Advertisement

DelhiVsRajasthan ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್; ಮೊದಲ ಗೆಲುವಿಗಾಗಿ ಹಲವು ಬದಲಾವಣೆ

03:14 PM Apr 08, 2023 | Team Udayavani |

ಗುವಾಹಟಿ: ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಡೇವಿಡ್ ವಾರ್ನರ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರ ಗುವಾಹಟಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎದುರಿಸುತ್ತಿದ್ದು, ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದೆ.

Advertisement

ಮೊದಲ ಗೆಲುವಿನ ಹುಡುಕಾಟದಲ್ಲಿರುವ ಡೆಲ್ಲಿ ಹಲವು ಬದಲಾವಣೆ ಮಾಡಿದೆ. ತವರಿಗೆ ಮರಳಿರುವ ಮಾರ್ಶ್ ಬದಲಿಗೆ ಪೊವೆಲ್ ಬಂದಿದ್ದು, ಲಲಿತ್ ಯಾದವ್ ಮತ್ತು ಮನೀಶ್ ಪಾಂಡೆ ಅವಕಾಶ ಪಡೆದಿದ್ದಾರೆ.

ಇನ್ನು ರಾಜಸ್ಥಾನ ಪರ ಗಾಯಗೊಂಡಿದ್ದ ಬಟ್ಲರ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಕಳೆದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದ ಧ್ರುವ ಜುರೆಲ್ ಗೆ ಅವಕಾಶ ಸಿಕ್ಕಿದೆ. ಕನ್ನಡಿದ ಪಡಿಕ್ಕಲ್ ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ.

ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾ), ಮನೀಷ್ ಪಾಂಡೆ, ರಿಲೀ ರೊಸೊವ್, ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿ.ಕೀ), ಅನ್ರಿಚ್ ನೋಕಿಯಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಮುಖೇಶ್ ಕುಮಾರ್

Advertisement

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾ/ಕೀ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

Advertisement

Udayavani is now on Telegram. Click here to join our channel and stay updated with the latest news.

Next