Advertisement

ಭವನ ಸುಂದರಿ: ಹಳೆ ಕಟ್ಟಡದ ಹಾಡು…

09:42 AM Jun 30, 2019 | Vishnu Das |

ಎಲ್ಲಿದೆ?
ಹೈಗ್ರೌಂಡ್ಸ್‌ ಏರಿಯಾ, ಇಂಡಿಯನ್‌ಎಕ್ಸ್‌ಪ್ರಸ್‌ ಸಮೀಪ

Advertisement

ನಿರ್ಮಾಣ
1840ರಲ್ಲಿ ಶುರು ವಾಗಿ 1842ರಲ್ಲಿ ಮುಕ್ತಾಯ ಕಂಡಿತು.

ಕಟ್ಟಡ ವಿಸ್ತಾರ
42,380 ಚದರ ಅಡಿಗಳು

ಕಟ್ಟಿಸಿದ್ದು...
ಆಗ ಮೈಸೂರು ಪ್ರಾಂತದ ಬ್ರಿಟಿಷ್‌ ಕಮಿಷನರ್‌ ಆಗಿದ್ದ ಮಾರ್ಕ್‌ ಕಬ್ಬನ್‌.

ವಿನ್ಯಾಸ ಬ್ರಿಟಿಷ್‌ ಶೈಲಿ

Advertisement

ಮಾರಾಟದ ಕತೆ
ಮಾರ್ಕ್‌ ಕಬ್ಬನ್‌, ಬೆಂಗಳೂರು ತೊರೆಯುತ್ತಿದ್ದಂತೆ, ರಾಜಭವನವನ್ನು ಮಾರಾಟಕ್ಕಿಡಲಾಗಿತ್ತು. ನಂತರ ಕಮಿಷನರ್‌ ಆಗಿ ಬಂದ ಲೆವಿನ್‌ ಬೆಂಥಮ್‌ ಬೌರಿಂಗ್‌ ಇದನ್ನು ಸರ್ಕಾರದ ಹಣದಿಂದಲೇ ಖರೀದಿಸಿ, ಒಳವಿನ್ಯಾಸ ಬದಲಿಸಿದ್ದರು. ಇದು ಕಮಿಷನರ್‌ರ ಅಧಿಕೃತ ನಿವಾಸವಾಗಿದ್ದೂ ಆಗಲೇ.

ಹಡಗಿನ ನೆನಪು
ಅದು 1874. ಬ್ರಿಟಿಷ್‌ ದೊರೆ 7ನೇ ಎಡ್ವರ್ಡ್‌ ಭಾರ ತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅವ ರಿಗೆ ರಾಜಭವನದಲ್ಲಿಯೇ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅದ ಕ್ಕಾಗಿ ಬಾಲ್‌ ರೂಮ್‌ ಅನ್ನು ಕಟ್ಟಲಾಯಿತು. ಬ್ರಿಟಿಷ್‌ ದೊರೆ ಆಗಮಿಸಿದ್ದ “ಸೆರಾಪಿಸ್‌’ ಹಡಗಿನ ಹೆಸ ರನ್ನೆಲ್‌ ಬಾಲ್‌ ರೂಮ್‌ಗೆ ಇಡಲಾಗಿದೆ.

ಬೆಂಗಳೂರು ರೆಸಿಡೆನ್ಸಿ
ಕಬ್ಬನ್‌ ಕಾಲದಿಂದ ಕೇವಲ ಕಮಿಷನರ್‌ಗಳೇ ನೆಲೆಸುತ್ತಿದ್ದ ರಾಜಭವ ನ ದಲ್ಲಿ ಆ ಪರಂಪರೆ ನಿಂತಿದ್ದು, 1881ರಲ್ಲಿ. ಪ್ರಾಂತೀಯ ಅಧಿಕಾರ ಮೈಸೂರು ರಾಜ ಮನೆತನಕ್ಕೆ ಹಸ್ತಾಂತರವಾದಾಗ. ಗಣ್ಯ ವ್ಯಕ್ತಿಗಳು ತಂಗಲು “ಬೆಂಗಳೂರು ರೆಸಿಡೆನ್ಸಿ’ ಅಂತ ಅದನ್ನು ಬದಲಾಯಿಸಲಾಯಿತು.

ಮೊದಲು ತಂಗಿದ ರಾಜ್ಯಪಾಲ
1957ರಲ್ಲಿ ಮೊದಲ ರಾಜಪ್ರಮುಖರಾಗಿ ಮೈಸೂರು ಮಹಾ ರಾಜ ಜಯಚಾಮ ರಾಜೇಂದ್ರ ಒಡೆಯರು ಆಯ್ಕೆಯಾದರು. ಆದರೆ, ಅವರು ಇದನ್ನು ವಾಸ್ತವ್ಯಕ್ಕೆ ಬಳಸಿಕೊಳ್ಳಲಿಲ್ಲ. ಬೆಂಗಳೂರಿನಲ್ಲಿ ಇರುವಷ್ಟು ದಿನ, ಇಲ್ಲಿನ ಅರಮನೆಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಮೈಸೂರು ಒಡೆಯರ ನಂತರ ರಾಜ್ಯಪಾಲರಾಗಿ ನೇಮಕಗೊಂಡ, ಆರ್ಮಿ ಜನರಲ್‌ ಎಸ್‌.ಎಂ. ಶೃಂಗೇಶ್‌ ಈ ಕಟ್ಟಡವನ್ನು ವಾಸ್ತವ್ಯಕ್ಕೆ ಬಳಸಿಕೊಂಡರು. ಅಂದಿ ನಿಂದ ಇದು ರಾಜ್ಯಪಾ ಲರುಗಳ ಅಧಿಕೃತ ನಿವಾಸವಾಗಿ  ಬದಲಾಯಿತು. ಪ್ರಸ್ತುತ ವಜುಭಾಯಿ ವಾಲಾ ಅವರು ಇಲ್ಲಿ ವಾಸವಿರುತ್ತಾ ರೆ. ಇವರು ಈ ಕಟ್ಟ ಡ ದಲ್ಲಿ ವಾಸ್ತವ್ಯ ಹೂಡಿರುವ 16ನೇ ರಾಜ್ಯ ಪಾ ಲರು.

ಒಂದೇ ಮಹಡಿ!
ಮೂಲತಃ ರಾಜಭವನ ಒಂದೇ ಮಹಡಿಯಿಂದ ಕಟ್ಟಲ್ಪಟ್ಟಿತ್ತು. 1967ರಲ್ಲಿ ಮೊದಲ ಮಹಡಿಗೆ ಇದನ್ನು ಎತ್ತರಿಸಲಾಯಿತು. ಹಿಂದಿನ ವಾಸ್ತು ಶಿಲ್ಪ ರಚ ನೆಗೆ ದಕ್ಕೆಯಾಗ ದಂತೆ, ಮೊದಲ ಮಹ ಡಿಯನ್ನೂ ಕಟ್ಟಲಾಗಿದೆ.

ಚಿತ್ರಕಲೆಯ ವೈಭವ
ಭಾರತದ ನಾನಾ ಚಿತ್ರ ಕಲಾ ಶಾಲೆಗಳಲ್ಲಿ ರಚಿತಗೊಂಡ ಪೇಂಟಿಂಗ್ಸ್‌, ಅದ ರಲ್ಲೂ ಅಜಂತಾ ಶೈಲಿ ವರ್ಣಚಿತ್ರಗಳನ್ನು ಹೆಚ್ಚು ಕಾಣಬಹುದಾಗಿದೆ. ಹೆಸರಾಂತ ಪಾಶ್ಚಾತ್ಯ ಕಲಾವಿದರಾದ ಹರ್ಬರ್ಟ್‌ ಪ್ಯಾರಿಶ್‌, ವೂವರ್‌ ಬ್ರ್ಯಾಂಕ್ಟ್ ನಂಥವರ ಅಪರೂ ಪದ ಚಿತ್ರ ರಚನೆ ಗಳು ಇಲ್ಲಿವೆ.

ಸುತ್ತ ಉದ್ಯಾನ
ರಾಜಭವನ ಕಟ್ಟಡ ಸುತ್ತ ಇರುವ ಉದ್ಯಾನದ ವಿಸ್ತಾರ 16 ಎಕರೆ.

ಟೈಲ್ಸ್‌ನ ಮೆರುಗು
ಡೈನಿಂಗ್‌, ಕಿಚನ್‌ ಮತ್ತು ನೆಲ ಹಾಗೂ ಮೊದಲ ಮಹಡಿಯ ಬಹು ತೇಕ ಭಾಗದ ನೆಲಕ್ಕೆ ಇಟಾಲಿಯನ್‌ ಟೈಲ್ಸ್‌ ಬಳಸಲಾಗಿದೆ. ಬಹುತೇಕ ರತ್ನಗಂಬಳಿಯನ್ನು ಹಾಸಲಾಗಿದೆ.

ಬ್ರಿಟಿಷ್‌ ಕಾಲದ ನೆನಪು
ಇಲ್ಲಿನ ಬಾಂಕ್ವೆಟ್‌ ಹಾಲ್‌ಗೆ ಹೊಂದಿ ಕೊಂಡಂತೆ ಮುಖ ಮಂಟಪವಿದ್ದು, ಬ್ರಿಟಿಷರ ಕಾಲದಲ್ಲಿ ಇದನ್ನು ನೃತ್ಯ ಪ್ರದರ್ಶನಕ್ಕೆ ಬಳಸಿ ಕೊಳ್ಳಲಾಗುತ್ತಿತ್ತು.

(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ವಾರಕ್ಕೆ ಒಂದೊಂದರಂತೆ, ಕಟ್ಟಡಗಳ ತುಣುಕು ಮಾಹಿತಿಯ ಸರ ಮಾಲೆ ಈ ಅಂಕಣದಲ್ಲಿ ಮೂಡಿ ಬರಲಿದೆ )

Advertisement

Udayavani is now on Telegram. Click here to join our channel and stay updated with the latest news.

Next