Advertisement

Rank; ರಾಜೀವ್‌ ಗಾಂಧಿ ಆರೋಗ್ಯ ವಿವಿ: ಉಡುಪಿ ನೇತ್ರ ಜ್ಯೋತಿ ಕಾಲೇಜಿನ ಅತ್ಯುತ್ತಮ ಸಾಧನೆ

07:25 PM Feb 09, 2024 | Team Udayavani |

ಉಡುಪಿ :ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು 2022 ಮತ್ತು 2023 ನೇ ಸಾಲಿನ ವಿವಿಧ ಅರೆ ವೈದ್ಯಕೀಯ ಪದವಿ ಕೋಸ್‌೯ಗಳಿಗೆ ನಡೆಸಿದ ಪರೀಕ್ಷೆಗಳಲ್ಲಿ ಉಡುಪಿಯ ನೇತ್ರಜ್ಯೋತಿ ಅರೆವೈದ್ಯಕೀಯ ಕಾಲೇಜಿನ ಹನ್ನೆರಡು ಮಂದಿ ವಿದ್ಯಾಥಿ೯ಗಳು ರ‍್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

Advertisement

2023 ಡಿಸೆಂಬರ್ ನಲ್ಲಿ ನಡೆದಿರುವ ಸಾರ್ವಜನಿಕ ಆರೋಗ್ಯ ಪದವಿ ಪರೀಕ್ಷೆಯಲ್ಲಿ ಅಶಿತಾ (ಪ್ರಥಮ), ಕವಿತಾ ನಾಯಕ್‌ (ತೃತೀಯ), ರಫಿಯಾ ರಾಯ್‌ಭಾಗ್‌ (4ನೇ ), ಪವನ್‌ ಕುಮಾರ್‌ (6ನೇ ), ಪ್ರೀತಿ ಚಿಕ್ಕಮಟ್‌ (8ನೇ ) ರ‍್ಯಾಂಕ್ ಗಳನ್ನು ಪಡೆದಿದ್ದಾರೆ.

ಆಸ್ಪತ್ರೆ ಆಡಳಿತ ಪದವಿ ಪರೀಕ್ಷೆಯಲ್ಲಿ ಶಾಂಭವಿ (ಪ್ರಥಮ), ಹಷಿ೯ತ್‌ ಕುಮಾರ್‌ (ದ್ವಿತೀಯ), ನವ್ಯ (9ನೇ ) ರ‍್ಯಾಂಕ್ ಗಳನ್ನು ಪಡೆದಿದ್ದಾರೆ.

ಬಿ.ಎಸ್ಸಿ ಆಪರೇಷನ್‌ ಥಿಯೇಟರ್‌ ಪರೀಕ್ಷೆಯಲ್ಲಿ ಕಾವ್ಯ (ದ್ವಿತೀಯ), ಚೈತ್ರ (5ನೇ), ತೇಜಸ್ವಿನಿ (6ನೇ) ಮತ್ತು ದೀಕ್ಷಿತಾ (7ನೇ) ರ‍್ಯಾಂಕ್ ಪಡೆದಿರುತ್ತಾರೆ.

ಅರೆ ವೈದ್ಯಕೀಯ ಪದವಿ ಕೋಸ್‌೯ಗಳಲ್ಲಿ ಹನ್ನೆರಡು ರ್ಯಾಂಕ್‌ಗಳನ್ನು ಪಡೆಯುವ ಮೂಲಕ ನೇತ್ರ ಜ್ಯೋತಿ ವಿದ್ಯಾ ಸಂಸ್ಥೆಯು ಅಭೂತಪೂವ೯ ಸಾಧನೆಯನ್ನು ತೋರಿಸಿದ್ದು, ಈ ಸಾಧನೆಗೆ ಕಾರಣರಾದ ವಿದ್ಯಾಥಿ೯ ಮತ್ತು ಪ್ರಾಧ್ಯಾಪಕ ವೃಂದವನ್ನು ಕಾಲೇಜಿನ ಆಡಳಿತ ನಿದೇ೯ಶಕಿ ರಶ್ಮಿ ಕೃಷ್ಣ ಪ್ರಸಾದ್‌ರವರು ಅಭಿನಂದಿಸಿದ್ದಾರೆ.

Advertisement

ಎಲ್ಲಾ ವರ್ಗಗಳ ವಿದ್ಯಾಥಿ೯ಗಳಿಗೆ ಗುಣಮಟ್ಟದ ಅರೆ ವೈದ್ಯಕೀಯ ಶಿಕ್ಷಣವನ್ನು ನೀಡಿ ಅವರನ್ನು ಪರಿಪೂಣ೯ ಅರೆವೈದ್ಯಕೀಯ ವೃತ್ತಿಪರರನ್ನಾಗಿಸಿ ವೈದ್ಯಕೀಯ ರಂಗದ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಕೆಲವೇ ವರುಷಗಳ ಹಿಂದೆ ಸ್ಥಾಪಿಸಲಾಗಿರುವ ನಮ್ಮ ವಿದ್ಯಾಸಂಸ್ಥೆಯ ಈ ಸಾಧನೆಯು ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

ನೇತ್ರ ಜ್ಯೋತಿ ವಿದ್ಯಾಸಂಸ್ಥೆಯು ಸದ್ಯದಲ್ಲಿಯೇ ಉಡುಪಿಯ ಹೃದಯಭಾಗದಲ್ಲಿ ನೂತನವಾಗಿ ನಿಮಿ೯ಸಲಾಗುತ್ತಿರುವ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು ಅಲ್ಲಿರುವ ಸುಸಜ್ಜಿತ ಪ್ರಯೋಗಾಲಯಗಳು,ಡಿಜಿಟಲ್‌ ತರಗತಿ ಕೋಣೆಗಳು, ಗ್ರಂಥಾಲಯ ಮುಂತಾದ ವ್ಯವಸ್ಥೆಗಳು ವಿದ್ಯಾಥಿ೯ಗಳ ವಿದ್ಯಾರ್ಜನೆಯಲ್ಲಿ ಹೊಸ ಮಜಲನ್ನು ನೀಡಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next