ಜೈಪುರ: ಹೊಸ ವರ್ಷದ ಸಂಭ್ರಮಕ್ಕೆ ಇಡೀ ವಿಶ್ವವೇ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ರಾಜಸ್ಥಾನದ ರಾಜವೈಭೋಗದ ರೆಸ್ಟೋರೆಂಟ್‌ಗಳು ವಿಧಿಸುತ್ತಿರುವ ದರ ಪಟ್ಟಿ ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿದ್ದು, ಅಲ್ಲಿ ಶ್ರೀಮಂ ತರೂ ಕಾಲಿಡುವಂತಿಲ್ಲ ಎನ್ನುವಂತಾಗಿದೆ. ಕೇವಲ ಕುಬೇರರಿಗಷ್ಟೇ ಈ ಹೋಟೆಲ್‌ಗಳು ಡಿ. 31ರಂದು ಸ್ವಾಗತ ಕೋರಲಿವೆ ಎಂಬುದು ಸ್ಪಷ್ಟವಾಗಿದೆ.
ಜೈಪುರ ಹೋಟೆಲ್‌ಗಳಲ್ಲಿ ಅತಿ ಪ್ರತಿಷ್ಠಿತ ಹೋಟೆಲ್‌ಗಳಲ್ಲೊಂದಾದ ಉಮೈದ್ ಭವನ್ ಪ್ಯಾಲೇಸ್‌ನಲ್ಲಿ (ತಾಜ್ ಲೇಕ್ ಪ್ಯಾಲೇಸ್) ಡಿ. 31ರಂದು ರಾತ್ರಿ ಪಾರ್ಟಿ ಮುಗಿದ ಮೇಲೆ ಅಲ್ಲಿನ ಉಬರ್-ಲಕ್ಷುರಿ ಸೂಟ್‌ನಲ್ಲಿ ಉಳಿದುಕೊಳ್ಳಲು ಬರೋಬ್ಬರಿ 11 ಲಕ್ಷ ರೂ. ನೀಡಬೇಕಿದೆ! ಜೈಪುರದ ಮತ್ತೂಂದು ಐಷಾರಾಮಿ ಹೋಟೆಲ್ ರಾಮಭಾಗ್ ಪ್ಯಾಲೇಸ್‌ನಲ್ಲೂ ಪಾರ್ಟಿ ನಂತರದ ಉಳಿಯುವಿಕೆಗೆ 8.52 ಲಕ್ಷ ರೂ. ದರ ವಿಧಿಸಲಾಗಿದೆ. ರಾಮಭಾಗ್ ಪ್ಯಾಲೇಸ್‌ನಲ್ಲಿ ಉಳಿಯುವಿಕೆಗೆ ಕಡಿಮೆ ದರದ ಕೊಠಡಿಗಳೂ ಲಭ್ಯವಿದ್ದು ಇವು 25,000 ರೂ.ಗಳಿಂದ 70,000 ರೂ. ರೇಂಜ್‌ಗಳಲ್ಲಿ ಲಭ್ಯವಿರಲಿವೆ.
ಈ ಹೊಸ ದರಗಳು ಕಳೆದ ನ್ಯೂ ಇಯರ್ ಪಾರ್ಟಿ ಮತ್ತು ಸ್ಟೇಗೆ ವಿಧಿಸಲಾಗಿದ್ದ ದರಗಳಿ ಗಿಂತ ಶೇ. 7ರಷ್ಟು ಹೆಚ್ಚಿದ್ದು, ನವೆಂಬರ್ ತಿಂಗಳಿ ನಲ್ಲಿ ಇದೇ ಹೋಟೆಲ್‌ಗಳಲ್ಲಿ ಇದ್ದ ದರಗಳಿಗೆ ಹೋಲಿಸಿದರೆ ಶೇ. 40ರಷ್ಟು ಜಾಸ್ತಿ ಎನ್ನಲಾಗಿದೆ.
ಗ್ರಾಹಕರು ಕಡಿಮೆ ಇದ್ದರೆ ಕೆಲ ಹೋಟೆಲ್‌ಗಳು ಕೊನೆ ಕ್ಷಣದಲ್ಲಿ ಶೇ. 20ರಷ್ಟು ರಿಯಾಯಿತಿ ಘೋಷಿಸ ಬಹುದು. ಆದರೆ, ಗ್ರಾಹಕರ ಕೊರತೆ ಯಾಗುವ ಅನುಮಾನವೇನಿಲ್ಲ ಹಾಗಾಗಿ, ದರಗಳು ಕಡಿಮೆ ಆಗುವುದಿಲ್ಲ.
– ಶೇಖರ್ ಸಾವಂತ್, ವ್ಯವಸ್ಥಾಪಕ, ಐಟಿಸಿ ರಜಪೂತಾನಾ