Advertisement

ಹುತಾತ್ಮರ ನವೀಕೃತ ಸ್ಮಾರಕ ಲಡಾಖ್‌ನಲ್ಲಿ ಲೋಕಾರ್ಪಣೆ

11:51 PM Nov 18, 2021 | Team Udayavani |

ಹೊಸದಿಲ್ಲಿ: ಲಡಾಖ್‌ನ “ರೆಜಾಂಗ್‌ ಲಾ’ ಎಂಬಲ್ಲಿ ಹುತಾತ್ಮ ಯೋಧರ ನವೀಕರಣ­ಗೊಳಿಸಲಾಗಿರುವ ಸ್ಮಾರಕವನ್ನು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಉದ್ಘಾಟಿಸಿದರು. ಸಮುದ್ರ ಮಟ್ಟದಿಂದ ಸುಮಾರು 18,000 ಅಡಿಗಳಷ್ಟು ಎತ್ತರ ವಿರುವ ಈ ಪ್ರದೇಶದಲ್ಲಿ ಆರು ದಶಕಗಳ ಹಿಂದೆ ಭಾರತ ಮತ್ತು ಚೀನ ನಡುವೆ ಯುದ್ಧ ನಡೆದಿತ್ತು. ಆ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗಾಗಿ ಇಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, ಇತ್ತೀಚೆಗೆ ಇದನ್ನು ನವೀಕರಿಸಲಾಗಿದೆ.

Advertisement

ಸ್ಮಾರಕ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಂಗ್‌, “ಈ ಸ್ಮಾರಕವು ಭಾರತೀಯ ಸೇನೆಯ ಬದ್ಧತೆ ಹಾಗೂ ಧೈರ್ಯದ ಪ್ರತೀಕ. ಇದೇ ಧೈರ್ಯ ಮತ್ತು ಬದ್ಧತೆಗಳನ್ನು ಭಾರತೀಯ ಯೋಧರು ಇಂಡೋ-ಚೀನ ಯುದ್ಧದಲ್ಲಿ ಪ್ರದರ್ಶಿಸಿದ್ದರು. ಅವರ ತ್ಯಾಗ, ಬಲಿದಾನಗಳು ಇತಿಹಾಸದ ಪುಟಗಳನ್ನು ಸೇರಿದ್ದು, ನಮ್ಮ ಹೃನ್ಮನಗಳಲ್ಲೂ ಚಿರಸ್ಥಾಯಿಯಾಗಿ ಉಳಿದಿದೆ’ ಎಂದಿದ್ದಾರೆ.

ನಿವೃತ್ತ ಸೇನಾಧಿಕಾರಿಯ ಸೇವೆ ಮಾಡಿದ ಸಿಂಗ್ :

ಉದ್ಘಾಟನ ಸಮಾರಂಭಕ್ಕೆ 1962ರ ಇಂಡೋ-ಚೀನ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಬ್ರಿಗೇಡಿಯರ್‌ ಆರ್‌.ವಿ. ಜತಾರ್‌ ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು. ವ್ಹೀಲ್‌ಚೇರ್‌ನಲ್ಲಿ ಆಗಮಿಸಿದ್ದ ಆ ಹಿರಿಯ ಜೀವವನ್ನು ಸ್ವಾಗತಿಸಿದ ರಾಜನಾಥ್‌ ಸಿಂಗ್‌, ತಾವೇ ಖುದ್ದಾಗಿ ವ್ಹೀಲ್‌ಚೇರ್‌ ದಬ್ಬಿಕೊಂಡು ಅವರನ್ನು ಹುತಾತ್ಮರ ಸ್ಮಾರಕದ ಬಳಿ ಕೊಂಡೊಯ್ದಿದ್ದು ಹೃದಯಸ್ಪರ್ಶಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next