ತುಮಕೂರು: ಶ್ರೀಲಂಕಾದಲ್ಲಿ ಭಾನು ವಾರ ನಡೆದ ಬಾಂಬ್ ಸ್ಫೋಟದಲ್ಲಿ ತುಮಕೂರಿನ ಸ್ವರಸ್ಪತಿ ಪುರಂನ ಉದ್ಯಮಿ ಎಲ್.ರಮೇಶ್‌ಗೌಡ ರವರ ಪಾರ್ಥಿವ ಶರೀರ ನಗರದ ಅವರ ನಿವಾಸಕ್ಕೆ ತರುತ್ತಲೇ ಅವರ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
Advertisement
ರಮೇಶ್‌ಗೌಡರ ಮೃತದೇಹ ಬುಧವಾರ ಸಂಜೆ ಅವರ ತುಮಕೂರಿನ ಸರಸ್ವತಿಪುರಂ ಮನೆಗೆ ಆಗಮಿಸಿತು. ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಿ, ರಮೇಶ್‌ಗೌಡ ಮೃತದೇಹವನ್ನು ಎಕ್ಸ್‌ಕಾರ್ಟ್ ಮೂಲಕ ನೆಲಮಂಗಲ ಮಾರ್ಗವಾಗಿ ತುಮಕೂರಿಗೆ ಸಂಜೆ 5-30ರ ವೇಳೆಗೆ ತಲುಪಿತು.ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಜಿಲ್ಲಾಡಳಿತ ವತಿಯಿಂದ ತಹಶೀಲ್ದಾರ್ ನಾಗರಾಜ್, ಶಿರಸ್ತೇದಾರ ಜಯ ಪ್ರಕಾಶ್, ಡಾ. ಎಸ್.ಶರತ್‌ಚಂದ್ರ ಅವರು ತುಮಕೂರು ಸರಸ್ವತಿ ಪುರಂ ನಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು. ತಾಯಿ ರತ್ನಮ್ಮ, ಪತ್ನಿ ಮಂಜುಳಾ, ಮಗಳು ದೀಕ್ಷಾ, ಮಗ ಶೋಭಿತ್, ಸಹೋದರ ಪ್ರಕಾಶ್ ಸೇರಿ ದಂತೆ ಅವರ ಕುಟುಂಬದವರು, ಸ್ನೇಹಿ ತರು ಸೇರಿದಂತೆ ಅವರ ಬಂಧುಗಳ ರೋದನೆ ಹೆಚ್ಚಾಗಿತ್ತು.
ದುಬೈಗೆ ಹೋಗುತ್ತೇನೆ ಅಮ್ಮ ..
ರಮೇಶ್‌ಗೌಡ ಲೋಕಸಭಾ ಚುನಾವಣೆ ಮುಗಿಸಿಕೊಂಡು ಪ್ರವಾಸ ಮಾಡಲು ಶ್ರೀಲಂಕಾಕ್ಕೆ ತೆರಳಿದಿದ್ದರು. ಆದರೆ, ಶ್ರೀಲಂಕಾದಲ್ಲಿ ಸಂತಸದಿಂದ ಪ್ರವಾಸ ಮಾಡುವ ಮೊದಲೇ ಭಯೋತ್ಪಾದಕರ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದಾರೆ. ರಾಜ್ಯದಿಂದ ಪ್ರವಾಸಕ್ಕೆ ತೆರಳಿದ 7 ಜನರಲ್ಲಿ ಸರಸ್ವತಿಪುರಂ ನಿವಾಸಿ ರಮೇಶ್ ಗೌಡ ಒಬ್ಬರಾಗಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ಗೌಡರ ತಾಯಿ ರತ್ನಮ್ಮ, ತನ್ನ ಒಡಲ ನೋವನ್ನು ತೊಡಿಕೊಂಡು ನನ್ನ ಮಗನಿಗೆ ಇಬ್ಬರು ಮಕ್ಕಳು ಇಬ್ಬರು ಮಕ್ಕಳೂ ತಬ್ಬಲಿಯಾಗಿ ಬಿಟ್ಟರು ಎಂದು ಕಣ್ಣೀರು ಹಾಕಿದ್ದು ಎಂಥವರ ಮನ ಕಲಕುತ್ತಿತು. ದುಬೈಗೆ ಹೋಗುತ್ತೇನೆ ಅಮ್ಮ ಎಂದು ಹೇಳಿ ಶ್ರೀಲಂಕಾಗೆ ಹೋಗಿದ್ದಾನೆ. ಶನಿವಾರ 3ಗಂಟೆಗೆ ಮನೆ ಬಿಟ್ಟವನು, ಸಂಜೆ 7ಗಂಟೆಗೆ ಅಲ್ಲಿ ತಲುಪಿದ್ದ, ಅದು ಆದ ಮೇಲೆ ಒಮ್ಮೆಯೂ ಕರೆ ಮಾಡಲಿಲ್ಲ ಎಂದು ಕಣ್ಣೀರು ಹಾಕಿದರು.
ತುಮಕೂರಿನ ಸರಸ್ವತಿ ಪುರಂನಿಂದ ಮೃತದೇಹವನ್ನು ಕುಣಿಗಲ್ನ ಅವರ ನಿವಾಸದಲ್ಲಿ ಸ್ವಲ್ಪ ಸಮಯ ಸಾರ್ವ ಜನಿಕರ ದರ್ಶನಕ್ಕಿಟ್ಟು ಅಲ್ಲಿಂದ ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿಯ ಅವರ ಸ್ವಗ್ರಾಮವಾದ ಬೆಟ್ಟದ ಕೋಟೆಯಲ್ಲಿ ಅಂತ್ಯಕ್ರಿಯೆ ಮೃತ ರಮೇಶ್‌ಗೌಡನ ತಂದೆಯ ಸಮಾಧಿ ಪಕ್ಕದಲ್ಲಿ ನೆರವೇರಿತು.