ಚೆನ್ನೈ: ʼಜೈಲರ್ʼ ನೋಡಲು ಸಾವಿರಾರು ರಜಿನಿಕಾಂತ್ ಫ್ಯಾನ್ಸ್ ಗಳು ಥಿಯೇಟರ್ ಮುಂಭಾಗದಲ್ಲಿ ನೆರೆದಿದ್ದಾರೆ. ʼತಲೈವಾʼರನ್ನು ಎರಡು ವರ್ಷದ ಬಳಿಕ ಬಿಗ್ ಸ್ಕ್ರೀನ್ ನಲ್ಲಿ ನೋಡಲು ಜನ ಥಿಯೇಟರ್ ನತ್ತ ಹರಿದು ಬರುತ್ತಿದ್ದಾರೆ.
ಮುಂಜಾನೆಯಿಂದಲೇ ಕೆಲ ಥಿಯೇಟರ್ ಗಳು ʼಜೈಲರ್ʼ ನಿಂದ ಹೌಸ್ ಫುಲ್ ಗೊಂಡಿವೆ. ಸಿನಿಮಾದ ಬಗ್ಗೆ ಪಾಸಿಟಿವ್ ಮಾತುಗಳು ಕೇಳಿ ಬರುತ್ತಿದೆ. ʼಜೈಲರ್ʼ ನೋಡಲು ದೂರದ ಊರಿನಿಂದ ಬರುತ್ತಿರುವುದು ಮಾತ್ರವಲ್ಲದೇ ದೂರದ ದೇಶದಿಂದಲೂ ಬಂದಿದ್ದಾರೆ.!
ಜಪಾನ್ ಮೂಲದ ದಂಪತಿಗಳು ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾವನ್ನು ನೋಡಲು ಚೆನ್ನೈಗೆ ಬಂದಿದ್ದಾರೆ. ಜಪಾನ್ ನ ಒಸಾಕಾದಿಂದ ಚೆನ್ನೈಗೆ ಯಸುದಾ ಹಿಡೆತೋಶಿ ದಂಪತಿಗೆ ಬಂದಿದ್ದು, ʼಜೈಲರ್ʼಸಿನಿಮಾವನ್ನು ವೀಕ್ಷಿಸಿದ್ದಾರೆ.
ʼನಾವು ʼಜೈಲರ್ʼ ನೋಡಲು ಜಪಾನ್ ನಿಂದ ಚೆನ್ನೈಗೆ ಬಂದಿದ್ದೇವೆ. ನಾನು ರಜಿನಿಕಾಂತ್ ಅವರ ದೊಡ್ಡ ಅಭಿಮಾನಿ. ಮೊದಲಿನಿಂದಲೂ ಅವರ ಸಿನಿಮಾವನ್ನು ನೋಡುತ್ತಾ ಬಂದಿದ್ದೇನೆ ಎಂದರು.
ʼಮುತ್ತುʼ (1998) ಸಿನಿಮಾದಿಂದ ಆರಂಭವಾದ ಇವರ ಅಭಿಮಾನ ಇದುವರೆಗೂ ಮುಂದುವರೆದಿದೆ. ʼಮುತ್ತುʼ ಜಪಾನ್ ನಲ್ಲಿ 100 ದಿನ ಓಡಿತ್ತು. 2002 ರಲ್ಲಿ ಮೊದಲ ಬಾರಿ ರಜಿನಿಕಾಂತ್ ಅವರನ್ನು ಹಿಡೆತೋಶಿ ಭೇಟಿಯಾಗಿದ್ದರು.
ಹಿಡೆತೋಶಿ ಜಪಾನ್‌ನಲ್ಲಿ ರಜಿನಿಕಾಂತ್ ಅಭಿಮಾನಿಗಳ ಸಂಘದ ನಾಯಕರಾಗಿದ್ದಾರೆ.
ʼಜೈಲರ್ʼ ನಲ್ಲಿ ನನ್ನ ಮೆಚ್ಚಿನ ಡೈಲಾಗ್ಸ್ ʼಹುಕುಂ ಟೈಗರ್ ಕಾ ಹುಕುಂʼ ಎಂದು ಹಿಡೆತೋಶಿ ಹೇಳುತ್ತಾರೆ.