Advertisement

ರಾಜೇಂದ್ರ ಕುಮಾರ್‌ರಿಂದ ರಾಜ್ಯ ಮಟ್ಟದಲ್ಲೂ ಸಾಧನೆನಿರೀಕ್ಷೆ : ಸೂರಿಂಜೆ

04:19 PM Oct 21, 2017 | Team Udayavani |

ಕೂಳೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ಕೂಳೂರಿನಲ್ಲಿರುವ ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದಲ್ಲಿ ಅಭಿನಂದನ ಸಮಾರಂಭ ಜರಗಿತು.

Advertisement

ಶಾಸಕ ಮೊಯಿದಿನ್‌ ಬಾವಾ, ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಹಾಗೂ ಪದಾಧಿಕಾರಿಗಳು ರಾಜೇಂದ್ರ ಕುಮಾರ್‌ ಅವರನ್ನು ಸಮ್ಮಾನಿಸಿದರು. ಆಡಳಿತ ಮಂಡಳಿ ಸದಸ್ಯ ವಿನಯ ಕುಮಾರ್‌ ಸೂರಿಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜೇಂದ್ರ ಕುಮಾರ್‌ ಅವರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಮಾಡಿದ ಸಾಧನೆಯನ್ನೂ ಇಲ್ಲೂ ಮಾಡುವ ಮೂಲಕ ರೈತರಿಗೆ ಕೊಡುಗೆ ನೀಡಲಿದ್ದಾರೆ. ರಾಜ್ಯದಲ್ಲೇ ದ.ಕ ಸಹಕಾರಿ ಬ್ಯಾಂಕ್‌ ಇಂದು ಅಗ್ರಸ್ಥಾನ ದಲ್ಲಿರಲು ಇಲ್ಲಿನ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಶ್ರಮ ಪಟ್ಟಿರುವುದೇ ಕಾರಣ ಎಂದರು. 

ಸಹಕಾರಿ ರಂಗದ ನಾಯಕ
ಶಾಸಕ ಮೊದಿನ್‌ ಬಾವಾ ಮಾತನಾಡಿ, ಡಾ| ರಾಜೇಂದ್ರ ಕುಮಾರ್‌ ಅವರು ಡಿಸಿಸಿ ಬ್ಯಾಂಕಿನ ಅಭಿವೃದ್ಧಿ, ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣ, ಸಹಕಾರಿ ರಂಗದ ಮೂಲಕ ರೈತರಿಗೆ ಅಗತ್ಯ ನೆರವು ಮತ್ತಿತರ ಕಾರ್ಯಕ್ರಮಗಳ ಮೂಲಕ ಸಹಕಾರಿ ರಂಗದಲ್ಲೂ ನಾಯಕತ್ವ ವಹಿಸಿ ಜನಸೇವೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಧೀಮಂತ ವ್ಯಕ್ತಿ ಎಂದು ಬಣ್ಣಿಸಿದರು.

ಕೃತಜ್ಞತೆ ಸಮರ್ಪಣೆ
ಕೂಳೂರು ಸಹಕಾರ ಮಾರಾಟ ಸಂಘದ ನಿರ್ದೇಶಕನನ್ನಾಗಿ ಮಾಡಿ ರಾಜ್ಯದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನೆರವಾದ ಅಧ್ಯಕ್ಷರು, ಪದಾಧಿಕಾರಿಗಳಿಗೆ ರಾಜೇಂದ್ರ ಕುಮಾರ್‌ ಕೃತಜ್ಞತೆ ಅರ್ಪಿಸಿದರು.

ನಿರ್ದೇಶಕರಾದ ರಘುರಾಂ ಅಡ್ಯಂತಾಯ, ಭಾಸ್ಕರ್‌ ಕೊಂಡೆ, ಪದ್ಮಪ್ರಸಾದ್‌, ಮಹಮ್ಮದ್‌ ಬಶೀರ್‌ ಎಂ.ಎ., ನಾರಾಯಣ ಶೆಟ್ಟಿ, ವಸಂತ, ಪ್ರಸಿಲ್ಲಾ ಮಿಸ್ಕಿತ್‌, ಸುಜಾತಾ, ಬಿ.ಪಿ.ಆಚಾರ್ಯ, ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಲಕ್ಷ್ಮಣ್‌ ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಮೋಹನ ದೇವಾಡಿಗ ಎಂ. ವಂದಿಸಿದರು. ನಿರ್ದೇಶಕ ಪದ್ಮಪ್ರಸಾದ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next