Advertisement

Jailer‌: ರಿಲೀಸ್‌ಗೂ ಮುನ್ನ ʼಜೈಲರ್‌ʼ ಸ್ಟೋರಿ ಲೈನ್‌ ಲೀಕ್; ಸ್ಕ್ರೀನ್‌ ಶಾಟ್‌ ವೈರಲ್

12:53 PM Jul 18, 2023 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼಜೈಲರ್‌ʼ ಸಿನಿಮಾ ರಿಲೀಸ್‌ ಗೂ ಮುನ್ನ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದೆ. ಸಿನಿಮಾದ ಬಗ್ಗೆ ರಜಿನಿ ಅಭಿಮಾನಿಗಳು ದೊಡ್ಡಮಟ್ಟದ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

Advertisement

ಈಗಾಗಲೇ ಸಿನಿಮಾದ ʼಕಾವಾಲಾʼ ಹಾಡು ವೈರಲ್‌ ಆಗಿದೆ. ನಟಿ ತಮನ್ನಾ ಅವರು ಸೊಂಟ ಬಳುಕಿಸಿ ಹಾಕಿರುವ ಸ್ಟೆಪ್‌ ಪಡ್ಡೆ ಹೈಕಳ ಕಣ್ಣು ಕುಕ್ಕಿದೆ. ಇದರೊಂದಿಗೆ ಸೋಮವಾರ(ಜು.17 ರಂದು) ಬಿಡುಗಡೆಯಾದ ʼಹುಕುಂʼ ಹಾಡನ್ನು ಕೇಳಿ ಫ್ಯಾನ್ಸ್‌ ಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅನಿರುದ್ಧ್‌ ಅವರ ಕ್ರೇಜಿ ಮ್ಯೂಸಿಕ್‌ ಬೀಟ್‌ ಗೆ ಫ್ಯಾನ್ಸ್‌ ಗಳು ಫಿದಾ ಆಗಿದ್ದಾರೆ.

ಆಗಸ್ಟ್‌ 10 ರಂದು ಸಿನಿಮಾ ವರ್ಲ್ಡ್‌ ವೈಡ್‌ ತೆರೆಗೆ ಬರಲಿದೆ. ಈ ನಡುವೆ ಕೆಲ ಬುಕ್ಕಿಂಗ್‌ ಸೈಟ್‌ ಗಳಲ್ಲಿ ಸಿನಿಮಾದ ಸ್ಟೋರಿ ಲೈನ್‌‌ ಲೀಕ್ ಆಗಿದ್ದು, ಇದೀಗ ವೈರಲ್‌ ಆಗಿದೆ. ವಿದೇಶದ ಸಿನಿಮಾ ಬುಕ್ಕಿಂಗ್‌ ಸೈಟ್‌ ಗಳಲ್ಲಿ ʼಜೈಲರ್;‌ ಚಿತ್ರದ ಸ್ಟೋರಿ ಲೈನ್‌ ಹಾಗೂ ಸಿನಿಮಾದ ರನ್ನಿಂಗ್‌ ಟೈಮ್‌ ಲೀಕ್‌ ಆಗಿದೆ.

ಇದನ್ನೂ ಓದಿ: Maamannan: ವಡಿವೇಲು‌,ಉದಯನಿಧಿ ಅಭಿನಯದ “ಮಾಮಣ್ಣನ್” ಓಟಿಟಿ ತೆರೆಗೆ ಡೇಟ್‌ ಫಿಕ್ಸ್

ರಜಿನಿಕಾಂತ್‌ ಸಿನಿಮಾದಲ್ಲಿ ವಾರ್ಡನ್‌ ಆಗಿ ಕಾಣಿಸಿಕೊಳ್ಳಲಿದ್ದು, ಜೈಲಿನಲ್ಲಿ ಕೆಲ ಖೈದಿಗಳು ಅವರ ನಾಯಕನನ್ನು ಬಿಡುಗಡೆ ಮಾಡಲು ನಿಯಮ ಮುರಿಯುವ ಕಥೆಯಿದೆ ಎಂದು ಬರೆದಿರುವ ಲೈನ್‌ ವಿದೇಶಿ ಟಿಕೆಟ್‌ ಬುಕ್ಕಿಂಗ್‌ ಸೈಟ್‌ ನಲ್ಲಿ ವೈರಲ್‌ ಆಗಿದೆ. ಸಿನಿಮಾ 2 ಗಂಟೆ 30 ನಿಮಿಷವಿದೆ ಎಂದು ಬರೆಯಲಾಗಿದೆ.

Advertisement

ಈ ಕುರಿತ ಸ್ಕ್ರೀನ್‌ ಶಾಟ್‌ ಗಳು ಟ್ವಿಟರ್‌ ನಲ್ಲಿ ವೈರಲ್‌ ಆಗಿದೆ.

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಸಿನಿಮಾ ಶೂಟಿಂಗ್‌ ಬಳಿಕ ಮಾಲ್ಡೀವ್ಸ್‌ ನಲ್ಲಿ ರಿಲ್ಯಾಕ್ಸ್‌ ಮೂಡ್‌ ನಲ್ಲಿದ್ದಾರೆ.

ನೆಲ್ಸಾನ್‌ ನಿರ್ದೇಶನದ ʼಜೈಲರ್‌ʼ ಸಿನಿಮಾದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಕನ್ನಡದ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ವಿನಾಯಕನ್ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next