Advertisement

ಚೀನ-ಪಾಕ್‌ಗೆ ಶಾಂತಿಪಾಠ; ನೆರೆರಾಷ್ಟ್ರಗಳಿಗೆ ಬುದ್ಧಿ ಹೇಳಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

12:20 AM Sep 05, 2020 | mahesh |

ಮಾಸ್ಕೋ: ಬೆನ್ನಿಗೆ ಚೂರಿಹಾಕುವ ಯುದ್ಧ­ತಂತ್ರ ಬುದ್ಧಿಯ ಚೀನ, ಪಾಕಿಸ್ಥಾನಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಷ್ಯಾದ ನೆಲದಲ್ಲಿ ಶಾಂತಿಯ ಪಾಠ ಬೋಧಿಸಿದ್ದಾರೆ. ಎಸ್‌ಸಿಒ ಭಾಗದಲ್ಲಿ ಶಾಂತಿ ಮತ್ತು ಸುರಕ್ಷತೆಗೆ ಒತ್ತುಕೊಡುವುದು ಮುಖ್ಯ ಎಂದು ಬುದ್ಧಿ ಹೇಳಿದ್ದಾರೆ.

Advertisement

ಭಾರತ, ಪಾಕ್‌, ಚೀನ, ರಷ್ಯಾ ಸೇರಿ 8 ರಾಷ್ಟ್ರಗಳ ಸದಸ್ಯತ್ವವನ್ನೊಳಗೊಂಡ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಮಾಸ್ಕೋದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾ­ಡಿ­ದರು. “ಜಗತ್ತಿನ ಶೇ.40ಕ್ಕಿಂತ ಹೆಚ್ಚಿನ ಜನ­ಸಂಖ್ಯೆ ಹೊಂದಿರುವ ಎಸ್‌ಸಿಒ ಪ್ರದೇಶದಲ್ಲಿ ಪರಸ್ಪರ ನಂಬಿಕೆ, ಸಹಕಾರ ವಾತಾವರಣ ನಿರ್ಮಿಸುವ ಅಗತ್ಯವಿದೆ. ಆಕ್ರಮಣಶೀಲತೆ­ಯನ್ನು ಬದಿಗಿಟ್ಟು ಅಂತಾರಾಷ್ಟ್ರೀಯ ನಿಯಮಗಳನ್ನು ಗೌರವಿಸುವ ಅಗತ್ಯವಿದೆ’ ಎಂದು ಒತ್ತಿ ಹೇಳಿದರು. ರಕ್ಷಣಾ ಸಚಿವರ ಈ ಮಾತು ಲಡಾಖ್‌- ಕಾಶ್ಮೀರದಲ್ಲಿ ಅಶಾಂತಿ ಎಬ್ಬಿಸುತ್ತಿರುವ ನೆರೆ­ರಾಷ್ಟ್ರ­ಗಳಿಗೆ ಚಾಟಿ ಬೀಸಿದಂತಾಗಿದೆ.

ಪಾಕ್‌ಗೆ ಚುರುಕ್‌: ಉಗ್ರವಾದ, ಅಕ್ರಮ ಡ್ರಗ್ಸ್‌ ಸಾಗಾಟ, ದೇಶೀಯ ಅಪರಾಧಗಳ­ನ್ನೊ­ಳ­ಗೊಂಡ ಸಾಂಪ್ರದಾಯಿಕ ಮತ್ತು ಸಾಂಪ್ರ­ದಾಯಿಕ­ವಲ್ಲದ ಸವಾಲುಗಳನ್ನು, ಬೆದರಿಕೆ­ಗಳನ್ನು ಎದುರಿಸಲು ನಮಗೆ ಸಾಂಸ್ಥಿಕ ಶಕ್ತಿಯ ಅಗತ್ಯವಿದೆ. ನಿಮಗೆಲ್ಲ ತಿಳಿದಿರುವಂತೆ, ಭಯೋ­­­ತ್ಪಾದನೆ ಮತ್ತು ಅದಕ್ಕೆ ಕುಮ್ಮಕ್ಕು ನೀಡುವುದನ್ನು ಭಾರತ ನಿಸ್ಸಂದೇಹವಾಗಿ ಖಂಡಿಸುತ್ತದೆ ಎಂದು ಪಾಕಿಸ್ಥಾನಕ್ಕೆ ಕುಟುಕಿದರು.

ಅಫ್ಘನ್‌ ಪರ ಬ್ಯಾಟಿಂಗ್‌: ಅಫ್ಘಾನಿಸ್ತಾನದ ಭದ್ರತಾ ಪರಿಸ್ಥಿತಿ ಇಂದಿಗೂ ಕಳವಳಕಾರಿ­ಯಾಗಿ ಉಳಿದಿದೆ. ಅಫ‌^ನ್‌ ನೇತೃತ್ವದ ಅಲ್ಲಿನ ಜನರ ಮತ್ತು ಸರಕಾರಗಳ ಶಾಂತಿ ಸ್ಥಾಪನೆ ಪ್ರಕ್ರಿಯೆಗಳಿಗೆ ಭಾರತ ಸದಾ ಬೆಂಬಲ ನೀಡುತ್ತದೆ’ ಎನ್ನುವ ಮೂಲಕ ಅಫ‌^ನ್‌ ಅನ್ನು ಉಗ್ರರ ಫ್ಯಾಕ್ಟರಿ ಮಾಡಿಕೊಂಡಿರುವ ಪಾಕಿಸ್ಥಾನಕ್ಕೆ ಬಿಸಿ ಮುಟ್ಟಿಸಿದರು.

ಚೀನದ ಸು-35 ಜೆಟ್‌ ನೆಲಕ್ಕುರುಳಿತೇ?
ಚೀನ ಸು-35 ಜೆಟ್‌ ಅನ್ನು ತೈವಾನ್‌ ಹೊಡೆ ದುರುಳಿಸಿದೆ ಎನ್ನಲಾದ ಸುದ್ದಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. “ದಿ ಜಿವೆಶ್‌ ಪ್ರಸ್‌’ ವರದಿ ಪ್ರಕಾರ ದಕ್ಷಿಣ ಚೀನದ ಗುವಾಂಗ್ಸಿಯಲ್ಲಿ ಈ ಅವಘಡ ಸಂಭವಿಸಿದ್ದು, ಜೆಟ್‌ ಸೀದಾ ದಕ್ಷಿಣ ಚೀನ ಸಮುದ್ರಕ್ಕೆ ಬಿದ್ದಿದೆ- ಎಂಬ ಸುದ್ದಿ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ದಟ್ಟ ಹೊಗೆ ಹೊಮ್ಮಿಸುತ್ತಿರುವ ಜೆಟ್‌ನ ವಿಡಿಯೊ ಕೂಡ ವೈರಲ್‌ ಆಗಿತ್ತು. ಆದರೆ, ಪಿಎಲ್‌ಎ ಇದಕ್ಕೆ ಸ್ಪಷ್ಟನೆ ನೀಡಿಲ್ಲ.

Advertisement

ನಿರ್ಣಾಯಕ ಶಿಖರಗಳ ಮೇಲೆ ಭಾರತ
ರಾತ್ರೋರಾತ್ರಿ ಹೂಡಿದ ಎಲ್ಲ ರಣತಂತ್ರಗಳನ್ನೂ ಹಿಮ್ಮೆಟ್ಟಿಸಿದ ಭಾರತೀಯ ಯೋಧರ ಪರಾಕ್ರಮಕ್ಕೆ ಚೀನ ಬೆಚ್ಚಿಬಿದ್ದಿದೆ. ಭಾರತೀಯ ತುಕಡಿಗಳು ನಿರ್ಣಾಯಕ ಶಿಖರಗಳ ಮೇಲೆ ವಿರಾಜಮಾನವಾಗಿವೆ. ಮತ್ತೂಮ್ಮೆ ದುಷ್ಟತಂತ್ರ ರೂಪಿಸುವ ಸಲುವಾಗಿ ಚೀನ ಚುಶುಲ್‌ ದಿಕ್ಕಿನತ್ತ ಶಸ್ತ್ರಾಸ್ತ್ರ ಮತ್ತು ಆ್ಯಂಟಿ ಟ್ಯಾಂಕ್‌ ಗೈಡೆಡ್‌ ಕ್ಷಿಪಣಿಗಳು, ರಾಕೆಟ್‌ಗಳನ್ನು ಸಾಗಿಸಲು ಇನ್ನಿಲ್ಲದ ಯತ್ನ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಚೀನ ಬದಿಯ ಮೋಲ್ಡೊದಲ್ಲಿ ಶಸ್ತ್ರಾಸ್ತ್ರ ಹೊತ್ತ ಪಿಎಲ್‌ಎ ಸಂಚಾರ ಪತ್ತೆಯಾಗಿದೆ. ಪ್ಯಾಂಗಾಂಗ್‌ನ ದಕ್ಷಿಣ ದಂಡೆ ಸಮೀಪವೇ ಟ್ಯಾಂಕರ್‌, ಕಾಲಾಳುಪಡೆಗಳನ್ನು ಪಿಎಲ್‌ಎ ನಿಲ್ಲಿಸಿದೆ. ಭಾರತೀಯ ತುಕಡಿಗಳು ಥಾಕುಂಗ್‌ ಶಿಖರಗಳ ಮೇಲಿಂದ ಇವುಗಳ ಮೇಲೆ ನಿರಂತರ ಕಣ್ಣಿಟ್ಟಿವೆ. ಅಲ್ಲದೆ, ಟಿ-90 ಹೆವಿ ಯುದ್ಧ ಟ್ಯಾಂಕರ್‌ಗಳು, ಟಿ-72ಎಂ1 ಟ್ಯಾಂಕರ್‌ಗಳು ಪಿಎಲ್‌ಎ ಅತಿಕ್ರಮಣ ಹಾದಿಗೆ ಅಡ್ಡವಾಗಿರುವುದು ಚೀನದ ನಿದ್ದೆಗೆಡಿಸಿದೆ.

ಮಾತುಕತೆಗೆ ಗೋಗರೆದ ಚೀನ
ಲಡಾಖ್‌ ಬಿಕ್ಕಟ್ಟಿನ ನಡುವೆ ಮಾಸ್ಕೋ­ ದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ) ಸಭೆ ವೇಳೆ ಭಾರತದ ರಕ್ಷಣಾ ಸಚಿವರೊಂದಿಗೆ ಚೀನ ಮಾತುಕತೆಗೆ ಮನವಿ ಮಾಡಿದೆ. “ಚೀನ ಮುಂದಿಟ್ಟಿದ್ದ ಸಭೆಯ ಮನವಿಗೆ ನಾವು ಒಪ್ಪಿಗೆ ಸೂಚಿಸಿದ್ದೇವೆ. ಬಹುಶಃ ಸಭೆ ನಡೆಯುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿ ಸಿವೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೊಂ­ದಿಗೆ ಚೀನದ ರಕ್ಷಣಾ ಸಚಿವ ವೀ ಫೆಂ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next