Advertisement

ಚಂದ್ರಯಾನ-2 ಫ‌ಲಿತಾಂಶಕ್ಕೆ ಕಾಯುತ್ತಿರುವ ರಾಜೀವ್‌

08:47 AM Jul 30, 2019 | sudhir |

ಹೊಸದಿಲ್ಲಿ: ಚಂದ್ರಯಾನ-2 ಯೋಜನೆಯ ಯಶಸ್ವಿ ಉಡಾವಣೆ ಭಾರತೀಯ ವಿಜ್ಞಾನಿಗಳಿಗೆ ಖುಷಿ ಕೊಟ್ಟಿರುವುದು ಮಾತ್ರವಲ್ಲ, ದೂರದ ನ್ಯೂಯಾರ್ಕ್‌ನಲ್ಲಿರುವ ಭಾರತ ಮೂಲದ ರಾಜೀವ್‌ ವಿ. ಬಾಗ್ಡಿ ಎಂಬವರಲ್ಲೂ ರೋಮಾಂಚನ ತಂದಿದೆ.

Advertisement

ಅದಕ್ಕೆ ಕಾರಣ, ಚಂದ್ರನಲ್ಲಿ 2003ರಲ್ಲಿ ಅವರು ಸೈಟು ಕೊಂಡಿರುವುದು! ಅಚ್ಚರಿ ಯಾ ದರೂ ಇದು ನಿಜ. ಬಾಲ್ಯದಿಂದಲೇ ಚಂದ್ರನ ಮೇಲಿನ ಸಂಶೋಧನೆಗಳಿಂದ ಆಕರ್ಷಿತವಾ ಗಿದ್ದ ಅವರು, 2003ರಲ್ಲಿ ನ್ಯೂಯಾರ್ಕ್‌ನ ಲೂನಾರ್‌ ಸೊಸೈಟಿ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ, 140 ಡಾಲರ್‌ ನೀಡಿ ಚಂದ್ರನಲ್ಲಿ ಸೈಟು ಕೊಂಡಿದ್ದರು.

ಹಾಗಾಗಿ, ಚಂದ್ರಯಾನ-2 ಸಂಶೋಧನೆಯಲ್ಲಿ ಚಂದ್ರನ ಮೇಲೆ ನೀರಿನ ನಿಕ್ಷೇಪ ಪತ್ತೆಯಾದರೆ 2030ರ ಹೊತ್ತಿಗೆ ಅಲ್ಲಿಗೆ ಸ್ಥಳಾಂತರಗೊಳ್ಳಲು ಅವರು ಕಾಯುತ್ತಿದ್ದಾರೆ!

ಆರ್ಬಿಟರ್‌ ಅವಧಿ ವಿಸ್ತರಣೆ?
ಚಂದ್ರಯಾನ-2 ಅಡಿಯಲ್ಲಿ ಚಂದ್ರನನ್ನು 1 ವರ್ಷ ದವರೆಗೆ ಸುತ್ತಲಿರುವ ಆರ್ಬಿಟರ್‌ನ ಕಾಲಾವಧಿ 2 ವರ್ಷಕ್ಕೆ ಹೆಚ್ಚಾಗುವ ಸಾಧ್ಯತೆಗಳಿವೆ. ಉಡಾವಣೆ ವೇಳೆ ಆರ್ಬಿಟರ್‌ನಲ್ಲಿ 1,697 ಕೆ.ಜಿ. ಇಂಧನದ ಜತೆಗೆ ಹೆಚ್ಚುವರಿಯಾಗಿ 40 ಕೆ.ಜಿ. ಇಂಧನ ತುಂಬ ಲಾಗಿತ್ತು. ಈಗ, ನಿರೀಕ್ಷಿತ ದಿನದಂದೇ ಆರ್ಬಿಟರ್‌, ಚಂದ್ರನ ಕಕ್ಷೆ ತಲುಪಲಿದ್ದು, ಅದರಲ್ಲಿನ ಹೆಚ್ಚುವರಿ ಇಂಧನ ಹಾಗೆಯೇ ಉಳಿಯುತ್ತದೆ. ಅದನ್ನು ಬಳಸಿಕೊಂಡು ಆರ್ಬಿಟರ್‌ ಅನ್ನು ಮತ್ತೂಂದು ವರ್ಷದವರೆಗೆ ಚಂದ್ರನನ್ನು ಸುತ್ತುವಂತೆ ಮಾಡುವ ಬಗ್ಗೆ ಇಸ್ರೋ ಚಿಂತನೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next