Advertisement
ಬಹಳಷ್ಟು ಒತ್ತಡದ ನಡುವೆಯೂ ಗೌತಮ್ ಕೇವಲ 11 ಎಸೆತಗಳಿಂದ 33 ರನ್ ಸಿಡಿಸಿದ್ದರಿಂದ ರಾಜಸ್ಥಾನ್ ಅಂತಿಮ ಓವರಿನಲ್ಲಿ ಜಯಭೇರಿ ಬಾರಿಸಿತ್ತು. ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿದ ಗೌತಮ್ ತಂಡಕ್ಕೆ 3 ವಿಕೆಟ್‌ಗಳ ಜಯ ತಂದುಕೊಟ್ಟರು. ಈ ಮೊದಲು ಸ್ಯಾಮ್ಸನ್ (52) ಮತ್ತು ಬೆನ್ ಸ್ಟೋಕ್ಸ್ (27 ಎಸೆತಗಳಲ್ಲಿ 40) ಮೂರನೇ ವಿಕೆಟಿಗೆ 72 ರನ್ನುಗಳ ಜತೆಯಾಟ ನಡೆಸಿ ತಂಡದ ಗೆಲುವಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.
Related Articles
Advertisement
ನನ್ನಿಂದ ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗದಿರುವುದಕ್ಕೆ ಸ್ಯಾಮ್ಸನ್ ಬೇಸರ ವ್ಯಕ್ತಪಡಿಸಿದರು. 17ನೇ ಓವರಿನಲ್ಲಿ ಸ್ಯಾಮ್ಸನ್ ಮತ್ತು ಬಟ್ಲರ್ ಸತತ ಎರಡು ಎಸೆತಗಳಲ್ಲಿ ಬುಮ್ರಾ ದಾಳಿಗೆ ಔಟಾಗಿದ್ದರು. ಪಂದ್ಯ ಇನ್ನಿಂಗ್ಸ್‌ನ ಕೊನೆ ಹಂತದವರೆಗೆ ಸಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪಂದ್ಯ ವಿಳಂಬವಾಗಿಲ್ಲ. ಚೇಸಿಂಗ್ ವೇಳೆ ಬೌಲಿಂಗ್ ತಂಡ ಒತ್ತಡದಲ್ಲಿರುತ್ತದೆ. ಹಾಗಾಗಿ ಅಂತಿಮ ಓವರ್‌ತನಕ ಬ್ಯಾಟಿಂಗ್ ಮಾಡಲು ಬಯಸಿದ್ದೆ ಆದರೆ ದುರದೃಷ್ಟವಶಾತ್ ಔಟಾದೆ ಎಂದು ಸ್ಯಾಮ್ಸನ್ ವಿವರಿಸಿದರು.
15 ರನ್ ಕಡಿಮೆ: ಕಿಶನ್15 ರನ್ ಕಡಿಮೆಯಾಯಿತು ಆದರೆ ಟ್ವೆಂಟಿ20 ಪಂದ್ಯದಲ್ಲಿ ಇದು ಸಾಮಾನ್ಯ. ರಾಜಸ್ಥಾನ ಉತ್ತಮವಾಗಿ ಬೌಲಿಂಗ್ ನಡೆಸಿತ್ತು ಮತ್ತು ಪಂದ್ಯ ಸಾಗುತ್ತಿದ್ದಂತೆ ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿತ್ತು ಎಂದು ಇಶಾನ್ ಕಿಶನ್ ಹೇಳಿದರು. ಜೋಫ್ರಾ ಆರ್ಚರ್ ದಾಳಿಗೆ ಪ್ರತಿಕ್ರಿಯೆ ನೀಡಿದ ಕಿಶನ್ ಅವರು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಅವರ ದಾಳಿಯ ವೇಳೆ ನಾವು ಇನ್ನಷ್ಟು ರನ್ ಗಳಿಸಬಹುದಿತ್ತು ಎಂದರು. ಇದುವೇ ಆಟದ ಆಂದ. ಕೆಲವೊಮ್ಮೆ ನಮಗೆ ಭರ್ಜರಿ ಆಟವಾಡಲು ಸಾಧ್ಯವಾಗುತ್ತದೆ ಮತ್ತೆ ಕೆಲವೊಮ್ಮ ಸಾಧ್ಯವಾಗುವುದೇ ಇಲ್ಲ ಎಂದ ಕಿಶನ್ ಕೊನೆ ಹಂತದಲ್ಲಿ ಸಿಡಿದ ಗೌತಮ್ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.