Advertisement

35 ವರ್ಷದ ಬಳಿಕ ಕಮಲ್‌-ರಜನಿ ಒಟ್ಟಿಗೆ ಅಭಿನಯ?

10:03 AM Dec 09, 2019 | Sriram |

ಚೆನ್ನೈ: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್‌, ಕಮಲ್‌ ಹಾಸನ್‌ ಸದ್ಯದಲ್ಲಿ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಗುಸುಗುಸು ಕೇಳಿಬಂದಿದೆ.

Advertisement

“ಕೈತಿ’ ಚಿತ್ರದ ನಿರ್ದೇಶಕ ಲೋಕೇಶ್‌ ಕನಗರಾಜ್‌ ಅವರು ಈ ಇಬ್ಬರೂ ನಟರ ಮನವೊಲಿಸಿ ಒಂದೇ ಚಿತ್ರದಲ್ಲಿ ಅಭಿನಯಿಸುವಂತೆ ಮಾಡಿದ್ದಾರೆಂದು ಹೇಳಲಾಗಿದೆ. ಇದು ಸಾಧ್ಯವಾದರೆ, ಈ ಇಬ್ಬರೂ ದಿಗ್ಗಜರು 35 ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಂತಾಗುತ್ತದೆ.

ಅಂದಹಾಗೆ, ಇವರಿಬ್ಬರೂ ಒಟ್ಟಿಗೆ ಅಭಿನಯಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, 16 ಚಿತ್ರಗಳಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದು, ಕಡೆಯದಾಗಿ, 1985ರಲ್ಲಿ ತೆರೆಕಂಡಿದ್ದ “ಗಿರಫ್ತಾರ್‌’ ಎಂಬ ಹಿಂದಿ ಚಿತ್ರದಲ್ಲಿ ಬಾಲಿವುಡ್‌ ಮೆಗಾ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಜೊತೆಗೆ, ಈ ಇಬ್ಬರೂ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next