ಜೈಪುರ:ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಹತ್ಯೆ ಮಾಡಿದ ಆರೋಪಿಗಳಿಬ್ಬರನ್ನು ಶೀಘ್ರ ಬಂಧಿಸಿದ ಪೋಲೀಸರ ತಂಡಕ್ಕೆ ರಾಜಸ್ಥಾನ ಸರಕಾರ ಬಡ್ತಿ ನೀಡಿದೆ.
ತೇಜ್ಪಾಲ್, ನರೇಂದ್ರ, ಶೌಕತ್, ವಿಕಾಸ್ ಮತ್ತು ಗೌತಮ್ ಎಂಬ ಐವರು ಪೊಲೀಸರಿಗೆ ಅವಧಿ ಪೂರ್ವ ಬಡ್ತಿ ನೀಡುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.
ಇದನ್ನೂ ಓದಿ: ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ
ಪ್ರವಾದಿ ಕುರಿತು ವಿವಾದಿತ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಬೆಂಬಲಿಸಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ, ಟೈಲರ್ ಕನ್ಹಯ್ಯಲಾಲ್ ರನ್ನು ಇಬ್ಬರು ಮತಾಂಧರು ಮಂಗಳವಾರ ಶಿರಚ್ಛೇದನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು.