Advertisement

“ರಾಖಿ’ದರ್ಬಾರ್‌

06:00 AM Aug 22, 2018 | |

ರಾಖಿ ಕೇವಲ ಒಂದು ದಾರವಷ್ಟೇ ಅಲ್ಲ, ಅದು ಭದ್ರತೆಯ ಸಂಕೇತ, ಪ್ರೀತಿಯ ಪ್ರತೀಕ. ಸಹೋದರನ ಆಯಸ್ಸು, ಆರೋಗ್ಯ, ಸಮೃದ್ಧಿಗಾಗಿ ಆಶಿಸುತ್ತಾ, ಸೋದರಿ ಕಟ್ಟುವ ಆ ದಾರಕ್ಕೆ ವಿಶೇಷ ಮಹತ್ವವಿದೆ. ಕೆಂಪು ನೂಲನ್ನು ಕಟ್ಟುವುದರ ಮೂಲಕ ಆಚರಿಸಲ್ಪಡುತ್ತಿದ್ದ ರಕ್ಷಾಬಂಧನ ಹಬ್ಬ, ಈಗ ವರ್ಣರಂಜಿತ ರಾಖೀಗಳಿಂದ ರಾರಾಜಿಸುತ್ತಿದೆ. ಸಣ್ಣ ತಮ್ಮನಿಗೆ ಛೋಟಾ ಭೀಮ್‌ ರಾಖಿ, ಆಫೀಸಿಗೆ ಹೋಗೋ ಅಣ್ಣನಿಗೆ ಸಿಂಪಲ್‌ ರಾಖೀ, ಹೂವಿನ ರಾಖಿ, ಹೊಳೆಯುವ ರಾಖೀ… ಹೀಗೆ ನೂರಾರು ಬಣ್ಣ, ಡಿಸೈನ್‌ಗಳ ರಾಖೀಗಳು ಲಭ್ಯ ಇವೆ. ಆಗಸ್ಟ್‌ 26ರ ಈ ರಕ್ಷಾಬಂಧನದ ವೇಳೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಡಿಸೈನ್‌ಗಳು ಇಲ್ಲಿವೆ… 

Advertisement

– ಮ್ಯೂಸಿಕಲ್‌ ರಾಖಿ
ಕೈ ಮಣಿಕಟ್ಟನ್ನು ಪೂರ್ತಿಯಾಗಿ ಮುಚ್ಚುವಷ್ಟು ದೊಡ್ಡ ಇರುವ ಈ ರಾಖಿ, ನೋಡಲೂ ಅಷ್ಟೇ ಆಕರ್ಷಕ. ಮುಟ್ಟಿದರೆ ಇಂಪಾದ ಸಂಗೀತ ಹೊರ ಹೊಮ್ಮುವಂಥ ರಚನೆಯುಳ್ಳ ಈ ರಾಖೀಯನ್ನು, ಸಂಗೀತಪ್ರಿಯ ಅಣ್ಣನಿಗೆ ಕಟ್ಟಬಹುದು. 

– ಡೈಮಂಡ್‌ ರಾಖಿ
ವಜ್ರವನ್ನು ಹೋಲುವ ಹರಳುಗಳ ಈ ರಾಖಿ ನೋಡಲು ಸಿಂಪಲ್‌ ಮತ್ತು ಕ್ಲಾಸಿ ಆಗಿವೆ. ಕೆಂಪುಬಣ್ಣದ ದಾರದ ಮಧ್ಯದಲ್ಲಿ ಹೊಳೆಯುವ ಹರಳುಗಳನ್ನು ಪೋಣಿಸಿ ಮಾಡಿದ ಈ ರಾಖೀ, ಅಣ್ಣ- ತಂಗಿಯರ ಗಟ್ಟಿ ಅನುಭಂಧದ ಪ್ರತೀಕ.

– ಬ್ರೇಸ್‌ಲೆಟ್‌ ರಾಖಿ
ಇದು ಟು ಇನ್‌ ಒನ್‌ ರಾಖಿ. ಅಂದರೆ, ರಾಖೀಯೂ ಹೌದು, ಬ್ರೇಸ್‌ಲೆಟ್‌ ಕೂಡ ಹೌದು. ಸಿಲ್ವರ್‌ ಕೋಟೆಡ್‌ ಅಥವಾ ಸಂಪೂರ್ಣ ಬೆಳ್ಳಿಯದ್ದೇ ಆಗಿರುವ ಈ ರಾಖಿಯನ್ನು ರಕ್ಷಾಬಂಧನದ ನಂತರ ಬ್ರೇಸ್‌ಲೆಟ್‌ ಆಗಿಯೂ ಧರಿಸಬಹುದು. ಸಹೋದರನಿಗೆ ಯಶಸ್ಸು, ಅದೃಷ್ಟ, ಆರೋಗ್ಯ ಲಭಿಸಲಿ ಎಂದು ತಂಗಿಯರು ಈ ರಾಖಿ ಕಟ್ಟುತ್ತಾರೆ.

– ಗುಲಾಬಿ ಡಿಸೈನ್‌ ರಾಖಿ
ಗುಲಾಬಿ ಹೂವು ಪ್ರೀತಿಯ ಸಂಕೇತ. ಕೆಂಪು ಗುಲಾಬಿ ಹೂವಿನ ವಿನ್ಯಾಸದ ರಾಖಿಯನ್ನು ಸೋದರನಿಗೆ ಕಟ್ಟಿ ಪ್ರೀತಿಯನ್ನು ವ್ಯಕ್ತಪಡಿಸಬಹುದು.

Advertisement

– ಹೂವಿನ ಡಿಸೈನ್‌ ರಾಖಿ
ಇದು ಎಲ್ಲೆಡೆ ಪ್ರಚಲಿತದಲ್ಲಿರುವ ರಾಖಿ. ವಿವಿಧ ಬಗೆಯ ಹೂವಿನ ಆಕಾರ ಹಾಗೂ ಬಣ್ಣದಲ್ಲಿ ಈ ರಾಖೀಗಳು ಲಭ್ಯ. ದಾರದಿಂದಲೇ ಹೂವಿನ ಚಿತ್ತಾರವನ್ನು ನೇಯ್ದು, ನಡುವೆ ಮಣಿಗಳನ್ನು ಪೋಣಿಸಿದ ರಾಖಿಗಳೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. 

– ಕಮಲದ ರಾಖಿ 
ಈ ರಾಖೀಯಲ್ಲಿ, ಕೆಂಪು ದಾರದ ಮಧ್ಯದಲ್ಲಿ, ಬಂಗಾರದ ಬಣ್ಣದ ಕಮಲದ ಡಿಸೈನ್‌ ಇರುತ್ತದೆ. ಪುರಾಣಗಳಲ್ಲಿ ಕಮಲದ ಹೂವನ್ನು ಶ್ರೇಷ್ಠ ಎಂದು ಪರಿಗಣಿಸುವುದರಿಂದ, ಈ ರಾಖಿ ಪವಿತ್ರತೆಯ ಸಂಕೇತವಾಗಿದೆ. 

– ಸೂಪರ್‌ ಮ್ಯಾನ್‌ ರಾಖಿ
ಸೂಪರ್‌ಮ್ಯಾನ್‌ನ ಫ್ಯಾನ್‌ ಆಗಿರೋ ಮುದ್ದು ತಮ್ಮನಿಗೆ ಇಷ್ಟವಾಗುವ ರಾಖೀ ಇದು. ದಾರದ ಮಧ್ಯದಲ್ಲಿ ಬೇರೆ ಬೇರೆ ಡಿಸೈನ್‌ಗಳಿರುವಂತೆ, ಇದರಲ್ಲಿ ಸೂಪರ್‌ಮ್ಯಾನ್‌ನ ಸಂಕೇತವಾದ “ಎಸ್‌’ ಆಕೃತಿ ಇದೆ. 

– ನವಿಲಿನ ರಾಖಿ
ನವಿಲಿನ ಡಿಸೈನ್‌ನ ಮೆಹೆಂದಿ, ಕಿವಿಯೋಲೆ, ಸೀರೆ, ಟ್ಯಾಟೂ..ಹೀಗೆ ಫ್ಯಾಷನ್‌ ಜಗತ್ತಿನ ಫೇವರಿಟ್‌ ಪಕ್ಷಿ ನವಿಲು. ಈಗ ನವಿಲಿನ ಡಿಸೈನ್‌ನ ರಾಖೀಗಳೂ ಲಭ್ಯ. ಕಣ್‌ಸೆಳೆಯುವ ಬಣ್ಣದ ಈ ರಾಖಿ ತನ್ನದೇ ಟ್ರೆಂಡ್‌ಅನ್ನೂ ಸೃಷ್ಟಿಸಿದೆ. 

– ಚಂದನ್‌ ರಾಖಿ/ ಸ್ಯಾಂಡಲ್‌ವುಡ್‌ ರಾಖಿ
ಕೆಂಪು ದಾರದ ಮಧ್ಯದಲ್ಲಿ ಶ್ರೀಗಂಧದ ಮಣಿಗಳನ್ನು ಪೋಣಿಸಿರುವ ಈ ರಾಖಿಗಳು ಸದ್ಯ ಅತಿಹೆಚ್ಚು ಬೇಡಿಕೆಯಲ್ಲಿವೆ. ಗಂಧದ ತುಣುಕುಗಳನ್ನು ಬೇರೆ ಬೇರೆ ವಿನ್ಯಾಸದಲ್ಲಿ ಕೂಡ ಬಳಸಲಾಗುತ್ತದೆ. ಗಂಧದ ಓಂ, ಸ್ವಸ್ತಿಕ್‌ ಹಾಗೂ ದೇವರ ಚಿತ್ರವಿರುವ ರಾಖಿಗಳು ಕೂಡ ಲಭ್ಯ. ಸಮೃದ್ಧಿಯ ಸಂಕೇತವಾಗಿರುವ ಶ್ರೀಗಂಧದ ರಾಖೀಯನ್ನು ಸಹೋದರನ ಶ್ರೇಯಸ್ಸನ್ನು ಬಯಸಿ ಕಟ್ಟಲಾಗುತ್ತದೆ. 

– ಗೊಂಬೆ ಚಿತ್ರದ ರಾಖಿ
ಇದು ತಮ್ಮಂದಿರಿಗೆ ಕಟ್ಟುವ ರಾಖಿ. ಛೋಟಾ ಭೀಮ್‌, ಬಾಲ ಹನುಮಾನ್‌, ಬಾಲ ಗಣೇಶ, ಮಿಕ್ಕಿ ಮೌಸ್‌… ಹೀಗೆ ಪುಟಾಣಿಗಳಿಗೆ ಇಷ್ಟವಾಗುವ ಕಾಟೂìನ್‌ ಪಾತ್ರಗಳ ಡಿಸೈನ್‌ ಇರುವ ರಾಖಿ. ಮುದ್ದಾಗಿ ಕಾಣುವ ಮಕ್ಕಳ ರಾಖಿಯನ್ನು, ಮಗು ಮನಸ್ಸಿನ ಅಣ್ಣನಿಗೂ ಕಟ್ಟಬಹುದು. 

Advertisement

Udayavani is now on Telegram. Click here to join our channel and stay updated with the latest news.

Next