Advertisement

Lal Salaam: 40 ನಿಮಿಷಗಳ ಪಾತ್ರಕ್ಕೆ ರಜನೀಕಾಂತ್‌ಗೆ 40 ಕೋ.ರೂ.

08:28 PM Feb 08, 2024 | Team Udayavani |

ಚೆನ್ನೈ: ಫೆ.9ರಂದು ತೆರೆ ಕಾಣುತ್ತಿರುವ “ಲಾಲ್‌ ಸಲಾಮ್‌’ ಚಿತ್ರದಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ವಿಶೇಷಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಸುಮಾರು 30-40 ನಿಮಿಷಗಳು ಇರಲಿದ್ದಾರೆ.

Advertisement

ಈ ಪಾತ್ರಕ್ಕಾಗಿ ಅವರು ಬರೋಬ್ಬರಿ 40 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅಂದರೆ ಪ್ರತಿ ನಿಮಿಷಕ್ಕೆ ಸುಮಾರು 1 ಕೋಟಿ ರೂ. ಪಡೆದಿದ್ದಾರೆ. ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯ ರಜನಿಕಾಂತ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಟರಾದ ವಿಷ್ಣು ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲೈಕಾ ಪ್ರೊಡಕ್ಸನ್ಸ್‌ ಈ ಚಿತ್ರವನ್ನು ನಿರ್ಮಿಸಿದೆ. ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next