Advertisement

ರಾಜೀವ್‌ ಹಂತಕಿ ನಳಿನಿಗೆ 30 ದಿನ ಪೆರೋಲ್

12:21 AM Jul 06, 2019 | Team Udayavani |

ಚೆನ್ನೈ: ಮಾಜಿ ಪ್ರಧಾನಿ ದಿ.ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ನಳಿನಿ ಶ್ರೀಹರನ್‌ಗೆ ಮದ್ರಾಸ್‌ ಹೈಕೋರ್ಟ್‌ ಒಂದು ತಿಂಗಳ ಮಟ್ಟಿಗೆ ಪೆರೋಲ್ ನೀಡಿದೆ. ನಳಿನಿಯು ತನ್ನ ಮಗಳ ಮದುವೆ ಇದ್ದು, ಅದರ ತಯಾರಿಗಾಗಿ 6 ತಿಂಗಳ ಕಾಲ ಜೈಲಿನಿಂದ ಹೊರಕಳಿಸ ಬೇಕೆಂದು ಅರ್ಜಿ ಸಲ್ಲಿಸಿದ್ದಳು. ಜತೆಗೆ, ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಂಡಿಸಿದ್ದಳು. ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ. ಎಂ.ಎಂ. ಸುಂದ್ರೇಶ್‌ ನೇತೃತ್ವದ ಪೀಠ, ನಳಿನಿ ಬಿಡುಗಡೆ ಸಂಬಂಧಿಸಿದ ಪ್ರಕ್ರಿಯೆಯನ್ನು ಇನ್ನು 10 ದಿನಗಳ ಒಳಗಾಗಿ ಮುಗಿಸುವಂತೆ ತಮಿಳುನಾಡು ಸರ್ಕಾರಕ್ಕೆ ಹೇಳಿದೆ. ಜೊತೆಗೆ ನಳಿನಿಗೆ ಯಾವುದೇ ರಾಜಕೀಯ ನಾಯಕರನ್ನು ಭೇಟಿಯಾಗದಂತೆ ಮತ್ತು ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ತಾಕೀತು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next