ದುಬೈ: ಎಬಿಡಿ ವಿಲಿಯರ್ಸ್ ಸ್ಪೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ.
ರಾಜಸ್ಥಾನ್ ನೀಡಿದ 178 ರನ್ ಗಳ ಟಾರ್ಗೆಟ್ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಗೆಲುವಿನ ನಗೆ ಬೀರಿತು.
178 ರನ್ ಗಳ ಗುರಿ ಪಡೆದು ಬ್ಯಾಟಿಂಗ್ ಆರಂಭಿಸಿದ ಆರ್ ಸಿಬಿ ಉತ್ತಮ ಆರಂಭ ಪಡೆದುಕೊಂಡಿತ್ತು. ದೆವದತ್ತ್ ಪಡಿಕ್ಕಲ್ ಮತ್ತು ಆ್ಯರನ್ ಫಿಂಚ್ ಮೊದಲ ವಿಕೆಟ್ ಗೆ 23 ರನ್ ಗಳ ಜೊತೆಯಾಟ ನಡೆಸಿತು. ಈ ವೇಳೆ ಎಡವಿದ ಫಿಂಚ್(14) ಶ್ರೇಯಸ್ ಗೋಪಾಲ್ ಬೌಲಿಂಗ್ ನಲ್ಲಿ ಉತ್ತಪ್ಪಾಗೆ ಕ್ಯಾಚಿತ್ತರು.
ನಂತರ ಪಡಿಕ್ಕಲ್ ಜೊತೆಯಾದ ನಾಯಕ ಕೊಹ್ಲಿ ರಾಜಸ್ಥಾನ್ ಬೌಲರ್ ಗಳ ದಂಡಿಸಿದರು. ಈ ವೇಳೆ 35 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ತೇವಾಟಿಯ ಬೌಲಿಂಗ್ ನಲ್ಲಿ ಸ್ಟ್ರೋಕ್ಸ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
2 ಸಿಕ್ಸ್ 1 ಫೋರ್ ಸಿಡಿಸಿ ಭರ್ಜರಿ ಫಾರ್ಮ್ ನಲ್ಲಿದ್ದ ಕೊಹ್ಲಿ 43 ರನ್ ಗಳಿಸಿದ್ದ ವೇಳೆ ಕಾರ್ತಿಕ್ ತ್ಯಾಗಿ ಬೌಲಿಂಗ್ ನಲ್ಲಿ ತೇವಾಟಿಯ ಗೆ ಕ್ಯಾಚ್ ನೀಡಿ ಅರ್ಧಶತಕದ ಸಂಭ್ರಮವನ್ನು ತಪ್ಪಿಸಿಕೊಂಡರು.
ನಂತರ ಗುರ್ ಕೀರ್ತ್ ಸಿಂಗ್ ಮನ್ ಜೊತೆಯಾದ ಎಬಿಡಿ ಸ್ಪೋಟಕ ಬ್ಯಾಟಿಂಗ್ ನಡೆಸಿದರು. 22 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 1 ಬೌಂಡರಿ ನೆರವಿನಿಂದ 55 ರನ್ ಗಳಿಸಿ ತಂಡವನ್ನು ಗೆಲುವಿನನ ಗುರಿ ಮುಟ್ಟಿಸಿದರು. ಎಬಿಡಿ ಗೆ ಉತ್ತಮ ಸಾಥ್ ನೀಡಿದ ಮನ್ 19 ರನ್ ಗಳಿಸಿ ನಾಟೌಟ್ ಆಗಿ ಉಳಿದರು.
ರಾಜಸ್ಥಾನ್ ಪರ ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ರಾಹುಲ್ ತೇವಾಟಿಯ ತಲಾ 1 ವಿಕೆಟ್ ಪಡೆದರು.