Advertisement

ಲವ್ ಬೇಕಿತ್ತಾ ಅಂತಿದ್ದಾರೆ ರಾಜು ಜೇಮ್ಸ್ ಬಾಂಡ್

07:18 PM Jun 24, 2023 | Team Udayavani |

“ರಾಜು ಜೇಮ್ಸ್‌ ಬಾಂಡ್‌’ ಚಿತ್ರದ “ಬೇಕಿತ್ತಾ ಬೇಕಿತ್ತಾ, ಈ ಲವು ಬೇಕಿತ್ತಾ..’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಕೇಳುಗರಿಂದ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.

Advertisement

ಈ ಹಾಡು ಕೇಳಿದ ನಿರ್ದೇಶಕ “ಮಠ’ ಗುರುಪ್ರಸಾದ್‌ ತಮ್ಮ ಮೊದಲ ಮದುವೆ, ಡೈವೋರ್ಸ್‌, ಎರಡನೇ ಮದುವೆ ಮತ್ತು ಮಗು ಬಗ್ಗೆ ಮಾತನಾಡಿದ್ದಾರೆ. ಇದು ಹಾಡಿನ ಪರಿಣಾಮ ಎಂಬ ಖುಷಿ ಚಿತ್ರತಂಡದ್ದು. ಇನ್ನು, ಅಂತೋನಿ ದಾಸ್‌ ಹಾಡಿರುವ ಈ ಹಾಡಿಗೆ ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ.

ದೀಪಕ್‌ ಮಧುವನಹಳ್ಳಿ ಈ ಸಿನಿಮಾದ ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡುವ ದೀಪಕ್‌, “ರಾಜು ಜೇಮ್ಸ್ ಬಾಂಡ್‌ ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಚಿತ್ರೀಕರಣ ಮುಕ್ತಾಯವಾಗಿದೆ.

ಆಗಸ್ಟ್‌ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಮಂಜುನಾಥ್‌ ವಿಶ್ವಕರ್ಮ ಹಾಗೂ ಕಿರಣ್‌ ಬರ್ತೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲಂಡನ್‌ ನಲ್ಲಿ 21 ದಿನಗಳ ಚಿತ್ರೀಕರಣವಾಗಿದೆ’ ಎಂದರು.

ಗುರುನಂದನ್‌ ಈ ಚಿತ್ರದ ನಾಯಕ. ಗುರುನಂದನ್‌ ಅವರಿಗೆ ನಾಯಕಿಯಾಗಿ ಮೃದಲ ನಟಿಸಿದ್ದಾರೆ. ರವಿಶಂಕರ್‌ ಸಾಧುಕೋಕಿಲ, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ಜೈ ಜಗದೀಶ್‌, ತಬಲ ನಾಣಿ, ಮಂಜುನಾಥ್‌ ಹೆಗಡೆ, ವಿಜಯ್‌ ಚೆಂಡೂರ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next