Advertisement

ರಾಕೇಶ್‌ ನೈಟ್‌ ಔಟ್‌ ಜೋಶ್‌

12:30 AM Jan 25, 2019 | |

ಶಿವಮಣಿ ನಿರ್ದೇಶನದ “ಜೋಶ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪರಿಚಯವಾದ ರಾಕೇಶ್‌ ಅಡಿಗ ಈಗ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಹೌದು, ರಾಕೇಶ್‌ ಅಡಿಗ ನಿರ್ದೇಶನದ ಚೊಚ್ಚಲ ಚಿತ್ರ “ನೈಟ್‌ ಔಟ್‌’ ತೆರೆಗೆ ಬರಲು ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಅದ್ಧೂರಿಯಾಗಿ ಹೊರಬಂದಿದೆ. 

Advertisement

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಜಗ್ಗೇಶ್‌, ಹಿರಿಯ ನಿರ್ಮಾಪಕ ಎಸ್‌.ವಿ ಬಾಬು, ಲಹರಿ ವೇಲು, ನಿರ್ದೇಶಕ ಶಿವಮಣಿ, ಗೀತ ಸಾಹಿತಿ ಕೆ. ಕಲ್ಯಾಣ್‌, ಉಮೇಶ್‌ ಬಣಕಾರ್‌, ಭಾ.ಮಾ ಹರೀಶ್‌, ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರ ಸಮ್ಮುಖದಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಮಾತನಾಡಿದ ರಾಕೇಶ್‌ ಅಡಿಗ, “ನಿರ್ದೇಶಕನಾಗಬೇಕು ಎಂಬ ಬಹಳ ವರ್ಷಗಳ ಕನಸು ಈ ಚಿತ್ರದ ಮೂಲಕ ಈಡೇರುತ್ತಿದೆ. ನಾವು ಅಂದುಕೊಂಡಂತೆ ನಾಲ್ಕೇ ತಿಂಗಳಿನಲ್ಲಿ ಈ ಚಿತ್ರವನ್ನು ಮಾಡಿ ಮುಗಿಸಿದ್ದೇವೆ. ಒಂದು ದಿನದಲ್ಲಿ ನಡೆಯುವ ಘಟನೆಗಳ ಸುತ್ತ ಈ ಚಿತ್ರ ನಡೆಯುತ್ತದೆ. ಇಡೀ ಚಿತ್ರವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮಹಂತದಲ್ಲಿದ್ದು, ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂದರು. 

“ನೈಟ್‌ ಔಟ್‌’ ಚಿತ್ರವನ್ನು “ಆರ್ಯನ್‌ ಮೋಷನ್‌ ಪಿಕ್ಚರ್’ ಬ್ಯಾನರ್‌ನಲ್ಲಿ ಅನಿವಾಸಿ ಕನ್ನಡಿಗ ಡಾ. ನವೀನ್‌ ನಿರ್ಮಿಸುತ್ತಿದ್ದಾರೆ. ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ನವೀನ್‌, ಅಲ್ಲಿಯೇ ಕುಳಿತು ಕನ್ನಡ ಕಟ್ಟುವ ಕೆಲಸ ಮಾಡುತ್ತಿ¨ªಾರೆ. ಅಮೆರಿಕಾದಲ್ಲಿ ಪ್ರತಿವರ್ಷ ನಡೆಯುವ ಅಕ್ಕ ಸಮ್ಮೇಳನದ ಉಸ್ತುವಾರಿ ಜೊತೆಗೆ ಅಮೆರಿಕದಲ್ಲಿ ಕನ್ನಡ ಚಿತ್ರಗಳಿಗೆ ನೆಲೆ ಒದಗಿಸುವಲ್ಲಿ ನವೀನ್‌ ಶ್ರಮಿಸುತ್ತಿ¨ªಾರೆ. ಇನ್ನು ಕನ್ನಡ ಚಿತ್ರಗಳ ನಿರ್ಮಾಣದಲ್ಲೂ ಆಸಕ್ತರಾಗಿರುವ ನವೀನ್‌, ಈಗಾಗಲೇ 2015ರಲ್ಲಿ ವೀರ ಯೋಧ ಬೋಪಣ್ಣ ಜೀವನ ಮತ್ತು ಕೊಡಗಿನ ಮೇಲೆ ಜಾಗತಿಕರಣದ ಮಹತ್ವ ಕುರಿತು ಚಿತ್ರ ನಿರ್ಮಿಸಿದ್ದರು. ಗೋಪಿ ಪೀಣ್ಯ ನಿರ್ದೇಶನದ ಈ ಕೊಡವ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿತ್ತು. ಸದ್ಯ “ನೈಟ್‌ ಔಟ್‌’ ಚಿತ್ರದ ಜೊತೆ ಜೊತೆಗೇ “ಗಜಲ್‌’ ಮತ್ತು “ರತ್ನಮಂಜರಿ’ ಸಿನಿಮಾಗಳನ್ನೂ ನಿರ್ಮಿಸುತ್ತಿದ್ದಾರೆ. 

ಈ ಬಗ್ಗೆ ಮಾತನಾಡುವ ನವೀನ್‌, “ಎಲ್ಲೇ ಇದ್ದರೂ ಅಲ್ಲೊಂದಷ್ಟು ಕನ್ನಡ ಕೆಲಸ ಮಾಡಬೇಕೆಂಬ ಹಂಬಲ ಮೊದಲಿನಿಂದಲೂ ಇದೆ. ಅದಕ್ಕೆ ಪೂರಕವೆಂಬಂತೆ, ಅಕ್ಕಾ ಸಮ್ಮೇಳನದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದಾದ ಬಳಿಕ ಕನ್ನಡ ಚಿತ್ರಗಳ ಬಗ್ಗೆ ಆಸಕ್ತರಾದವರು ಪರಿಚಯವಾಗುತ್ತಾ ಹೋದರು. ಅಮೆರಿಕಾದಲ್ಲೂ ಸದಭಿರುಚಿಯ ಕನ್ನಡ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ವೇಳೆ ನಮಗೂ ಕನ್ನಡ ಚಿತ್ರವನ್ನು ಮಾಡುವ ಆಲೋಚನೆ ಬಂದಿದ್ದರಿಂದ ಸಮಾನ ಮನಸ್ಕರ ಜೊತೆ ಸೇರಿ “ನೈಟ್‌ ಔಟ್‌’ ಚಿತ್ರವನ್ನು ನಿರ್ಮಿಸಿದ್ದೇವೆ. ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವ ಚಿತ್ರವಾಗಲಿದೆ ಎಂಬ ಭರವಸೆ ಇದೆ’ ಎಂದರು. 

ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ನೈಟ್‌ ಔಟ್‌’ ಚಿತ್ರದಲ್ಲಿ ಭರತ್‌, ಅಕ್ಷಯ್‌, ಶೃತಿ ಗೊರಾಡಿಯಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ದೃಶ್ಯಗಳನ್ನು ಅರುಣ್‌ ಕೆ. ಅಲೆಗಾಡರ್‌ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರೆ, ರಿತ್ವಿಕ್‌ ಚಿತ್ರದ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಸಮೀರ್‌ ಕುಲಕರ್ಣಿ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ “ನೈಟ್‌ ಔಟ್‌’ ಚಿತ್ರದ ಆಡಿಯೋ ಮತ್ತು ಟ್ರೇಲರ್‌ಗೆ ಸೋಷಿಯಲ್‌ ಮೀಡಿಯಾಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಚಿತ್ರವನ್ನು ಮಾರ್ಚ್‌ ಅಂತ್ಯಕ್ಕೆ ತೆರೆಗೆ ತರುವ ಯೋಚನೆಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next