ಜೈಪುರ: ವರದಕ್ಷಿಣೆ ಸಂಪ್ರದಾಯ ಭಾರತದಲ್ಲಿ ನಿಷೇಧವಿದ್ರೂ, ಸಂಪ್ರದಾಯವಾಗಿ ಇನ್ನು ಅನೇಕ ಕಡೆ ಜೀವಂತವಾಗಿದೆ. ವರದಕ್ಷಿಣೆ ನೀಡಿದ್ದಷ್ಟೂ ಕಮ್ಮಿಯೆನ್ನುವ ಈ ದಿನಗಳಲ್ಲಿ ರಾಜಸ್ತಾನದ ನಾಲ್ವರು ಸಹೋದರರು ನೀಡಿದ ವರದಕ್ಷಿಣೆಯ ಮೊತ್ತ ಕೇಳಿದರೆ ಎಂಥಾವರೂ ಬೆಚ್ಚಿಬೀಳುವುದು ಗ್ಯಾರೆಂಟಿ.
ರಾಜಸ್ತಾನದ ನಾಗೌರ್ ಜಿಲ್ಲೆ ಮೈರಾ ಸಂಪ್ರದಾಯದ ಕುಟುಂಬದ ನಾಲ್ವರು ಸಹೋದರರು ತನ್ನ ಪ್ರೀತಿಯ ಸಹೋದರಿಯ ಮದುವೆಗೆ 8 ಕೋಟಿ ರೂ. ವರದಕ್ಷಿಣೆಯನ್ನು ನೀಡಿದ್ದಾರೆ.!
ಅರ್ಜುನ್ ರಾಮ್ ಮೆಹಾರಿಯಾ, ಭಾಗೀರಥ್ ಮೆಹಾರಿಯಾ, ಉಮೈದ್ ಜಿ ಮೆಹಾರಿಯಾ ಮತ್ತು ಪ್ರಹ್ಲಾದ್ ಮೆಹಾರಿಯಾ ಎಂಬ ಸಹೋದರರು ತನ್ನ ಸಹೋದರಿ ಭನ್ವಾರಿ ದೇವಿ ಅವರ ವಿವಾಹವನ್ನು ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿಸಿದ್ದಾರೆ.
ತಂಗಿ ಖುಷಿಯಾಗಿರಲಿ ಎಂದು ಸಹೋದರರು ಆಕೆಗೆ 2.21 ರೂ ನಗದು, 100 ಎಕರೆ ಜಮೀನು( 4 ಕೋಟಿ ರೂ ಮೌಲ್ಯ), ಗುಧಾ ಭಗವಾನದಾಸ್ ಗ್ರಾಮದಲ್ಲಿ 1 ಎಕರೆ ಭೂಮಿ (50 ಲಕ್ಷ ಮೌಲ್ಯ), 71 ಲಕ್ಷ ಬೆಲೆಯ 1 ಕೆಜಿ ಚಿನ್ನ, 9.8 ಲಕ್ಷ ರೂ.ಮೌಲ್ಯದ 14 ಕೆಜಿ ಬೆಳ್ಳಿ, ಹೆಚ್ಚುವರಿಯಾಗಿ, 7 ಲಕ್ಷ ರೂಪಾಯಿ ಬೆಲೆಯ ಟ್ರ್ಯಾಕ್ಟರ್ ನ್ನು ಸಹ ವರದಕ್ಷಿಣೆಯಾಗಿ ನೀಡಿದ್ದಾರೆ.
Related Articles
ಸಹೋದರರು ವರನಿಗೆ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆಯನ್ನು ದಿಂಗ್ಸಾರಾ ಗ್ರಾಮದಿಂದ ರೈಧಾನು ಗ್ರಾಮಕ್ಕೆ ಎತ್ತಿನ ಗಾಡಿಗಳ ಸಹಾಯದಿಂದ ಸಾಗಿಸಲಾಗಿದೆ.
ಇಷ್ಟು ದೊಡ್ಡ ಮಟ್ಟದಲ್ಲಿ ವರದಕ್ಷಿಣೆ ನೀಡಿರುವುದು ಗ್ರಾಮದಲ್ಲಿ ಇದೇ ಮೊದಲು. ಭನ್ವಾರಿ ದೇವಿ ವಿವಾಹದ ಬಗ್ಗೆ ಗ್ರಾಮದಲ್ಲಿ ಭಾರೀ ಚರ್ಚೆಯಾಗಿದೆ.