Advertisement

ಸಿಬಿಐ ವಿಚಾರಣೆಗೆ ಸಹಕರಿಸಿದ ರಾಜೀವ್‌

12:30 AM Feb 10, 2019 | Team Udayavani |

ಕೋಲ್ಕತಾ: ಶಾರದಾ ಚಿಟ್‌ಫ‌ಂಡ್‌ ಹಗರಣಕ್ಕೆ ಸಂಬಂಧಿಸಿದಂತೆ, ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಶನಿವಾರ ಕೋಲ್ಕತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತು. 

Advertisement

ಸತತ ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ಸರಿಯಾಗಿ ಸಹಕರಿಸದ, ಆಯುಕ್ತ ರಾಜೀವ್‌ ಕುಮಾರ್‌ ಅವರು ನಂತರದ ಹಂತದಲ್ಲಿ ತನಿಖೆಗೆ ಸಹಕಾರ ನೀಡಿದರು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಶಿಲ್ಲಾಂಗ್‌ನ ಓಕ್‌ಲ್ಯಾಂಡ್‌ನ‌ಲ್ಲಿರುವ ಸಿಬಿಐ ಕಚೇರಿಯಲ್ಲಿ 11 ಗಂಟೆಯಿಂದ ಶುರುವಾದ ವಿಚಾರಣೆ, ರಾತ್ರಿ 9 ಗಂಟೆಯವರೆಗೆ ಮುಂದುವರಿದಿತ್ತು. ಇದಕ್ಕಾಗಿ, ದೆಹಲಿಯಿಂದ ಸಿಬಿಐನ ಮೂವರು ಅಧಿಕಾರಿಗಳು ಶಿಲ್ಲಾಂಗ್‌ಗೆ ಆಗಮಿಸಿದ್ದರು. ವಿವೇಕ್‌ ದತ್‌ ನೇತೃತ್ವದ 12 ಮಂದಿ ಸಿಬಿಐ ಅಧಿಕಾರಿಗಳ ತಂಡ ವಿಚಾರಣೆಯಲ್ಲಿ ಪಾಲ್ಗೊಂಡಿತ್ತು. ಶಾರದಾ ಚಿಟ್‌ಫ‌ಂಡ್‌ ಹಗರಣದ ತನಿಖೆ ನಡೆಸಿದ್ದ ಪಶ್ಚಿಮ ಬಂಗಾಳ ಪೊಲೀಸ್‌ನ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವವನ್ನು ರಾಜೀವ್‌ ಕುಮಾರ್‌ ಅವರೇ ವಹಿಸಿಕೊಂಡಿದ್ದು, ಆ ವೇಳೆ ಸಾಕ್ಷ್ಯಾಧಾರಗಳು ನಾಶವಾಗಿರುವ ಹಿನೆ‌°ಲೆಯಲ್ಲಿ ಅವರನ್ನು ವಿಚಾರಣೆಗೊಳಪಡಿಸಿದೆ. ಕೋಲ್ಕತಾದಲ್ಲಿ ಇವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲು ಸಿಬಿಐ ಯತ್ನಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next