Advertisement

Rajasthan: ಫ‌ಲಿತಾಂಶ ವಿಶ್ಲೇಷಣೆ- ಕೈಗೆ ಎರವಾಯಿತು ಭಿನ್ನಮತ

12:16 AM Dec 04, 2023 | Team Udayavani |

“ಏನೇ ಆಗಲಿ ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳುತ್ತದೆ” ಎನ್ನುವುದು ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿ ಮತ್ತು ಎಐಸಿಸಿ ವರಿಷ್ಠರ ಮಾತು ಗಳಾಗಿದ್ದವು. ಆದರೆ, ಪ್ರಧಾ ನವಾಗಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ನಡುವಿನ ಭಿನ್ನಮತವೇ ಮರುಭೂಮಿ ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಸೋಲು ಉಂಟಾಗಲು ಕಾರಣವಾಗಿದೆ.

Advertisement

2020ರಿಂದಲೇ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರಕ್ಕೆ ಮುಸುಕಿನಲ್ಲಿ ಗುದ್ದಾಟ ಶುರುವಾಗಿತ್ತು. ಶಾಸಕಾಂಗ ಪಕ್ಷದ ಸಭೆಗೆ ಹಾಜರಿರಬೇಕು ಎಂದು ವಿಪ್‌ ಇದ್ದರೂ ಅದನ್ನು ಉಲ್ಲಂಘಿಸಿ ರೆಸಾರ್ಟ್‌ನಲ್ಲಿ ಶಾಸಕರು ಉಳಿದು ಕೊಂಡಿದ್ದರು. ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರಕಾರರಾಜಸ್ಥಾನದಲ್ಲಿ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ರಾಗಿದ್ದ ವರು ಟೋಂಕ್‌ ಕ್ಷೇತ್ರದ ಶಾಸಕ ಸಚಿನ್‌ ಪೈಲಟ್‌. ಹೀಗಾಗಿ, ಸಹಜವಾಗಿಯೇ ಅವರಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಆಸೆ ಹುಟ್ಟಿಕೊಂಡಿತ್ತು.

ಆದರೆ, ಅದಕ್ಕೆ ಗೆಹ್ಲೋಟ್‌ ಅವಕಾಶವನ್ನೇ ಕೊಟ್ಟಿ ರಲಿಲ್ಲ. ಸರಿ ಸುಮಾರು 20 ಶಾಸಕರು ಸಚಿನ್‌ ಪೈಲಟ್‌ ಜತೆಗೆ ಬಂಡಾಯದ ಬಾವುಟ ಹಾರಿಸಿದ್ದುಂಟು. 2013ರಿಂದ 2018ರ ವರೆಗೆ ಅಧಿಕಾರದಲ್ಲಿ ಇದ್ದ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿತ್ತು ಎಂದು ಹೇಳಲಾಗಿರುವ ಅಕ್ರಮ ಆರೋಪಗಳಿಗೆ ತನಿಖೆ ನಡೆ ಸುವಂತೆ ಸಚಿನ್‌ ಒತ್ತಾಯಿಸುತ್ತಾ ಬಂದಿದ್ದರು. ಕೊಟ್ಟ ಮಾತಿನಂತೆ ನಡೆದು ಕೊಂಡಿಲ್ಲ ಎಂದು ಪ್ರಸಕ್ತ ವರ್ಷದ ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು ಸಚಿನ್‌.

ಅಶೋಕ್‌ ಗೆಹ್ಲೋಟ್‌ ಬಹಿರಂಗವಾಗಿಯೇ ಪಕ್ಷದ ಸಹೋದ್ಯೋಗಿಯ ವರ್ತನೆ ಬಗ್ಗೆ ಅಸಮಾ ಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಸಹಿತ ಪ್ರಮುಖರು ಗೆಹ್ಲೋಟ್‌ ಮತ್ತು ಪೈಲಟ್‌ ನಡುವೆ ರಾಜಿ ಮಾಡಿಸಿದ್ದರೂ, ಪ್ರಯೋಜನವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next