ನವದೆಹಲಿ:ರಾಜಸ್ಥಾನದ ಖಾಸಗಿ ಆಸ್ಪತ್ರೆಯಲ್ಲಿನ ICU ನಲ್ಲಿ ಇದ್ದ ಮಹಿಳೆಯ ಕೈಯನ್ನು ಕಟ್ಟಿ, ಆಸ್ಪತ್ರೆ ಸಿಬಂದಿಯೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.
ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಮಹಿಳೆಯೊಬ್ಬಳನ್ನು ICUನಲ್ಲಿ ಇರಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಆಕೆಯ ಮುಖಕ್ಕೆ ಮಾಸ್ಕ್ ಹಾಕಲಾಗಿದ್ದು, ಆಕೆಯ ಕೈಗಳನ್ನು ಕಟ್ಟಿ ಹಾಕಲಾಗಿತ್ತು, ಘಟನೆಯ ಬಳಿಕ ಸಂತ್ರಸ್ಥೆ ಈ ವಿಚಾರವನ್ನು ಆಸ್ಪತ್ರೆಯ ಇತರ ಸಿಬಂದಿಗಳ ಬಳಿ ತಿಳಿಸಲು ಯತ್ನಿಸಿದ್ದರೂ ಆಕೆಯ ಮೇಲೆ ಬೆದರಿಕೆ ಹಾಕುವ ಮೂಲಕ ಬಾಯಿ ಮುಚ್ಚಿಸಲಾಗಿತ್ತು ಎಂದು ವರದಿಯಾಗಿದೆ.
ಮರುದಿನ ಬೆಳಿಗ್ಗೆ ತನ್ನ ಗಂಡನಲ್ಲಿ ವಿಚಾರವನ್ನು ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬಳಿಕ ಪತಿ ಚಿತ್ರಕೂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಹಿಳೆಯ ಪತಿ ತನ್ನ ಪತ್ನಿಗೆ ಅನಾರೋಗ್ಯವಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ಮಾಡಿ ICUನಲ್ಲಿ ಇಟ್ಟಿದ್ದರು. ಈ ಸಮಯದಲ್ಲಿ ರೋಗಿಯ ಬಳಿ ಯಾರೂ ಇರಬಾರದು ಎಂದು ಆಸ್ಪತ್ರೆಯ ಸಿಬಂದಿ ನನ್ನನ್ನು ಹೊರಗಡೆ ಕಳುಹಿಸಿದ್ದರು. ಹಾಗಾಗಿ ನಾನು ರಾತ್ರಿ ಮನೆಗೆ ತೆರಳಿದ್ದೆ. ಬೆಳಿಗ್ಗೆ ವಾಪಸ್ ಮರಳಿದಾಗ ಪತ್ನಿ ನಡೆದ ಘಟನೆಯನ್ನು ತಿಳಿಸಿದ್ದಾಳೆ ಎಂದಿದ್ದಾರೆ.
Related Articles
ಇದನ್ನೂ ಓದಿ:ಕೋವಿಡ್ ಕೆಲಸ ಮಾಡುವವರಿಗೆ ಇಂದಿನಿಂದ 50 ದಿನಗಳವರೆಗೆ ರಜೆ ಇಲ್ಲ: ಸಚಿವ ಸುಧಾಕರ್
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆಯ ಕುರಿತಾಗಿ ಮಾಹಿತಿ ನೀಡಿರುವ DCP ಪ್ರದೀಪ್ ಮೋಹನ್ ಶರ್ಮ ನಾವು ಈ ವಿಚಾರಕ್ಕೆ ಸಂಬಂಧಿಸಿದಂತೆ CCTV ದೃಶ್ಯಾವಳಿಗಳನ್ನು ಒಳಗೊಂಡಂತೆ ಎಲ್ಲಾ ವಿಧವಾದ ಮಾಹಿತಿಗಳನ್ನು ಕಲೆಹಾಕಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದಿದ್ದಾರೆ.