Advertisement

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

02:32 PM May 05, 2024 | Team Udayavani |

ಚೆನ್ನೈ: ಒಂದು ಕಾಲದಲ್ಲಿ ಐಪಿಎಸ್‌ ಅಧಿಕಾರಿಯಾಗಿ, ಖಡಕ್‌ ಪೊಲೀಸ್‌ ಆಗಿ ಕರ್ತವ್ಯ ನಿಭಾಯಿಸಿದ್ದ ಕೆ.ಅಣ್ಣಾಮಲೈ ಸದ್ಯ ರಾಜಕೀಯ ಅಖಾಡದಲ್ಲಿ ನಿರತರಾಗಿದ್ದಾರೆ.

Advertisement

ಐಪಿಎಲ್‌ ಅಧಿಕಾರಿಯಾಗಿ, ಪೊಲೀಸ್‌ ಇಲಾಖೆಯಲ್ಲಿ ತನ್ನ ಕಾರ್ಯಾವೈಖರಿಯಿಂದ ʼಕರ್ನಾಟಕ ಪೊಲೀಸ್‌ ಸಿಂಗಂʼ ಎಂದೇ ಖ್ಯಾತರಾಗಿದ್ದರು.

1984ರ ಜೂ.4ರಂದು ಹುಟ್ಟಿದ ಅಣ್ಣಾಮಲೈ ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. 2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಆದ ಅವರು, ಕಾರ್ಕಳ ಉಪವಿಭಾಗದ ಎಎಸ್ಪಿಯಾಗಿ 2011ರಲ್ಲಿ ವೃತ್ತಿ ಆರಂಭಿಸಿದ ಅವರು,  2013ರಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. ಬಳಿಕ ಅಲ್ಲಿಂದ ಚಿಕ್ಕಮಗಳೂರು ಎಸ್ಪಿಯಾಗಿ ಖಡಕ್‌ ಆಫೀಸರ್‌ ಆಗಿ ಗಮನ ಸೆಳೆದಿದ್ದರು.

2020 ರಲ್ಲಿ ರಾಜೀನಾಮೆ ನೀಡಿ, ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಅವರು ಸದ್ಯ ತಮಿಳುನಾಡು, ಕೊಯಮತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಅವರು ಲೋಕಸಭೆ ಚುನಾವಣೆಯ ಕಣದಲ್ಲಿದ್ದಾರೆ.

Advertisement

ಈ ನಡುವೆ ಅಣ್ಣಾಮಲೈ ಅವರ ಬಯೋಪಿಕ್‌ ವಿಚಾರ ಕಾಲಿವುಡ್‌ ವಲಯದಲ್ಲಿ ಹರಿದಾಡಿದೆ. ಅಣ್ಣಾಮಲೈ ಅವರ ಆರಂಭಿಕ ಜೀವನ ಹಾಗೂ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡ ಅವರ ವೃತ್ತಿ ಜೀವನದ ಸುತ್ತ ಸಿನಿಮಾ ಬರಲಿದೆ ಎನ್ನಲಾಗುತ್ತಿದೆ.

ಈ ಸಿನಿಮಾದಲ್ಲಿ ನಟ ವಿಶಾಲ್‌ ಅವರು ಅಣ್ಣಾಮಲೈ ಅವರ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕಾಲಿವುಡ್‌ ನಲ್ಲಿ ಈ ಸುದ್ದಿ ಹರಿದಾಡಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಕೂಡ ಮಾಹಿತಿ ಹೊರಬಿದ್ದಿಲ್ಲ.

ಇತ್ತೀಚೆಗೆ ʼರತ್ನಂʼ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ವಿಶಾಲ್‌,  ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ತಮಿಳುನಾಡಿನಲ್ಲಿ ಹರಿದಾಡಿತ್ತು. ಅವರು ಬಿಜೆಪಿ ಸೇರುತ್ತಾರೆ ಎನ್ನಲಾಗುತ್ತಿತ್ತು. ಆದರೆ ಅವರು ಇದಕ್ಕೆ ಸ್ಪಷ್ಟನೆ ನೀಡಿ, 2026 ರ ಚುನಾವಣೆಗೆ ರಾಜಕೀಯಕ್ಕೆ ಬರುವುದಾಗಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next