Advertisement

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

11:04 PM Apr 23, 2024 | Team Udayavani |

ಜೈಪುರ: ಪ್ಲೇ ಆಫ್ ನಮ್ಮ ಮೊದಲ ಗುರಿ, ಬಳಿಕ ಅನಂತರದ ಯೋಚನೆ ಎಂಬುದಾಗಿ ಟೇಬಲ್‌ ಟಾಪರ್‌ ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ ಹೇಳಿದ್ದಾರೆ.

Advertisement

ಸೋಮವಾರದ ತನ್ನ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಬಳಿಕ ಸ್ಯಾಮ್ಸನ್‌ ಈ ಹೇಳಿಕೆ ನೀಡಿದ್ದಾರೆ. ಇದು ರಾಜಸ್ಥಾನ್‌ ಸಾಧಿಸಿದ 7ನೇ ಗೆಲುವು. 14 ಅಂಕಗಳೊಂದಿಗೆ ಉಳಿದೆಲ್ಲ ತಂಡಗಳಿಗಿಂತ ಅದೆಷ್ಟೋ ಮೇಲಿರುವ ರಾಜಸ್ಥಾನ್‌ ತಂಡದ ಪ್ಲೇ ಆಫ್ ಈಗಾಗಲೇ ಬಹುತೇಕ ಖಚಿತವಾಗಿದೆ.

“ಈ ಗೆಲುವಿನ ಶ್ರೇಯಸ್ಸು ಎಲ್ಲ ಆಟಗಾರರಿಗೆ ಸಲ್ಲುತ್ತದೆ. ಪವರ್‌ ಪ್ಲೇಯಲ್ಲಿ ನಾವು ಉತ್ತಮ ಆರಂಭ ಕಂಡುಕೊಂಡೆವು. ಯಶಸ್ವಿ ಜೈಸ್ವಾಲ್‌ ಅಮೋಘ ಪ್ರದರ್ಶನವಿತ್ತರು. ಬೌಲಿಂಗ್‌ನಲ್ಲಿ ಸಂದೀಪ್‌ ಶರ್ಮ ಮೆರೆದಾಡಿದರು’ ಎಂಬುದಾಗಿ ಸ್ಯಾಮ್ಸನ್‌ ಪ್ರಶಂಸಿಸಿದರು.

ಮುಂಬೈ 9 ವಿಕೆಟಿಗೆ 179 ರನ್‌ ಗಳಿಸಿದರೆ, ರಾಜಸ್ಥಾನ್‌ 18.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 183 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

Advertisement

Udayavani is now on Telegram. Click here to join our channel and stay updated with the latest news.

Next