Advertisement

ಕೆಸರು ಎರಚಿದಷ್ಟೂ ಕಮಲ ಅರಳುತ್ತದೆ: ರಾಜನಾಥ್‌

11:50 PM Mar 02, 2023 | Team Udayavani |

ಬೆಳಗಾವಿ: ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೇಣುಗಂಬ ಏರಿದ ನೆಲದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಗುರುವಾರ ಚಾಲನೆ ದೊರೆಯಿತು. ಖಾನಾಪುರ ತಾಲೂಕಿನ ನಂದಗಡದಲ್ಲಿ ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಚುನಾವಣ ಕಹಳೆ ಮೊಳಗಿಸಿದರು. ಆ ಮೂಲಕ ಕಿತ್ತೂರು ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲಲು ತೊಟ್ಟಿರುವ ಪಣವನ್ನು ಕಾರ್ಯರೂಪಕ್ಕೆ ತರಲು ಬಿಜೆಪಿ ಹೆಜ್ಜೆ ಇಟ್ಟಿದೆ.

Advertisement

ರಾಜನಾಥ್‌ ಅವರು ರಾಯಣ್ಣ ಸಮಾ ಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದ ಬಳಿಕ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದು, ಭಾರತವನ್ನು ವಿಭಜಿಸಿದ ಕಾಂಗ್ರೆಸ್‌ನವರು ಇಂದು ಭಾರತ್‌ ಜೋಡೋ ಮಾಡುತ್ತಿದ್ದಾರೆ. ಅವರು ಜೋಡಿಸಲು ಕರಾಚಿ, ಲಾಹೋರ್‌ಗೆ ತೆರಳಬೇಕಿತ್ತು. ಜನರ ಕಣ್ಣಲ್ಲಿ ಧೂಳು ಹಾಕುವವರು ಯಶಸ್ಸು ಸಾಧಿ ಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ನಾಯಕರು ಪ್ರಧಾನಿ ಮೋದಿಯ ಸಾವಿನ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡುತ್ತ ಹೋದಂತೆ ಕಮಲ ಅರಳುತ್ತದೆ. ನೀವು ಕೆಸರೆರಚಿದಷ್ಟೂ ಕಮಲ ಹೆಚ್ಚೆಚ್ಚು ಅರಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದರು.

ಮೋದಿಯಿಂದ ದೇಶ ಪ್ರಗತಿ
ಕಾಂಗ್ರೆಸ್‌ ಅ ಧಿಕಾರದಲ್ಲಿದ್ದಾಗ ಬಂದೂಕು, ಗುಂಡು, ತೋಪು ಬೇರೆ ದೇಶದಿಂದ ಖರೀದಿಸುವ ಪರಿಸ್ಥಿತಿ ಇತ್ತು. ಮೋದಿ ಬಂದಾಗಿನಿಂದ ಮೇಕ್‌ ಇನ್‌ ಇಂಡಿಯಾ ಮೂಲಕ ಅವೆಲ್ಲವೂ ಭಾರತದಲ್ಲೇ ತಯಾರಾಗುತ್ತಿವೆ. ಮೇಕ್‌ ಫಾರ್‌ ದಿ ವರ್ಲ್ಡ್ ಮೂಲಕ ಬೇರೆ ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದೇವೆ. ಇದು ಮೋದಿಯ ಎಂಟೆದೆಯ ತಾಕತ್ತು. ಹಿಂದೂ-ಮುಸ್ಲಿಮರು ಸಹೋದರರು ಇದ್ದಂತೆ. ತ್ರಿವಳಿ ತಲಾಖ್‌ನಿಂದ ಮಹಿಳೆಯರನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಇದನ್ನು ತೆಗೆದು ಹಾಕಿದ್ದೇವೆ ಎಂದರು.

50 ವರ್ಷಗಳ ಕಾಂಗ್ರೆಸ್‌ ಅವ ಧಿಯಲ್ಲಿ ಆಗದ ಕೆಲಸವನ್ನು ಮೋದಿ ಕೇವಲ 9 ವರ್ಷ ಗಳಲ್ಲಿ ಮಾಡಿದ್ದಾರೆ. 80 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಸಹಿತ 3.50 ಲಕ್ಷ ಕಿ.ಮೀ. ರಸ್ತೆ ನಿರ್ಮಿಸಿದ್ದಾರೆ ಎಂದ ರಾಜನಾಥ್‌, ಮೋದಿ ಕನಸು ಕರ್ನಾಟಕವನ್ನು ಅಭಿವೃದ್ಧಿ ಮಾಡು ವುದಾಗಿದೆ. ಕೈಗಾರಿಕಾ ಕಾರಿಡಾರ್‌ ನಿರ್ಮಾಣ, 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ, ರೈತರ ಅನುಕೂಲಕ್ಕಾಗಿ ಕೃಷಿ ಜಮೀನಿಗೆ ನೀರು ಹಾಗೂ ಮನೆ ಮನೆಗೆ ನೀರು ಒದಗಿಸಿದ್ದೇವೆ. ಹೇಳಿದ್ದನ್ನು ಮಾಡಿ ತೋರಿಸುವ ಕಾರ್ಯ ಮೋದಿಯಿಂದ ಮಾತ್ರ ಸಾಧ್ಯ ಎಂದರು.

ದೇಶದಲ್ಲಿ ಡಿಜಿಟಲ್‌ ಕ್ರಾಂತಿ
ಕೋವಿಡ್‌ ವೇಳೆಯಲ್ಲಿ ದೇಶದ ಪ್ರಜೆಗಳಿಗೆ ಉಚಿತ ಲಸಿಕೆ ನೀಡಿದ್ದು ಭಾರತ ಮಾತ್ರ. ಒಂದು ವೇಳೆ ಭಾರತದಲ್ಲಿ ಲಸಿಕೆ ನೀಡದಿದ್ದರೆ ಸುಮಾರು 39 ಲಕ್ಷ ಜನರು ಸಾಯುತ್ತಿದ್ದರು ಎಂದು ಹಾರ್ವರ್ಡ್‌ ವಿಶ್ವವಿದ್ಯಾನಿಲಯ ಹೇಳಿದೆ. ದೇಶದಲ್ಲಿ ಡಿಜಿಟಲ್‌ ಕ್ರಾಂತಿಯಾಗಿದೆ. ಈವರೆಗೆ 13 ಲಕ್ಷ ಕೋಟಿ ರೂ. ಮೊಬೈಲ್‌ನಿಂದ ವರ್ಗಾವಣೆ ಆಗಿದೆ ಎಂದರು.

Advertisement

ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ದೇಶದ ಅರ್ಥ ವ್ಯವಸ್ಥೆ 10-11ನೇ ಸ್ಥಾನದಲ್ಲಿ ಇತ್ತು. ಈಗ ಜಗತ್ತಿನ ಟಾಪ್‌ 5ರಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. 2027-28ರಲ್ಲಿ ಭಾರತ ಅತಿ ದೊಡ್ಡ ಆರ್ಥಿಕ ವ್ಯವಸ್ಥೆ ಆಗಲಿದೆ. ಜಾಗತಿಕ ವೇದಿಕೆ ಮೇಲೆ ಭಾರತ ಏನು ಮಾತನಾಡುತ್ತಿದೆ ಎಂಬುದನ್ನು ಜಗತ್ತು ಕೇಳುವಷ್ಟು ಬೆಳೆದಿದ್ದೇವೆ ಎಂದು ಹೇಳಿದರು.

ಕರ್ನಾಟಕ ವೀರ- ಶೌರ್ಯದ ಪ್ರತೀಕ
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಗಿಂತಲೂ ಮೊದಲು ಬ್ರಿಟಿಷರ ವಿರುದ್ಧ ಯುದ್ಧ ಸಾರಿದ ರಾಣಿ ಚನ್ನಮ್ಮನ ನಾಡಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಚನ್ನಮ್ಮ, ರಾಯಣ್ಣನಿಗೆ ಮಾಲಾರ್ಪಣೆ ಮಾಡಿದ್ದು ನನ್ನ ಸೌಭಾಗ್ಯ. ಕರ್ನಾಟಕ ವೀರ ಹಾಗೂ ಶೌರ್ಯದ ಪ್ರತೀಕ. ಬೆಳಗಾವಿ ಕರ್ನಾಟಕದ ಶಿಖರ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿಗೆ ಮೆಚ್ಚುಗೆ
2018ರಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿದ್ದ ಬಿಜೆಪಿಯ ಯಡಿಯೂರಪ್ಪ ಕೇವಲ 6 ದಿನಗಳ ಕಾಲ ಮುಖ್ಯಮಂತ್ರಿಯಾದರು. ಬಳಿಕ ಎಚ್‌.ಡಿ.ಕುಮಾರಸ್ವಾಮಿಯ ಸಮ್ಮಿಶ್ರ ಸರಕಾರ ಬಂತು. ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅವರ ಆರೋಗ್ಯ ಕ್ಷೀಣಿಸಿದ್ದರಿಂದ ಅ ಧಿಕಾರ ಬಿಟ್ಟು ಕೊಟ್ಟರು. ಅನಂತರ ಸರಳ, ಸಜ್ಜನಿಕೆ, ಪ್ರಾಮಾಣಿಕರಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡಿ ಗೌರವ ನೀಡಲಾಗಿದೆ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next