Advertisement

ಇಂಗ್ಲೆಂಡ್‌ನ‌ಲ್ಲಿ ಅಕಾಡೆಮಿ ತೆರೆದ ರಾಜಸ್ಥಾನ ರಾಯಲ್ಸ್‌

12:30 AM Mar 20, 2019 | |

ಹೊಸದಿಲ್ಲಿ: ಐಪಿಎಲ್‌ ಫ್ರಾಂಚೈಸಿಗಳಲ್ಲಿ ಒಂದಾಗಿರುವ ರಾಜಸ್ಥಾನ ರಾಯಲ್‌ ಇಂಗ್ಲೆಂಡ್‌ನ‌ ಸರ್ರೆಯಲ್ಲಿರುವ “ಸ್ಟಾರ್‌ ಕ್ರಿಕೆಟ್‌ ಅಕಾಡೆಮಿ’ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದಂತೆ ಇಂಗ್ಲೆಂಡ್‌ ಈ ಅಕಾಡೆಮಿಯ ಹೆಸರನ್ನು “ರಾಜಸ್ಥಾನ ರಾಯಲ್ಸ್‌ ಅಕಾಡೆಮಿ’ ಎಂದು ಮರುನಾಮಕರಣ ಮಾಡಿದೆ. “ರಾಜಸ್ಥಾನ ರಾಯಲ್ಸ್‌ ಯುಕೆಯಲ್ಲಿ ಅಕಾಡೆಮಿ ಪ್ರಾರಂಭಿಸಿರುವುದು ಖುಷಿ ನೀಡಿದೆ. ಇಲ್ಲಿ ತುಂಬಾ ಪ್ರತಿಭೆಗಳಿಗೆ ವೇದಿಕೆ ದೊರಕಲಿದೆ ಮತ್ತು ಐಪಿಎಲ್‌ ಮತ್ತು ಭಾರತೀಯ ಕ್ರಿಕೆಟಿನಿಂದ ಕಲಿಯುವ ವಿಷಯಗಳು ದೊರಕಲಿದೆ’ ಎಂದು ಅಕಾಡೆಮಿಯ ಉದ್ಘಾಟನೆಯ ವೇಳೆ ರಾಯಲ್ಸ್‌ ತಂಡದ ಇಂಗ್ಲೆಂಡ್‌ನ‌ ಆಟಗಾರ ಜೋಸ್‌ ಬಟ್ಲರ್‌ ಹೇಳಿದ್ದಾರೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next