Advertisement

ಸೇನಾ ಶ್ವಾನ ಡಚ್‌ ನಿಧನಕ್ಕೆ ರಾಜನಾಥ್‌ ಸಿಂಗ್‌ ಸಂತಾಪ

10:23 AM Sep 17, 2019 | sudhir |

ನವದೆಹಲಿ: ಭಾರತೀಯ ಸೇನೆಯ ಬಾಂಬ್‌ ನಿಷ್ಕ್ರಿಯ ದಳದಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ “ಡಚ್‌’ ಎಂಬ ನಾಯಿ, ಭಾನುವಾರ ಅಸುನೀಗಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶೋಕ ವ್ಯಕ್ತಪಡಿಸಿದ್ದಾರೆ.

Advertisement

ರಕ್ಷಣಾ ಸಚಿವರ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಪ್ರಕಟಿಸಲಾ ಗಿರುವ ಸಂದೇಶದಲ್ಲಿ, “”ರಕ್ಷಣಾ ಸಚಿವರು, ಡಚ್‌’ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಸುಧಾರಿತ ಸ್ಫೋಟಕ ಸಾಮಗ್ರಿಗಳನ್ನು ಪತ್ತೆ ಹಚ್ಚುವುದರಲ್ಲಿ ನಿಷ್ಣಾತವಾಗಿದ್ದ “ಡಚ್‌’, ವರ್ಷಗಳ ಕಾಲ ತಾನು ಸಲ್ಲಿಸಿದ ಸೇವೆಗಾಗಿ ಈಸ್ಟರ್ನ್ ಕಮಾಂಡ್‌ ಎಂಬ ಗೌರವವನ್ನೂ ಪಡೆದಿತ್ತು. ಅದರ ಸೇವೆ ಸದಾ ಸ್ಮರಣೀಯ” ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next