Advertisement

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

06:22 PM May 01, 2024 | Team Udayavani |

ಬೆಳಗಾವಿ: ಮೋದಿ ತೀರಿಕೊಂಡರೆ ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲವೇ ಎಂದು ಕಾಗವಾಡ ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಕಾಗವಾಡ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಗೆ ಅವರು ನರೇಂದ್ರ ಮೋದಿ ತೀರಿಕೊಂಡರೆ ಈ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ ಎಂದು ನಾಲಿಗೆ ಹರಿಬಿಟ್ಟರು.

ನಾನು ಪದವೀಧರ ಇದ್ದೇನೆ. ನಾನೇನು ಕುರಿ ಅಲ್ಲ. ದೇಶವನ್ನು ಸಮರ್ಥವಾಗಿ ನಡೆಸುವ ವಿಶ್ವಾಸ ನನ್ನಲ್ಲಿ ಇದೆ. ಈಗಿನ ಯುವಕರು ಮೋದಿ ಮೋದಿ ಎನ್ನುತ್ತಾರೆ. ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಜೊಲ್ಲೆ ದಂಪತಿಗಳು ಮೋದಿ ನೋಡಿ ಮತ ಹಾಕಿ ಎಂದು ಪ್ರಚಾರ ಮಾಡುತ್ತಾರೆ. ಮೋದಿ ಬೇಕು ಎನ್ನುತ್ತಾರೆ. ಇಲ್ಲಿ ಏನಾದರೂ ಸಮಸ್ಯೆಯಾದರೆ ಮೋದಿ ಬರುವುದಿಲ್ಲ. ನಾವೇ ನಿಮ್ಮ ಸಮಸ್ಯೆ ಕೇಳಬೇಕು ಎಂದು ವ್ಯಂಗ್ಯವಾಡಿದರು.

ಕೆಳಗಡೆ ನಾನು, ಲಕ್ಷ್ಮಣ ಸವದಿ ಹಾಗೂ ಸತೀಶ ಜಾರಕಿಹೊಳಿ ಬೇಕು. ಮೇಲುಗಡೆ ಮೋದಿ ಬೇಕು ಎನ್ನುತ್ತಾರೆ. ಇದಾವ ಲೆಕ್ಕ. ಇಲ್ಲಿ ನಿಮ್ಮನ್ನು ನೋಡುವವರು ನಾವು. ಮೋದಿ ಬರುವದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು 3000 ಕೋಟಿ ವಿಮಾನದಲ್ಲಿ ಓಡಾಡುತ್ತಾರೆ. ನಾಲ್ಕು ಲಕ್ಷ ರೂ ಬೆಲೆಯ ಸೂಟ್ ಹಾಕಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Advertisement

ಇದನ್ನೂ ಓದಿ: Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Advertisement

Udayavani is now on Telegram. Click here to join our channel and stay updated with the latest news.

Next