Advertisement

Karnataka: ರಾಜ್ಯೋತ್ಸವ ಪ್ರಶಸ್ತಿ: ಆಯ್ಕೆಗೆ ಸಮಿತಿ

11:35 PM Sep 30, 2023 | Team Udayavani |

ಬೆಂಗಳೂರು: 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಸಲಹಾ ಸಮಿತಿಯನ್ನು ರಾಜ್ಯ ಸರಕಾರ ರಚಿಸಿದೆ.

Advertisement

ಸಲಹಾ ಸಮಿತಿಯಲ್ಲಿ ಯಾರಿಗೆಲ್ಲ ಸ್ಥಾನ?
ಪ್ರೊ| ಜಾಣಗೆರೆ ವೆಂಕಟರಾಮಯ್ಯ, ಡಾ| ಎಚ್‌.ಎಲ್‌.ಪುಷ್ಪ, ಡಾ| ವೀರಣ್ಣ ದಂಡೆ, ಡಾ| ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ-ಸಾಹಿತ್ಯ, ಡಾ| ಸಿ.ಆರ್‌. ಚಂದ್ರಶೇಖರ್‌-ವೈದ್ಯಕೀಯ, ಪಿಂಡಿಪಾನಹಳ್ಳಿ ಮನಿವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್‌- ಜಾನಪದ, ಡಾ| ವಿಠಲ್‌ ಐ.ಬೆಣಗಿ- ಕೃಷಿ, ಡಾ| ಸಣ್ಣರಾಮು- ಸಮಾಜ ಸೇವೆ, ವೆಂಕಟರಾಮಯ್ಯ- ಶಿಲ್ಪಕಲೆ, ಡಾ| ಎಂ.ಎಸ್‌.ಮೂರ್ತಿ- ಚಿತ್ರಕಲೆ/ಶಿಲ್ಪಕಲೆ, ಡಾ| ಗೀತಾ ಶಿವಮೊಗ್ಗ -ನೃತ್ಯ, ಡಾ| ಜಯದೇವಿ ಜಂಗಮ ಶೆಟ್ಟಿ -ಶಾಸ್ತ್ರೀಯ ಸಂಗೀತ, ಐರೋಡಿ ಗೋವಿಂದಪ್ಪ -ಯಕ್ಷಗಾನ, ಸಾಧುಕೋಕಿಲ-ಚಲನಚಿತ್ರ, ರೀತು ಅಬ್ರಹಾಂ-ಕ್ರೀಡೆ, ಸುಕನ್ಯಾ ಪ್ರಭಾಕರ್‌-ಸುಗಮಸಂಗೀತ, ಫ‌ಯಾಜ್‌ ಖಾನ್‌-ಹಿಂದೂಸ್ಥಾನಿ ಸಂಗೀತ, ಹೃಷಿಕೇಶ್‌ ಬಹದ್ದೂರ್‌ ದೇಸಾಯಿ-ಸಮಾಜ ಸೇವೆ, ನರಸಿಂಹಲು ವಡವಾಟಿ-ವಾದ್ಯ ಸಂಗೀತ, ಡಿ.ಎನ್‌.ನರಸಿಂಹರಾಜು- ಆಡಳಿತ, ಡಾ| ಪುರುಷೋತ್ತಮ ಬಿಳಿಮಲೆ-ಶಿಕ್ಷಣ, ಚನ್ನಬಸವಣ್ಣ – ಪ್ರಕಾಶಕ, ಶೈಲೇಶ್‌ ಚಂದ್ರಗುಪ್ತ- ಪತ್ರಿಕೋದ್ಯಮ, ಜೆ.ಲೋಕೇಶ್‌ -ರಂಗ ಭೂಮಿ ಹಾಗೂ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು.

ನಾಮನಿರ್ದೇಶನಕ್ಕೆ ಸೂಚನೆ
ಬೆಂಗಳೂರು: ರಾಜ್ಯೋತ್ಸವ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧವಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅ.1ರಿಂದ ಅ.15ರ ವರೆಗೆ ನಾಮನಿರ್ದೇಶನ ಮಾಡಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಟನೆ ತಿಳಿಸಿದೆ. ಮಾಹಿತಿಗಾಗಿ ಸೇವಾ ಸಿಂಧು ಪೋರ್ಟಲ್‌ನ ವೆಬ್‌ಸೈಟ್‌ https://sevasindhu.Karnataka.gov.in  ಅನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next