Advertisement

ಐಸಿಎಂಆರ್ ಮಹಾನಿರ್ದೇಶಕರಾಗಿ ಡಾ.ರಾಜೀವ್ ಬಹ್ಲ್ ನೇಮಕ

07:45 PM Sep 23, 2022 | Team Udayavani |

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕರಾಗಿ ಮತ್ತು ಮೂರು ವರ್ಷಗಳ ಅವಧಿಗೆ ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿ ಡಾ.ರಾಜೀವ್ ಬಹ್ಲ್ ಅವರನ್ನು ಶುಕ್ರವಾರ ನೇಮಿಸಲಾಗಿದೆ.

Advertisement

ಬಹ್ಲ್ ಪ್ರಸ್ತುತ ಜಿನೀವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ (WHO) ತಾಯ್ತನ, ನವಜಾತ ಶಿಶು, ಹದಿಹರೆಯದವರ ಆರೋಗ್ಯ ಇಲಾಖೆಯ ಘಟಕದ ಮುಖ್ಯಸ್ಥರಾಗಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ : ಕರ್ನಾಟಕದಲ್ಲಿ ಸೋನಿಯಾ, ಪ್ರಿಯಾಂಕಾ ಭಾಗಿ

ಕ್ಯಾಬಿನೆಟ್ ನೇಮಕಾತಿ ಸಮಿತಿಯು ಡಾ. ರಾಜೀವ್ ಬಹ್ಲ್ ಅವರನ್ನು ಮೂರು ವರ್ಷಗಳ ಅವಧಿಗೆ ಐಸಿಎಂಆರ್- ಜತೆಗೆ -ಸೆಕ್ರೆಟರಿ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ರಿಸರ್ಚ್ ಹುದ್ದೆಗೆ ನೇಮಕ ಮಾಡಲು ಅನುಮೋದನೆ ನೀಡಿದೆ. ಸಿಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.

ಹಿಂದಿನ ಐಸಿಎಂಆರ್ ನ ಡೈರೆಕ್ಟರ್ ಜನರಲ್ ಮತ್ತು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಡಾ. ಬಲರಾಮ್ ಭಾರ್ಗವ ಅವರ ವಿಸ್ತರಿಸಿದ ಅಧಿಕಾರಾವಧಿಯು ಜುಲೈನಲ್ಲಿ ಕೊನೆಗೊಂಡಿತ್ತು. ಭಾರ್ಗವ ಅವರನ್ನು ಏಪ್ರಿಲ್ 16, 2018 ರಂದು ನಾಲ್ಕು ವರ್ಷಗಳ ಕಾಲ ಹುದ್ದೆಗೆ ನೇಮಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next