ನವದೆಹಲಿ: ರಾಜಸ್ಥಾನದ ಭಿಲ್ವಾರದಲ್ಲಿ ಸಾಲ ಮರುಪಾವತಿ ಮಾಡಲಾಗದೇ ಅಥವಾ ಮಾಡಲಿಕ್ಕಾಗಿ ತಮ್ಮ ಹೆಣ್ಣುಮಕ್ಕಳನ್ನೇ ಕೆಲವರು ಹರಾಜು ಹಾಕಿದ ಘಟನೆ ನಡೆದಿದೆ.
ಕೆಲವರು ಮುದ್ರಾ ಪತ್ರದ (ಸ್ಟಾಂಪ್ ಪೇಪರ್) ಮೇಲೆ ಲಿಖಿತವಾಗಿ ಬರೆದು ಸಹಿಹಾಕಿ ವೇಶ್ಯಾವಾಟಿಕೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಸುದ್ದಿ ಬಹಿರಂಗವಾದ ಕೂಡಲೇ ರಾಷ್ಟ್ರೀಯ ಮಹಿಳಾ ಆಯೋಗ ಇಬ್ಬರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿದೆ.
ಈ ಬಗ್ಗೆ ರಾಜಸ್ಥಾನದ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಸರ್ಕಾರಿ ಕಾರ್ಯದರ್ಶಿಗೆ ಪತ್ರ ಬರೆದು ತಕ್ಷಣ ಆರೋಪಿಗಳ ಮೇಲೆ ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಬೇಕೆಂದು ಸೂಚಿಸಿದೆ.
ರಾಜಸ್ಥಾನದ ಪ್ರಕರಣ ಎಷ್ಟು ಅಮಾನವೀಯವಾಗಿದೆಯೆಂದರೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ, ಕೆಲ ಹೆಣ್ಣುಮಕ್ಕಳ ತಾಯಂದಿರನ್ನು ಜಾತಿ ಪಂಚಾಯ್ತಿಗಳಿಗೆ ಸೇರಿದ ವ್ಯಕ್ತಿಗಳು ಅತ್ಯಾಚಾರ ಮಾಡಿದ್ದಾರೆ ಎಂದೂ ಹೇಳಲಾಗಿದೆ.
ಹಾಗೆಯೇ ರಾಷ್ಟ್ರೀಯ ಮಕ್ಕಳ ರಕ್ಷಣಾ ಸಂಸ್ಥೆಯ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ನ.7ರಂದು ಭಿಲ್ವಾರಕ್ಕೆ ಭೇಟಿ ನೀಡಲಿದ್ದಾರೆ.