Advertisement

ರಾಜ್‌ಗೋಪಾಲ್‌ ಧೀಮಂತ ರಾಜಕಾರಣಿ

12:16 PM Jul 17, 2017 | Team Udayavani |

ಬನ್ನೂರು: ಯಾಚೇನಹಳ್ಳಿ ಗ್ರಾಮದ ಅಭಿವೃದ್ಧಿಯಲ್ಲಿ ರಾಜ್‌ಗೋಪಾಲ್‌ರ ಪಾತ್ರ ಪ್ರಮುಖವಾಗಿದ್ದು, ಗ್ರಾಮದ ಜನರಿಗೆ ಒಳಿತನ್ನು ಬಯಸುತ್ತಾ, ಯುವಜನತೆಗೆ ಆಶಾಕಿರಣರಾಗಿದ್ದ ರಾಜ್‌ಗೋಪಾಲ್‌ ಒಬ್ಬ ಧೀಮಂತ ರಾಜಕಾರಣಿಯಾಗಿದ್ದರು.

Advertisement

ಅವರ ಅಗಲಿಕೆ ಗ್ರಾಮದ ಜನತೆಗೆ ತುಂಬಲಾರದ ನಷ್ಟವುಂಟು ಮಾಡಿದೆ ಎಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್‌. ಶಂಕರೇಗೌಡ ಹೇಳಿದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ತಾಪಂ ಅಧ್ಯಕ್ಷ ವೈ.ಕೆ. ರಾಜ್‌ಗೋಪಾಲ್‌ಗೆ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಪಂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಇವರು ಯಾಚೇನಹಳ್ಳಿಯ ಅಭಿವೃದ್ಧಿ ಮಾಡುವ ಸಲುವಾಗಿ ಒಂದು ಗುಂಪನ್ನೇ ರಚನೆ ಮಾಡಿಕೊಂಡು ಗ್ರಾಮದ ಜನರ ಸಲಹೆ ಅಭಿಪ್ರಾಯವನ್ನು ಸಂಗ್ರಹಿಸಿಕೊಂಡು, ಒಂದು ಮಾರ್ಗಸೂಚಿಯನ್ನು ರಚಿಸಿಕೊಳ್ಳುತ್ತಿದ್ದರು.

ಅವರು ಹಾಕಿಕೊಟ್ಟ ರೂಪುರೇಖೆಗಳು ನಂತರದ ಎಲ್ಲ ಯುವಕರಿಗೆ ದಾರಿ ದೀಪವಾಗಿ, ಇಂದು ಎಲ್ಲರೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ತಾಲೂಕಿನಲ್ಲಿ ಒಂದಲ್ಲ ಒಂದು ಕಾರ್ಯಗಳಲ್ಲಿ ಯಾಚೇನಹಳ್ಳಿ ಗುರುತಿಸಿಕೊಳ್ಳುತ್ತಿದೆ ಎಂದರು.

ರಾಮಕೃಷ್ಣ ಸೇವಾ ಕೇಂದ್ರದ ನಾದನಂದನಾಥ ಸ್ವಾಮೀಜಿ ಮಾತನಾಡಿ, ಇಂದು ಇಡೀ ಗ್ರಾಮದ ಜನರೇ ತಮ್ಮ ಎಲ್ಲ ಕಾರ್ಯಗಳನ್ನು ಬದಿಗೊತ್ತಿ, ರಾಜ್‌ಗೋಪಾಲ್‌ರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯದಲ್ಲಿ ಭಾಗಿಯಾಗಿರುವುದು ನೋಡಿದರೆ, ಅವರು ಇದ್ದ ಸಂದರ್ಭದಲ್ಲಿ ಎಷ್ಟು ಜನರನ್ನು ಸಂಪಾದಿಸಿದ್ದರು ಎನ್ನುವುದು ತಿಳಿಯುತ್ತದೆ ಎಂದು ತಿಳಿಸಿದರು.

Advertisement

ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಕೆ.ಮಹದೇವು, ಜಿಪಂ ಸದಸ್ಯ ಎಂ.ಸುಧೀರ್‌, ತಾಪಂ ಅಧ್ಯಕ್ಷ ಸಿ. ಚಾಮೇಗೌಡ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌, ರಾಜಣ್ಣ, ಸಾಲೂರು ಸ್ವಾಮಿ ರಾಜು, ವೈ.ಎಂ. ಬೋಜರಾಜು, ವೈ.ಜೆ. ಪುಟ್ಟಪ್ಪ, ಕೆ.ಸಿ.ಮಹದೇವು, ಯಾಚೇನಹಳ್ಳಿ ನಾಡಯಜಮಾನ್‌ ವೈ.ಎಚ್‌. ಹನುಮಂತೇಗೌಡ, ಸಮಾಜ ಸೇವಕ ವೈ.ಎಸ್‌. ರಾಮಸ್ವಾಮಿ, ನವೀನ್‌, ದಿಲೀಪ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next