ಅಯೋಧ್ಯಾ: ಜನವರಿ 22 ರಂದು ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ನೆರವೇರಿತು, ಇದನ್ನು ಆಚರಿಸಲು ದೇಶದಾದ್ಯಂತ ರಾಮನ ಹೆಸರಿನಲ್ಲಿ ದೀಪಗಳನ್ನು ಬೆಳಗಿಸಲಾಯಿತು.
ರಾಮಲಲ್ಲಾ ಪ್ರತಿಮೆಯನ್ನು ತಯಾರಿಸುವ ಕಾರ್ಯವನ್ನು ಕರ್ನಾಟಕದ ಶಿಲ್ಪಿ ಸೇರಿದಂತೆ ಮೂವರು ಶಿಲ್ಪಿಗಳಿಗೆ ವಹಿಸಲಾಗಿತ್ತು, ಅದರಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ಪ್ರತಿಮೆಯನ್ನು ಆಯ್ಕೆ ಮಾಡಿ ರಾಮಮಂದಿರದಲ್ಲಿ ಸ್ಥಾಪಿಸಲಾಗಿದೆ.
ಇದೀಗ ರಾಜಸ್ಥಾನದ ಜೈಪುರದ ಶಿಲ್ಪಿ ಸತ್ಯನಾರಾಯಣ ಪಾಂಡೆ ಅವರು ಬಿಳಿ ಅಮೃತಶಿಲೆಯಿಂದ ತಯಾರಿಸಿದ್ದಾರೆ ಎನ್ನಲಾದ ವಿಗ್ರಹದ ಚಿತ್ರ ಬಹಿರಂಗಗೊಂಡಿದೆ, ಈ ವಿಗ್ರಹವು ಪ್ರಸ್ತುತ ದೇವಾಲಯದ ಟ್ರಸ್ಟ್‌ನಲ್ಲಿದ್ದು ಇದನ್ನು ರಾಮಮಂದಿರದ ಇತರ ಭಾಗದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಹೇಳಿದ್ದಾರೆ.
ರಾಜಸ್ಥಾನದ ಶಿಲ್ಪಿ ಕೆತ್ತಿದ ವಿಗ್ರಹ ಬಿಳಿ ಬಣ್ಣದ್ದಾಗಿದೆ. ಇದರಲ್ಲಿ ಒಂದು ಬದಿಯಲ್ಲಿ ಹನುಮಂತ, ಇನ್ನೊಂದು ಬದಿಯಲ್ಲಿ ಗರುಡ ಚಿತ್ರಣವನ್ನು ಕೆತ್ತಲಾಗಿದ್ದು ಸುತ್ತಲೂ ವಿಷ್ಣುವಿನ ಅವತಾರಗಳನ್ನು ಕೆತ್ತಲಾಗಿದೆ.
ಇದರಲ್ಲಿ ವಿಷ್ಣುವಿನ 10 ಅವತಾರಗಳ ಚಿತ್ರ – 1- ಮತ್ಸ್ಯ, 2- ಕೂರ್ಮ, 3- ವರಾಹ, 4- ನರಸಿಂಹ, 5- ವಾಮನ್, 6- ಪರಶುರಾಮ, 7- ರಾಮ, 8- ಕೃಷ್ಣ, 9- ಬುದ್ಧ ಮತ್ತು 10 ನೇ ಕಲ್ಕಿ ಅವತಾರವನ್ನು ಕಾಣಬಹುದು.
ಇದನ್ನೂ ಓದಿ: Ram Temple: ಅಯೋಧ್ಯೆ ರಾಮಲಲ್ಲಾನ ದರ್ಶನಕ್ಕೆ ಎರಡನೇ ದಿನವೂ ಹರಿದು ಬಂದ ಜನಸಾಗರ