Advertisement

RSS activities; ಸರಕಾರಿ ನೌಕರರಿಗಿದ್ದ ನಿಷೇಧ ಹಿಂತೆಗೆದುಕೊಂಡ ರಾಜಸ್ಥಾನ ಸರಕಾರ

05:45 PM Aug 24, 2024 | Team Udayavani |

ಜೈಪುರ: ಸರಕಾರಿ ನೌಕರರು ಆರ್ ಎಸ್ ಎಸ್(RSS) ಚಟುವಟಿಕೆಗಳಲ್ಲಿ ಭಾಗವಹಿಸುವ ಮೇಲೆ ಹೇರಲಾಗಿದ್ದ ನಿಷೇಧವನ್ನು ರಾಜಸ್ಥಾನದ ಬಿಜೆಪಿ(BJP) ಸರಕಾರ ತೆಗೆದುಹಾಕಿದೆ.

Advertisement

ಹಿಂದಿನ ಆದೇಶಗಳನ್ನು ಉಲ್ಲೇಖಿಸಿ ಸಿಬಂದಿ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಕಾವಿಯಾ ಅವರು 52 ವರ್ಷಗಳ ನಿಷೇಧವನ್ನು ತೆಗೆದುಹಾಕಿರುವ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಸುತ್ತೋಲೆಯ ಪ್ರಕಾರ, 1972 ಮತ್ತು 1981 ರ ಸೂಚನೆಗಳನ್ನು ಪರಿಶೀಲಿಸಿ, ಈ ಹಿಂದೆ ಚಟುವಟಿಕೆಗಳನ್ನು ನಿಷೇಧಿಸಿದ ಸಂಘಟನೆಗಳ ಪಟ್ಟಿಯಿಂದ ಆರ್‌ಎಸ್‌ಎಸ್ ಹೆಸರನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ.

ಈ ಹಿಂದೆ ಕೇಂದ್ರ ಸರಕಾರ ಸರಕಾರಿ ನೌಕರರು ಆರ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ನಿರ್ಬಂಧವನ್ನು ಹಿಂಪಡೆದಿತ್ತು. 1966ರ ನವೆಂಬರ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಿ ಹೇರಲಾಗಿದ್ದ ನಿಷೇಧವನ್ನು ಸಿಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ತೆಗೆದುಹಾಕಿತ್ತು.

ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವಾರು ರಾಜ್ಯ ಸರಕಾಗಳು ಈಗಾಗಲೇ ಸರಕಾರಿ ನೌಕರರು ಆರ್‌ಎಸ್‌ಎಸ್‌ಗೆ ಸಂಬಂಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಿವೆ.

Advertisement

Udayavani is now on Telegram. Click here to join our channel and stay updated with the latest news.

Next