ಬೆಂಗಳೂರು: ಹಿರಿಯ ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಜನಿಕಾಂತ್ ಅಭಿನಯದ “2.0′ ಚಿತ್ರವನ್ನು ಅವರ ಕರ್ನಾಟಕದ ಅಭಿಮಾನಿಗಳು ಯಾವುದೇ ಸಂಭ್ರಮಾಚರಣೆ ಮಾಡದೇ ವೀಕ್ಷಿಸಿದ್ದಾರೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ರಜನಿಕಾಂತ್ ಸಿನಿಮಾ ಬಿಡುಗಡೆಯನ್ನು ಅವರ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಾರೆ. ದೊಡ್ಡ ಕಟೌಟ್, ಹಾರ, ಹಾಲಿನಾಭಿಷೇಕ, ಜಯಕಾರದ ಸಂಭ್ರಮದಲ್ಲಿ ಸಿನಿಮಾ ನೋಡುತ್ತಾರೆ. ಆದರೆ, ಗುರುವಾರ “2.0′ ಚಿತ್ರದ
ಬಿಡುಗಡೆ ವೇಳೆ ಕರ್ನಾಟಕದಲ್ಲಿ ಆ ವಾತಾವರಣ ಇರಲಿಲ್ಲ. ಯಾವುದೇ ಸಂಭ್ರಮಾಚರಣೆ ಇಲ್ಲದೇ ಸಿನಿಮಾವನ್ನು ರಜನಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.
ರಜನಿಕಾಂತ್ ಹಾಗೂ ಅಂಬರೀಶ್ ಆಪ್ತ ಗೆಳೆಯರು. ಹೀಗಿರುವಾಗ ತನ್ನ ಸಿನಿಮಾ ಬಿಡುಗಡೆ ವೇಳೆ ಸಂಭ್ರಮಿಸುವುದು ಸರಿಯಲ್ಲ, ಬದಲಾಗಿ ಸಿನಿಮಾವನ್ನಷ್ಟೇ ವೀಕ್ಷಿಸಬೇಕೆಂಬ ರಜನಿ ನಿರ್ಧಾರದಂತೆ ಕರ್ನಾಟಕದಲ್ಲಿ ಯಾವುದೇ ರೀತಿಯ ಸಂಭ್ರಮಚರಣೆ ಮಾಡದೇ ರಜನಿ ಅಭಿಮಾನಿಗಳು ಸಿನಿಮಾ ವೀಕ್ಷಿಸಿದ್ದಾರೆ. ಇದು ಅಂಬರೀಶ್ ಹಾಗೂ ರಜನಿಕಾಂತ್ ಅವರ ಸ್ನೇಹಕ್ಕೆ ಸಾಕ್ಷಿಯಾಗಿದೆ