Advertisement

Rajinikanth ಬಯೋಪಿಕ್‌ಗೆ ಭರ್ಜರಿ ತಯಾರಿ; ಬಾಲಿವುಡ್‌ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ

02:32 PM May 02, 2024 | Team Udayavani |

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಸಿನಿಜರ್ನಿ ಸುಲಭದ್ದೇನಲ್ಲ. ಸಾಮಾನ್ಯ ಬಸ್‌ ಕಂಡಕ್ಟರ್‌ನಿಂದ ಹಿಡಿದು ಸಾವಿರಾರು ಕೋಟಿ ಬಿಝಿನೆಸ್‌ ತಂದುಕೊಡುವ ಸೂಪರ್‌ ಸ್ಟಾರ್‌ವರೆಗಿನ ಹಾದಿ ಬಲು ರೋಚಕವಾದುದು. ಅದೇ ಕಾರಣದಿಂದ ರಜನಿಕಾಂತ್‌ ಎಂದರೆ ಇವತ್ತಿಗೂ ಅನೇಕರಿಗೆ ಅಚ್ಚರಿ. ಈಗ ಈ ಅಚ್ಚರಿಯನ್ನು ಪ್ರೇಕ್ಷಕರ ಮುಂದೆ ಇಡುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ.

Advertisement

ರಜನಿಕಾಂತ್‌ ಅವರ ಬಯೋಪಿಕ್‌ ಮಾಡಲು ಬಾಲಿವುಡ್‌ ನಿರ್ಮಾಪಕರೊಬ್ಬರು ಆಸಕ್ತಿ ತೋರಿದ್ದಾರೆ. ಅವರು ಬೇರಾರು ಅಲ್ಲ, ಬಾಲಿವುಡ್‌ನ‌ಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಸಾಜಿದ್‌ ನಾಡಿಯಾದ್ವಾಲ. ಇವರು ರಜನಿಕಾಂತ್‌ ಅವರ ಬಯೋಪಿಕ್‌ ಅನ್ನು ಅದ್ಧೂರಿ ಬಜೆಟ್‌ನಲ್ಲಿ, ಬಹುಭಾಷೆಯಲ್ಲಿ

ನಿರ್ಮಿಸಲಿದ್ದಾರಂತೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯಾಗಿ ತೆರೆಮರೆಯಲ್ಲಿ ಕೆಲಸಗಳು ಕೂಡಾ ಆರಂಭವಾಗಿವೆ ಎಂಬ ಸುದ್ದಿ ಕೇಳಿಬಂದಿದೆ. ಎಲ್ಲಾ, ಓಕೆ, ರಜನಿಕಾಂತ್‌ ಬಯೋಪಿಕ್‌ ಅನ್ನು ನಿರ್ದೇಶಿಸುತ್ತಿರುವುದು ಯಾರು ಎಂಬ ಪ್ರಶ್ನೆ ಸಹಜ. ಸದ್ಯ ಈ ವಿಚಾರವನ್ನು ತಂಡ ಗೌಪ್ಯವಾಗಿಟ್ಟಿದೆ.

ಸದ್ಯ ರಜನಿಕಾಂತ್‌ ಅವರ 170ನೇ ಸಿನಿಮಾ “ವೆಟ್ಟೈಯಾನ್‌’ ನಡೆಯುತ್ತಿದ್ದು, ಇದರ ಜೊತೆಗೆ 171 ಸಿನಿಮಾ “ಕೂಲಿ’ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಬಯೋಪಿಕ್‌ ಮುಂದಿನ ವರ್ಷ ಸೆಟ್ಟೇರಬಹುದು.

Advertisement

Udayavani is now on Telegram. Click here to join our channel and stay updated with the latest news.

Next