Advertisement
ದೇವಸ್ಥಾನದ ಒಳಗೆ ಹೋದರೆ ವಿಶೇಷವೆಂದರೆ ಒಳಗೆ ಹೊರಗೆ ಗರ್ಭ ಗುಡಿಯೊಳಗೆಲ್ಲ ಇಲಿಗಳದೆ ಸಾಮ್ರಾಜ್ಯ! ಅವುಗಳಿಗೆ ತಿನ್ನಲೆಂದೆ ಬಂದ ತಿಂಡಿಗಳು ಎಲ್ಲವೂ ಭಕ್ತಾದಿಗಳಿಂದ ಬಂದ ಹರಕೆ!. ಆದರೆ ವಿಶೇಷ ವೆಂದರೆ ಇಲಿಗಳನ್ನು ನಾವು ಮುಟ್ಟುವಂತಿಲ್ಲ ಆದರೆ ಇಲಿಗಳ ಸುದ್ದಿಗೂ ಹೋಗುವಂತಿಲ್ಲ. ನಮ್ಮ ಇರುವಿಕೆ ಅವುಗಳ ಗಮನ ಸೆಳೆಯುವುದೂ ಇಲ್ಲ.
ಇಲಿಗಳಿಗೂ ಕರಣಿ ಮಾತಾಳಿಗೂ ಏನು ಸಂಬಂಧ ಎಂಬುದು ಪ್ರಶ್ನೆ. ಕರಣಿ ಮಾತಾ ಎಂದರೆ 14ನೇ ಶತಮಾನದಲ್ಲಿ ಜನಿಸಿದ ರಿಧು ಬಾಯಿ ಎಂಬ ಹೆಸರಿನ ಸ್ತ್ರೀ ಎಂದು ತಿಳಿಯಿತು. ಅನೇಕ ಪವಾಡಗಳನ್ನು ಮಾಡಿತೋರಿಸಿದ ಅವಳನ್ನು ಸಾಕ್ಷಾತ್ ದುರ್ಗೆಯ ಅವತಾರ ಎಂದು ನಂಬಲಾಗುತ್ತದೆ. ದೀಪೋಜಿ ಚರಣ್ ಎಂಬವರೊಡನೆ ಮದುವೆಯಾಗಿ ಎರಡೇ ವರ್ಷಗಳಲ್ಲಿ ತಂಗಿಯ ಜತೆ ಗಂಡನಿಗೆ ಮದುವೆ ಮಾಡಿಸಿ ತಾನು ಲೋಕಕಲ್ಯಾಣಕ್ಕಾಗಿ ಸನ್ಯಾಸ ದೀಕ್ಷೆ ತೆಗೆದು ಕೊಂಡಳು. ಒಮ್ಮೆ ಲಕ್ಷ್ಮಣ ಎಂಬ ಹೆಸರಿನ ತಂಗಿಯ ಮಗ, ಕಪಿಲ ಸರೋವರದಲ್ಲಿ ನೀರು ಕುಡಿಯಲು ಹೋದಾಗ ನೀರಿನಲ್ಲಿ ಮುಳುಗಿದ್ದ. ಅವನನ್ನು ಬದುಕಿಸಲು ಕರಣಿ ಮಾತಾ ಯಮನಲ್ಲಿ ಪ್ರಾರ್ಥಿಸತೊಡಗಿದಳು. ಅವಳ ಪ್ರಾರ್ಥನೆಗೆ ಮಣಿದು ಯಮನು ಲಕ್ಷ್ಮಣನನ್ನು ಇಲಿಯ ರೂಪದಲ್ಲಿ ಬದುಕಿಸಲು ಒಪ್ಪಿದನು. ಈ ಲಕ್ಷ್ಮಣ ಇಲಿಯ ಸಂತಾನವೇ ಈ ದೇವಾಲಯದಲ್ಲಿ ಮುಂದುವರೆದು ಬಂದುದಾಗಿ ನಂಬಲಾಗಿದೆ. ಈಗ ಕರಣಿ ಮಾತಾ ಮಂದಿರದಲ್ಲಿ ಸುಮಾರು 25000 ಇಲಿಗಳಿವೆಯೆಂದು ಅಂದಾಜಿಸಲಾಗಿದೆ. ಅಂತೂ ಪ್ರಕೃತಿಯ ವಿಚಿತ್ರ ನೋಡಿ ಮೂಕ ವಿಸ್ಮಿತರಾಗಿ ಉದಯಪುರದ ಕಡೆಗೆ ಪ್ರಯಾಣ ಮುಂದುವರಿಸಿದೆವು.
Related Articles
Advertisement