Advertisement

ರಾಕೇಶ್‌ ಟಿಕಾಯತ್‌ ಹಲ್ಲೆಗೆ ಖಂಡನೆ

03:09 PM Jun 01, 2022 | Team Udayavani |

ಸುರಪುರ: ಭಾರತೀಯ ಕಿಸಾನ್‌ ಸಂಘದ ರಾಷ್ಟ್ರನಾಯಕ ರಾಕೇಶ ಟಿಕಾಯತ್‌ ಹಾಗೂ ಇತರೆ ರೈತ ಮುಖಂಡರ ಮೇಲೆ ಹಲ್ಲೆ ಮಾಡಿ, ಮಸಿ ಬಳಿದು ಅವಮಾನ ಮಾಡಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘ-ಹಸಿರು ಸೇನೆ ಕಾರ್ಯಕರ್ತರು ನಗರದ ತಹಶೀಲ್ದಾರ್‌ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.

Advertisement

ರೈತ ಮುಖಂಡರು ಮಾತನಾಡಿ, ಬೆಂಗಳೂರಿನ ಗಾಂಧಿ  ಭವನದಲ್ಲಿ ನಡೆಯುತ್ತಿದ್ದ ಸಭೆಗೆ ಕೆಲ ಗುಂಡಾಗಳು ಪತ್ರಕರ್ತರ ಸೋಗಿನಲ್ಲಿ ಬಂದು ರಾಕೇಶ್‌ ಟಿಕಾಯಿತ್‌, ಯಧುವೀರಸಿಂಗ್‌, ನಂದಿನಿ ಜೈರಾಮ ಕುಳಿತಿರುವ ವೇದಿಕೆಯ ಮೇಲೆ ಹೋಗಿ ಅವರ ಮುಖಕ್ಕೆ ಮಸಿ ಬಳಿದು, ಹಲ್ಲೆ ಮಾಡಿ ಮೋದಿಗೆ ಜೈ ಎಂದು ಘೋಷಣೆ ಕೂಗಿ ಉದ್ಧಟತನ ತೋರಿದ್ದಾರೆ ಎಂದು ಆರೋಪಿಸಿದರು.

ಗೃಹ ಸಚಿವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ಕೊಡಬೇಕು. ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರವನ್ನು ವಜಾಗೊಳಿಸಬೇಕು. ಗೂಂಡಾಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಬಂದ್‌ ಮಾಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ಮೂಲಕ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ, ತಾಲೂಕು ಅಧ್ಯಕ್ಷ ಹನುಮಂತ್ರಾಯ ಚಂದಲಾಪುರ, ಮುಖಂಡರಾದ ಭೀಮರಾಯ ಒಕ್ಕಲಿಗ, ವೆಂಕಟೇಶ ಕುಪಗಲ್‌, ತಿಪ್ಪಣ್ಣ, ಮಲ್ಲಣ್ಣ ಹಾಲಬಾವಿ, ಭೀಮನಗೌಡ ಕರ್ನಾಳ, ಸಾಹೇಬಗೌಡ, ಹನುಮಗೌಡ, ಮರೆಪ್ಪ ಹೆಮನೂರ, ಮೌನೇಶ ಅರಳಹಳ್ಳಿ, ಪ್ರಭು ದೊರೆ, ನಾಗಪ್ಪ ಸೇರಿದಂತೆ ಅನೇಕ ರೈತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next