Advertisement

ವೇಗಿ ಜೋಫ್ರಾ ಆರ್ಚರ್‌ ಐಪಿಎಲ್‌ನಿಂದ ಔಟ್‌

11:06 PM Feb 06, 2020 | Team Udayavani |

ಲಂಡನ್‌: ಇಂಗ್ಲೆಂಡಿನ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಮುಂಬರುವ ಐಪಿಎಲ್‌ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ. ಬಲ ಮಣಿಗಂಟಿನ ಮೂಳೆ ಮುರಿತದಿಂದಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

Advertisement

ಐಪಿಎಲ್‌ ಜತೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಯನ್ನೂ ಆರ್ಚರ್‌ ತಪ್ಪಿಸಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಬುಧವಾರ ಆರ್ಚರ್‌ ಈ ಸಮಸ್ಯೆಗೆ ಸಿಲುಕಿದ್ದು, ಇಸಿಬಿ ವೈದ್ಯಕೀಯ ತಂಡದ ನಿಗಾದಲ್ಲಿ ಇರಲಿದ್ದಾರೆ. ಜೂನ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ 3 ಪಂದ್ಯಗಳ ಸರಣಿ ವೇಳೆ ತಂಡಕ್ಕೆ ಮರಳುವುದು ಅವರ ಗುರಿ.

24 ವರ್ಷದ, ಬಾರ್ಬಡಾಸ್‌ ಮೂಲದ ಜೋಫ್ರಾ ಆರ್ಚರ್‌ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡಬೇಕಿತ್ತು. ಆರ್ಚರ್‌ ಗೈರಿನಿಂದ ರಾಜಸ್ಥಾನ್‌ಗೆ ದೊಡ್ಡ ಹೊಡೆತ ಬಿದ್ದಿದೆ. 21 ಐಪಿಎಲ್‌ ಪಂದ್ಯಗಳಿಂದ 25 ವಿಕೆಟ್‌ ಉರುಳಿಸಿದ್ದು ಆರ್ಚರ್‌ ಸಾಧನೆ. ಇದರಲ್ಲಿ 15 ವಿಕೆಟ್‌ 2018ರ ಪದಾರ್ಪಣ ಋತುವಿನಲ್ಲೇ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next