯ ಸಲಹೆಯ ಮೇರೆಗೆ ಶ್ರಾವಣ ಹುಣ್ಣಿಮೆಯಂದು ರೇಷ್ಮೆ ದಾರವನ್ನು ಪೂಜಿಸಿ ಕಟ್ಟುತ್ತಾಳೆ. ಇದರ ಪರಿಣಾಮವಾಗಿ ಇಂದ್ರನು ಯುದ್ಧದಲ್ಲಿ ಜಯ ಹೊಂದುತ್ತಾನೆ. ಇಲ್ಲಿ ರಕ್ಷೆ ರûಾ ಕವಚವಾಯ್ತು. ಒಮ್ಮೆ ಪಾರ್ವತೀದೇವಿ ವಿಷ್ಣುವಿಗೆ ರûಾ ಬಂಧನವನ್ನು ಕಟ್ಟಿ ಅಣ್ಣನಾಗಿ ಸ್ವೀಕರಿಸಿದ್ದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿಗೆ ಅಪಾಯವೊದಗಿದಾಗ ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ. ಒಂದು ಸಂದರ್ಭದಲ್ಲಿ ಬಲಿ ಚಕ್ರವರ್ತಿ ವಿಷ್ಣುವನ್ನು ಪಾತಾಳದಲ್ಲಿ ತನ್ನ ಭಕ್ತಿಯಿಂದಲೇ ಬಂಧಿಸಿಟ್ಟಿದ್ದನಂತೆ. ಆಗ ವಿಷ್ಣುವಿನ ಪತ್ನಿ ಲಕ್ಷ್ಮೀ ಬಲಿಯ ಬಳಿ ಹೋಗಿ ರಕ್ಷೆ ಕಟ್ಟಿ ಸಹೋದರಿಯ ಪ್ರೀತಿ ತೋರಿಸಿದಳು. ಆ ಪ್ರೀತಿಗಾಗಿ ಬಲಿ ವಿಷ್ಣುವನ್ನು ಬಂಧನದಿಂದ ಬಿಡುಗಡೆ ಮಾಡಿದನೆಂಬ ಕಥೆ ಪುರಾಣದಲ್ಲಿದೆ.
ಯೇನ ಬದೊœà ಬಲೀ ರಾಜಾ
ದಾನವೇಂದ್ರೋ ಮಹಾಬಲಹಃ|
ತೇನ ತ್ವಾಮಪಿ ಬಧಾ°ಮಿ ರಕ್ಷೇ ಮಾ
ಚಲ ಮಾ ಚಲ ||
ದಾನವ ವೀರ ಮಹಾ ಪರಾಕ್ರಮಿ ಬಲಿ ಚಕ್ರವರ್ತಿ ಯಾವುದರಿಂದ ಬಂಧಿತನಾದನೋ ಅದೇ ರಕ್ಷೆಯನ್ನು ನಾನು ನಿನಗೆ ಕಟ್ಟುತ್ತೇನೆ. ಅದು ಅಚಲವಾಗಿರಲಿ ಎಂಬ ಸಂಕಲ್ಪದೊಂದಿಗೆ ರಕ್ಷೆಯನ್ನು ಕಟ್ಟುವುದು ಕ್ರಮ.