Advertisement

Raju Talikote: ಗುಬ್ಬಿ ಗೂಡು ಕಟ್ಟುವಂತೆ ರಂಗಾಯಣ ಕಟ್ಟುವೆವು

06:16 PM Oct 24, 2024 | Team Udayavani |

ಶಿರಸಿ: ಗುಬ್ಬಿ ಗೂಡು ಕಟ್ಟುವಂತೆ ಒಂದೊಂದೇ ಎಳೆ ರಂಗಾಯಣ ಕಟ್ಟುವೆವು. ಎಲ್ಲರ ಸಹಕಾರ ಪಡೆದು ಮುನ್ನಡೆಯುತ್ತೇವೆ ಎಂದು ಧಾರವಾಡದ ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ ಹೇಳಿದರು.

Advertisement

ನಗರದ ರಂಗಧಾಮದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಗುಬ್ಬಿಯ ಗೂಡಿಗೆ ಒಂದೊಂದು ಎಳೆನೂ ಮುಖ್ಯವಾದಂತೆ ರಂಗಾಯಣಕ್ಕೂ ಮಹತ್ವದ್ದು. ಧಾರವಾಡದ‌ ರಂಗಾಯಣಕ್ಕೆ ಏಳು ಜಿಲ್ಲೆಗಳಿವೆ. ರಂಗಾಯಣಕ್ಕೆ ಸವಾಲು ಕೂಡ ಇದೆ. ರಂಗಾಯಣ ಚೌಕಟ್ಟು ಮೀರದೆ ಸವಾಲು ಎದುರಿಸಿ ಗೆಲ್ಲಿಸಬೇಕು ಎಂದರು.

ರಂಗಾಯಣಕ್ಕೆ ಅದರದ್ದೇ ಆದ ಇತಿಮಿತಿಗಳಿವೆ. ಚೌಕಟ್ಟು‌ ಮೀರದಂತೆ ಕೆಲಸ ‌ಮಾಡಬೇಕು. ಒಳ್ಳೆ ನಾಟಕ, ಒಳ್ಳೆ ಕಲಾವಿದರು, ಸಂಘಟನೆಗಳು ಬೇಕಿದೆ. ಪ್ರೇಕ್ಷಕರಿಗೆ ಪೌರಾಣಿಕ ನಾಟಕಗಳನ್ನು ಹೆಚ್ಚೆಚ್ಚು ತಲುಪಿಸಬೇಕಾಗಿದೆ ಎಂದ ಅವರು, ಮೈಸೂರು‌ ರಂಗಾಯಣದ ಮಾದರಿ ಗೌರವ ಸಿಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಧಾರವಾಡ ರಂಗಾಯಣಕ್ಕೆ ಶಿಕ್ಷಕರು ಹಾಗು ರಂಗ ಶಾಲೆ ಒದಗಿಸಿವಂತೆ ಬೇಡಿಕೆ ಇದೆ ಎಂದರು.

ಸರಕಾರದ ಮುಂದೆ ಕಂದಗಲ್ ಹನುಮಂತರಾಯ‌ರ ನಾಟಕ ಪ್ರಸ್ತುತಿಗೆ ನೆರವಿಗೆ ಕೇಳಿದ್ದೇವೆ.ಕಂದಗಲ್‌ ಮಹಾಭಾರತ ಎಂಟು ನಾಟಕಗಳನ್ನು ಯುವ ಪೀಳಿಗೆಗೆ ಕೊಂಡೊಯ್ಯಬೇಕು. ರಂಗಭೂಮಿಯ ಪ್ರೇಕ್ಷಕರ ಹೆಚ್ಚು ಮಾಡುವುದು ನಮ್ಮ ಆಶಯ ಎಂದರು.

ರಂಗಾಯಣವು ಗ್ರಾಮೀಣ ಹಾಗೂ ಸ್ಥಳೀಯ ಕಲಾವಿದರನ್ನು ನಾಟಕದ ಮೂಲಕ ಬೆಂಬಲಿಸಲು ಮುಂದಾಗಿದ್ದೇವೆ. ರಂಗಾಯಣದ ರಿಜಿಸ್ಟಾರ್ ಶಶಿಕಲಾ‌ ಹುಡೇದ, ರಂಗಾಯಣ ಧಾರವಾಡದಿಂದ ರಂಗಭೂಮಿಯ ಚಟುವಟಿಕೆಗೆ ಉತ್ತೇಜನ ನೀಡಬೇಕು. ನಾಟಕ ಶಿಬಿರ ನಡೆಸಿ ರಂಗ ಚಟುವಟಿಕೆಯತ್ತ ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಶಿಬಿರವನ್ನು ಉತ್ತೇಜನಕಾರಿಯಾಗಿ ಚಟುವಟಿಕೆಗಳನ್ನು ನಡೆಸಲು ಯೋಜಿಸಲಾಗಿದೆ ಎಂದರು. ಚಂದ್ರು ಉಡುಪಿ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next