Advertisement
ಈ ಸ್ಪರ್ಧೆಯಲ್ಲಿ ಭಾರತೀಯ ಲಿಫ್ಟರ್‌ಗಳ ಶ್ರೇಷ್ಠ ನಿರ್ವಹಣೆ ಮುಂದುವರಿದಿದೆ. ಎರಡನೇ ದಿನ 5 ಚಿನ್ನ ಸೀನಿಯರ್ ವಿಭಾಗದಲ್ಲಿ ಎರಡು ಚಿನ್ನ ಸಹಿತ, ಜೂನಿಯರ್ ಮತ್ತು ಯೂತ್ ವಿಭಾಗದಲ್ಲಿ ಭಾರತ ಸ್ಪರ್ಧೆಯ ಎರಡನೇ ದಿನ 5 ಚಿನ್ನ ಜಯಿಸಿದೆ.
ವನಿತೆಯರ 59 ಕೆ.ಜಿ. ವಿಭಾಗದಲ್ಲಿ ಒಟ್ಟು 184 ಕೆ.ಜಿ. ಭಾರ ಎತ್ತಿದ ದವೀಂದರ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. 64 ಕೆ.ಜಿ.ಯಲ್ಲಿ ರಾಖೀ 214 ಕೆ.ಜಿ. ಭಾರ ಎತ್ತಿ ಸ್ವರ್ಣ ಪಡೆದರು. ಸ್ಪರ್ಧೆಯ ಮೊದಲ ದಿನ ಭಾರತ 8 ಚಿನ್ನ ಸಹಿತ 13 ಪದಕ ಜಯಿಸಿತ್ತು. ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಚಿನ್ನ ಗೆದ್ದ ಸಾಧನೆ ಮಾಡಿದ್ದರು.