Advertisement

“Ram temple ಬೀಗ ತೆಗೆದದ್ದೇ ನಾವು’: ಕಮಲ್‌ನಾಥ್‌

11:53 PM Nov 03, 2023 | Team Udayavani |

ಹೊಸದಿಲ್ಲಿ:”1986ರಲ್ಲಿ ಅಯೋಧ್ಯೆಯಲ್ಲಿ ಆಗ ಇದ್ದ ತಾತ್ಕಾಲಿಕ ರಾಮ ದೇಗುಲದ ಬೀಗ ತೆರೆದುಕೊಟ್ಟು ಪ್ರಾರ್ಥನೆಗೆ ಅವಕಾಶ ಕೊಟ್ಟದ್ದೇ ರಾಜೀವ್‌ ಗಾಂಧಿ. ಹೀಗಾಗಿ ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ಪ್ರಚಾರ ಪಡೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್‌ ಸಂದರ್ಶನವೊಂದರಲ್ಲಿ ಹೇಳಿದ್ದು, ಇದಕ್ಕೆ ಟೀಕೆ ವ್ಯಕ್ತವಾಗಿದೆ.

Advertisement

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ರಾಮ ಮಂದಿರ ನಿರ್ಮಾಣದಲ್ಲಿ ಬಿಜೆಪಿ ಯಾವತ್ತೂ ಹೆಗ್ಗಳಿಕೆ ಪಡೆದುಕೊಳ್ಳಲು ಪ್ರಯತ್ನ ಮಾಡಿಲ್ಲ. ಯಾರು ಕೂಡ ಮಂದಿರ ವಿಚಾರದ ಲಾಭ ಪಡೆದುಕೊಳ್ಳಬಾರದು ಎಂದರೆ ಕಮಲ್‌ನಾಥ್‌ ರಾಜೀವ್‌ ಹೆಸರನ್ನೇಕೆ ಪ್ರಸ್ತಾವ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ರವಿಶಂಕರ ಪ್ರಸಾದ್‌ ಕೂಡ ಆಕ್ರೋಶ ವ್ಯಕ್ತಪಡಿಸಿ “ಚುನಾವಣೆ ಸಂದರ್ಭದಲ್ಲಿ ಮಾತ್ರ ಕಮಲ್‌ನಾಥ್‌ ಹಿಂದೂ ಆಗುತ್ತಾರೆ’ ಎಂದು ಟೀಕಿಸಿದ್ದಾರೆ.

ಒವೈಸಿ ಟೀಕೆ: ಕಮಲ್‌ನಾಥ್‌ ಅವರ ಹೇಳಿಕೆ ಕಾಂಗ್ರೆಸ್‌ನ ನಿಜ ಬಣ್ಣ ಬಯಲು ಮಾಡಿದಂತಾ ಗಿದೆ ಎಂದು ಎಂಐಎಂ ನಾಯಕ ಅಸಾಸುದ್ದೀನ್‌ ಒವೈಸಿ ಟೀಕಿಸಿದ್ದಾರೆ.

“ಕಾಂಗ್ರೆಸೇ ಆರ್‌ಎಸ್‌ಎಸ್‌ನ ತಾಯಿ. 1986ರಲ್ಲಿ ರಾಹುಲ್‌ ಗಾಂಧಿಯವರ ತಂದೆ ರಾಜೀವ್‌ ಗಾಂಧಿಯವರೇ ಪ್ರಧಾನಿಯಾಗಿದ್ದರು. ಮಸೀದಿ ಧ್ವಂಸದಲ್ಲಿ ಬಿಜೆಪಿಯಷ್ಟೇ ಕಾಂಗ್ರೆಸ್‌ ಕೂಡ ಸಮಾನ ಪಾಲುದಾರ’ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next