ಜೈಪುರ: “ನೋಡುತ್ತಾ ಇರಿ. ನಮ್ಮ ತಾಲೂಕಿನ ರಸ್ತೆಗಳನ್ನು ಹೇಗೆ ಮಾಡಿಸುತ್ತೇವೆ ಅಂತ. ಸದ್ಯದಲ್ಲೇ ಅವು ಬಾಲಿವುಡ್ ನಟಿ ಕತ್ರಿನಾ ಕೈಫ್ರ ಕೆನ್ನೆಯಂತೆ ನಯವಾಗಿರಲಿವೆ’- ಹೀಗೆಂದು ರಾಜಸ್ಥಾನದ ನೂತನ ಸಚಿವ, ಗುಧಾ ಕ್ಷೇತ್ರದ ಶಾಸಕ ಸಚಿವ ರಾಜೇಂದ್ರ ಗುಧಾ, ತಮ್ಮ ಕ್ಷೇತ್ರದ ಜನರಿಗೆ ಆಶ್ವಾಸನೆ ನೀಡಿದ್ದಾರೆ!
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರ ಸಂಪುಟ ಪುನಾರಚನೆ ವೇಳೆ, ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ರಸ್ತೆಗಳ ದುಃಸ್ಥಿತಿ ಬಗ್ಗೆ ಸಾರ್ವಜನಿಕರು ಪ್ರಸಾವಿಸಿದಾಗ ಅವರು ಹೀಗೆ ಉತ್ತರಿಸಿದರು. ಅದಕ್ಕೆ ಬೆಂಬಲಿಗರಿಂದ ಚಪ್ಪಾಳೆಯ ಸ್ವಾಗತವೂ ಸಿಕ್ಕಿದೆ.
ಇದನ್ನೂ ಓದಿ:ಗರೀಬ್ ಕಲ್ಯಾಣ ವಿಸ್ತರಣೆ: ಪ್ರಧಾನಿಗೆ ನಳಿನ್ ಕುಮಾರ್ ಕಟೀಲ್ ಧನ್ಯವಾದ
ಕೆಲ ವರ್ಷಗಳ ಹಿಂದೆ ರಾಜಕೀಯ ನಾಯಕರು ಬಾಲಿವುಡ್ ನಟಿ, ಸಂಸದೆ ಹೇಮಮಾಲಿನಿ ಕೆನ್ನೆಯಂತೆಯೇ ರಸ್ತೆ ನಿರ್ಮಿಸುವ ವಾಗ್ಧಾನ ನೀಡಿದ್ದರು.